Ramya: ಮೋಹಕ ತಾರೆ ರಮ್ಯಾ ಮತ್ತೇ ಬಣ್ಣ ಹಚ್ಚೋದು ಕನ್ಫರ್ಮ್..!?

ರಮ್ಯಾ ಮೇಡಂ ಇತ್ತೀಚಿಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಸ್ಥಾಪಿಸೋ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದರು.

Written by - YASHODHA POOJARI | Edited by - Puttaraj K Alur | Last Updated : Sep 29, 2022, 10:51 AM IST
  • ಕೋಟ್ಯಂತರ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಮೋಹಕ ತಾರೆ ರಮ್ಯಾ
  • ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಂತೆ ಸ್ಯಾಂಡಲ್‍ವುಡ್ನ ಪದ್ಮಾವತಿ
  • ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಮ್ಯಾ
Ramya: ಮೋಹಕ ತಾರೆ ರಮ್ಯಾ ಮತ್ತೇ ಬಣ್ಣ ಹಚ್ಚೋದು ಕನ್ಫರ್ಮ್..!? title=
ಖುಷಿ ಸುದ್ದಿ ನೀಡಿದ ಮೋಹಕ ತಾರೆ ರಮ್ಯಾ

ಬೆಂಗಳೂರು: ಮೋಹಕ ತಾರೆ ರಮ್ಯಾ…. ಎಷ್ಟೂ ನೋಡಿದ್ರೂ ಮತ್ತೆ ಮತ್ತೆ ನೋಡಲೇಬೇಕೆನಿಸುವ ಸೌಂದರ್ಯವತಿ. ಸಾಲು ಸಾಲು ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳ ದಿಲ್ ಖುಷ್ ಆಗಿಸಿದ್ದ ರಮ್ಯಾ ಮತ್ತೆ ಯಾವಾಗ ಸಿನಿಮಾ ಮಾಡ್ತಾರೆ? ಯಾವಾಗ ಅವರನ್ನು ಮತ್ತೆ ತೆರೆಮೇಲೆ ನೋಡೋದು ಅನ್ನೋ ಪ್ರಶ್ನೆ ಲಕ್ಷಾಂತರ ಅಭಿಮಾನಿಗಳ ಪ್ರಶ್ನೆಯಾಗೇ ಉಳಿದಿದೆ.

ರಾಜಕೀಯ ಎಂಟ್ರಿ ಬಳಿಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರೋ ರಮ್ಯಾ ಮೇಡಂ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ. ಸ್ಯಾಂಡಲ್‍ವುಡ್‍ನ ಸ್ಟಾರ್‍ಗಳು ಮತ್ತು ಹೊಸಬರಿಗೆ ಆಗಾಗ ಸಪೋರ್ಟ್ ಮಾಡುವ ಮೂಲಕ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಯಾವುದೇ ಟ್ರೈಲರ್‍ಗಳು, ಹಾಡುಗಳು ರಿಲೀಸ್ ಆದಾಗಲೂ ಮೋಹಕ ತಾರೆಯ ಬೆಂಬಲ ಫಿಕ್ಸ್ ಆಗಿರುತ್ತೆ.

ಇದನ್ನೂ ಓದಿ: ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್

ರಮ್ಯಾ ಮೇಡಂ ಇತ್ತೀಚಿಗೆ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕೊಟ್ಟಿದ್ದರು. ಅದೇನಂದರೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಸ್ಥಾಪಿಸೋ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಆದರೆ ಅಭಿಮಾನಿಗಳ ಆಸೆ ಏನು ಅಂದ್ರೆ, ನಾವು ಮೋಹಕ ತಾರೆಯನ್ನು ತೆರೆ ಮೇಲೆ ನೋಡಲೇಬೇಕು ಅನ್ನೋದು.

ಹೀಗಾಗಿ ಯಾವಾಗ ಮತ್ತೇ ಬಣ್ಣ ಹಚ್ಚುತ್ತೀರಾ ರಮ್ಯಾ ಮೇಡಂ ಅಂತಾ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಕಾಮೆಂಟ್‍ಗಳ ಮೂಲಕ ಕೇಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಅಭಿಮಾನಿಗಳು ಇದಕ್ಕಿಂತ ಹೆಚ್ಚಾಗಿ ನೀವು ಯಾವಾಗ ಮದುವೆ ಆಗ್ತೀರಾ? ಯಾರೂ ನಿಮ್ಮ ಕನಸಿನ ಪತಿ? ಅನ್ನೋ ಪ್ರಶ್ನೆ ಕೂಡ ಕೇಳುತ್ತಿರುತ್ತಾರೆ. ಇದಕ್ಕೆಲ್ಲಾ ಒಮ್ಮೊಮ್ಮೆ ಹಾಸ್ಯಮಯವಾಗೇ ಮೋಹಕ ತಾರೆ ಉತ್ತರಿಸಿತ್ತಾರೆ.

ಇದನ್ನೂ ಓದಿ: ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..!

ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕದ್ದ ಪದ್ಮಾವತಿ ಈಗ ರಾಜಕೀಯದಿಂದಲೂ ದೂರ ಉಳಿದಿದ್ದಾರೆ. ಆದರೆ ರಮ್ಯಾ ಅವರೇ ವಾಟ್ ನೆಕ್ಸ್ಟ್ ಅನ್ನೋ ಅಭಿಮಾನಿಗಳ ಕನಸಿನ ಪ್ರಶ್ನೆಗೆ  ಅತೀ ಶೀಘ್ರವೇ ಉತ್ತರಿಸಲಿದ್ದಾರಂತೆ. ಹೊಸ ಅಪ್‍ಡೇಟ್ ಪ್ರಕಾರ ಈ ಸ್ಯಾಂಡಲ್‍ವುಡ್‍ ಸುಂದರಿ ಶೀಘ್ರವೇ ಮತ್ತೆ ಬಣ್ಣ ಹಚ್ಚಲಿದ್ದಾರಂತೆ.

ರಮ್ಯಾ ಯಾವತ್ತಿಗೂ ಪ್ರತಿಯೊಬ್ಬರ ಡ್ರೀಮ್ ಗರ್ಲ್. ಅವರ ನೇರ ನುಡಿ, ಮುನಿಸು, ಕ್ಯೂಟ್ ಮಾತುಗಳು ಬೇಗ ಪ್ರತಿಯೊಬ್ಬರನ್ನು ಅಟ್ರಾಕ್ಟ್ ಮಾಡುತ್ತವೆ. ಎನಿ ವೇ ರಮ್ಯಾ ಮೇಡಂ ಬೇಗ ಬಣ್ಣ ಹಚ್ಚಿ. ನಿಮಗಿರುವ ಕೋಟಿ ಕೋಟಿ ಅಭಿಮಾನಿಗಳನ್ನು ರಂಜಿಸಿ ಅನ್ನೋದೇ ಕಳಕಳಿಯ ವಿನಂತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News