ಬಾಲಿವುಡ್‌ನ್ನು ಆಳುತ್ತಿದ್ದಾನೆ ಈ ಪುಟ್ಟ ಬಾಲಕ: ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ಊಹಿಸಬಲ್ಲಿರಾ?

ಕೈ ಎತ್ತಿ ಮೋಜು ಮಸ್ತಿಯಲ್ಲಿ ಕುಣಿದಾಡುತ್ತಿರುವ ಈ ಮಗು ಇಂದು ಬಾಲಿವುಡ್ ಲೋಕದ ದೊಡ್ಡ ಸ್ಟಾರ್‌. ಈ ಮಗು ಈಗ ಬೆಳೆದು ತನ್ನ ನಟನೆಯಿಂದ ಜನರನ್ನು ಹುಚ್ಚೆಬ್ಬಿಸುತ್ತಿದ್ದಾನೆ. ಇಂದು ಈ ಮಗುವಿನ ಹುಟ್ಟುಹಬ್ಬವೂ ಹೌದು. ಈ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಮಗು ಬೇರೆ ಯಾರೂ ಅಲ್ಲ, ಅವರೇ ರಣವೀರ್‌ ಸಿಂಗ್‌. ಇವರ ಈ ಚಿತ್ರವನ್ನು ನೋಡಿದರೆ, ನಟ ಬಾಲ್ಯದಿಂದಲೂ ಎಷ್ಟು ತುಂಟನಂತೆ ಇದ್ದಾರೆ ಎಂಬ ಕಲ್ಪನೆ ನಿಮ್ಮಲ್ಲಿ ಬರಬಹುದು.

Written by - Bhavishya Shetty | Last Updated : Jul 6, 2022, 12:54 PM IST
  • ಬಾಲಿವುಡ್‌ ಸೂಪರ್‌ಸ್ಟಾರ್‌ನ ಬಾಲ್ಯದ ಫೋಟೋ ವೈರಲ್‌
  • ಮುದ್ದಾಗಿ ಆಟವಾಡುತ್ತಿರುವ ಫೋಟೋ
  • ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಬಾಲ್ಯದ ಫೋಟೋ
ಬಾಲಿವುಡ್‌ನ್ನು ಆಳುತ್ತಿದ್ದಾನೆ ಈ ಪುಟ್ಟ ಬಾಲಕ: ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ಊಹಿಸಬಲ್ಲಿರಾ? title=
Ranveer Singh

ಸಾಮಾನ್ಯವಾಗಿ ಬಾಲಿವುಡ್ ಸ್ಟಾರ್‌ಗಳ ಬಾಲ್ಯದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಆದರೆ ಅದರಲ್ಲಿ ಅನೇಕರನ್ನು ಯಾರೆಂದು ಗುರುತಿಸುವುದು ಕಷ್ಟವಾಗುತ್ತದೆ. ಅಂತಹದ್ದೇ ಒಂದು ಫೋಟೋ ಇದೀಗ ವೈರಲ್‌ ಆಗಿದೆ. ಈ ಫೋಟೋವನ್ನು ನೋಡುವಾಗ ತಕ್ಷಣಕ್ಕೆ ಬಾಲಿವುಡ್‌ನ ಯಾವ ನಟ ಎಂದು ಊಹಿಸೋದು ಕಷ್ಟವಾಗುತ್ತದೆ. ಈ ಮಗುವಿನ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆಯೇ ಹಾಗಾದ್ರೆ ಈ ಸುದ್ದಿ ಓದಿ. 

ಇದನ್ನೂ ಓದಿ: ಕಳಪೆ ಫಾರ್ಮ್‌ನಲ್ಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರರು: ಇವರಿಗೆ ನಿವೃತ್ತಿಯೇ ಕೊನೆ ಆಯ್ಕೆ!

ಕೈ ಎತ್ತಿ ಮೋಜು ಮಸ್ತಿಯಲ್ಲಿ ಕುಣಿದಾಡುತ್ತಿರುವ ಈ ಮಗು ಇಂದು ಬಾಲಿವುಡ್ ಲೋಕದ ದೊಡ್ಡ ಸ್ಟಾರ್‌. ಈ ಮಗು ಈಗ ಬೆಳೆದು ತನ್ನ ನಟನೆಯಿಂದ ಜನರನ್ನು ಹುಚ್ಚೆಬ್ಬಿಸುತ್ತಿದ್ದಾನೆ. ಇಂದು ಈ ಮಗುವಿನ ಹುಟ್ಟುಹಬ್ಬವೂ ಹೌದು. ಈ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಮಗು ಬೇರೆ ಯಾರೂ ಅಲ್ಲ, ಅವರೇ ರಣವೀರ್‌ ಸಿಂಗ್‌. ಇವರ ಈ ಚಿತ್ರವನ್ನು ನೋಡಿದರೆ, ನಟ ಬಾಲ್ಯದಿಂದಲೂ ಎಷ್ಟು ತುಂಟನಂತೆ ಇದ್ದಾರೆ ಎಂಬ ಕಲ್ಪನೆ ನಿಮ್ಮಲ್ಲಿ ಬರಬಹುದು.

1985 ರಲ್ಲಿ ಜನಿಸಿದ ರಣವೀರ್‌ ಸಿಂಗ್‌, 2010 ರಲ್ಲಿ ಬಿಡುಗಡೆಯಾದ 'ಬ್ಯಾಂಡ್ ಬಾಜಾ ಬಾರಾತ್' ಎಂಬ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟರು. ಚಿತ್ರವು ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿವರೆಗೆ ಇವರು ಮಾಡಿರುವ ಎಲ್ಲಾ ಸಿನಿಮಾಗಳು ಸಖತ್‌ ಹೆಸರು ತಂದುಕೊಟ್ಟಿವೆ ಎಂದರೆ ತಪ್ಪಾಗಲ್ಲ. 

ಇದನ್ನೂ ಓದಿ: Stock market: ಹೂಡಿಕೆದಾರರನ್ನು ಕೋಟ್ಯಾಧಿಪತಿ ಮಾಡಿದ 5 ರೂ. ಷೇರು..!

ರಣವೀರ್ ಸಿಂಗ್ ಇತ್ತೀಚೆಗೆ 'ಜಯೇಶ್‌ಭಾಯ್ ಜೋರ್ದಾರ್' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಅಷ್ಟೇನು ಯಶಸ್ಸು ಕಂಡಿಲ್ಲವಾದರು ಸಹ ರಣವೀರ್‌ಗೆ ಸಖತ್‌ ಹೆಸರು ತಂದುಕೊಟ್ಟಿದೆ. ಸದ್ಯ ರಣವೀರ್ ಸಿಂಗ್ ನಿರ್ದೇಶಕ ರೋಹಿತ್ ಶೆಟ್ಟಿ ಅಭಿನಯದ ಕಾಮಿಡಿ ಸಿನಿಮಾ 'ಸರ್ಕಸ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್ ಅಭಿನಯದ ನಿರ್ದೇಶಕ ಶಂಕರ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಅಣ್ಣಿಯಾನ್‌ನ ಹಿಂದಿ ರಿಮೇಕ್‌ನಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣವೀರ್ ಆಲಿಯಾ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News