ಚೆಫ್‌ ಚಿದಂಬರನ ಜೊತೆ ಲವ್‌ ಮಾಕ್ಟೆಲ್‌ ಸಿಹಿ: ರೆಚಲ್ ಡೇವಿಡ್ ಮಸ್ತ್ ಲುಕ್ ರಿವೀಲ್!

Chef Chidambara Update: ಚೆಫ್‌ ಚಿದಂಬರ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಅತೀ ಶೀಘ್ರದಲ್ಲಿಯೇ ಸಿನಿಮಾ ತೆರೆಗೆ ತರುವುದಕ್ಕೆ ಪ್ಲಾನ್ ಮಾಡಿರುವುದರ ಮಧ್ಯೆ ಚಿತ್ರದ ನಾಯಕಿ ರೆಚಲ್ ಡೇವಿಡ್ ಪಾತ್ರದ ಫಸ್ಟ್ ಲುಕ್ ಕೂಡ ರಿವಿಲ್‌ ಮಾಡಿದ್ದಾರೆ.   

Written by - Zee Kannada News Desk | Last Updated : Dec 27, 2023, 11:34 AM IST
  • ಚೆಫ್ ಚಿದಂಬರ ಚಿತ್ರವನ್ನ ಅತೀ ಶೀಘ್ರದಲ್ಲಿಯೇ ತೆರೆಗೆ ತರುವುದಕ್ಕೆ ಪ್ಲಾನ್ ಮಾಡಿದ್ದು, ಇದರ ಮಧ್ಯೆ ಚಿತ್ರದ ನಾಯಕಿ ರೆಚಲ್ ಡೇವಿಡ್ ಪಾತ್ರದ ಫಸ್ಟ್ ಲುಕ್ ಕೂಡ ರಿವಿಲ್‌ ಮಾಡಿದ್ದಾರೆ.
  • ನಟಿ ರೆಚಲ್ ಡೇವಿಡ್‌ಗೆ ಅನು ಹೆಸರಿನ ಪಾತ್ರದಲ್ಲಿನ ಲುಕ್ ಸಖತ್ ಆಗಿಯೇ ಇರುವುದರ ಜೊತೆಗೆ ಸ್ಟೈಲಿಶ್ ಆಗಿಯೂ ಇದೆ.
  • 2022ರಲ್ಲಿ ತೆರೆಕಂಡ ಲವ್ ಮಾಕ್ಟೆಲ್ 2 ಚಿತ್ರದಲ್ಲಿ ರೆಚಲ್ ಡೇವಿಡ್ ಸಿಹಿ ಪಾತ್ರದಲ್ಲಿ ಅಭಿನಯಿಸಿದ್ದು, ಬಳಿಕ ರೆಚಲ್ ಡೇವಿಡ್ ಲವ್ ಮಾಕ್ಟೆಲ್ ನಟಿ ಅಂತಲೇ ಗುರುತಿಸಿಕೊಂಡರು.
ಚೆಫ್‌ ಚಿದಂಬರನ ಜೊತೆ ಲವ್‌ ಮಾಕ್ಟೆಲ್‌ ಸಿಹಿ: ರೆಚಲ್ ಡೇವಿಡ್ ಮಸ್ತ್ ಲುಕ್ ರಿವೀಲ್! title=

Rachel David First Look Reveal: ಅನಿರುದ್ದ್ ಜತ್ಕರ್ ಅಭಿನಯದ ಚೆಫ್‌ ಚಿದಂಬರ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾದ ನಿರ್ದೇಶಕ ಎಂ.ಆನಂದ್‌ರಾಜ್ ಸದ್ಯ  ಪೋಸ್ಟ್‌ ಪ್ರೋಡಕ್ಷನ್‌ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಮೂಲಕ ಚೆಫ್ ಚಿದಂಬರ ಚಿತ್ರವನ್ನ ಅತೀ ಶೀಘ್ರದಲ್ಲಿಯೇ ತೆರೆಗೆ ತರುವುದಕ್ಕೆ ಪ್ಲಾನ್ ಮಾಡಿದ್ದು, ಇದರ ಮಧ್ಯೆ ಚಿತ್ರದ ನಾಯಕಿ ರೆಚಲ್ ಡೇವಿಡ್ ಪಾತ್ರದ ಫಸ್ಟ್ ಲುಕ್ ಕೂಡ ರಿವಿಲ್‌ ಮಾಡಿದ್ದಾರೆ. 

ಚೆಫ್‌ ಚಿದಂಬರ ಸಿನಿಮಾದ ಅಧಿಕೃತವಾಗಿಯೇ ರೆಚಲ್‌ ಡೆವಿಡ್‌ ಇರೋ ರಿಲೀಸ್ ಆಗಿರೋ ಫೊಸ್ಟರ್ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ನಟಿ ರೆಚೆಲ್ ಡೇವಿಡ್ ಕನ್ನಡದ ಚೆಫ್ ಚಿದಂಬರ ಸಿನಿಮಾಗೆಬ ಆಯ್ಕೆ ಆಗಿದ್ದು, ಇವರು ಅನು ಅನ್ನುವ ಪಾತ್ರವನ್ನೂ ನಿರ್ವಹಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rachel David (@racheldavidofficial)

ಇದನ್ನೂ ಓದಿ: ಶಾರುಖ್ ಅವರ 'ಡಂಕಿ' ವೇಗವನ್ನು ಹೆಚ್ಚಿಸಿದೆ, ಆರನೇ ದಿನ ಗಳಿಕೆ ಎಷ್ಟು ಗೊತ್ತಾ..?

ನಟಿ  ರೆಚಲ್ ಡೇವಿಡ್‌ಗೆ ಅನು ಹೆಸರಿನ ಪಾತ್ರದಲ್ಲಿನ ಲುಕ್ ಸಖತ್ ಆಗಿಯೇ ಇರುವುದರ ಜೊತೆಗೆ ಸ್ಟೈಲಿಶ್ ಆಗಿಯೂ ಇದೆ. ಚೆಫ್‌ ಚಿದಂಬರ ಚಿತ್ರದ ಈ ಒಂದು ಲುಕನ್ನ ಸಿನಿಮಾ ತಂಡವೇ ರಿವೀಲ್ ಮಾಡಿದ್ದು, ಈ ಮೂಲಕ ರೆಚೆಲ್ ಡೇವಿಡ್ ಪಾತ್ರದ ಫಸ್ಟ್ ಲುಕ್ ಕೂಡ ಬಿಟ್ಟುಕೊಟ್ಟಿದೆ ಅಂತಲೇ ಹೇಳಬಹುದು.

2022ರಲ್ಲಿ ತೆರೆಕಂಡ ಲವ್ ಮಾಕ್ಟೆಲ್ 2  ಚಿತ್ರದಲ್ಲಿ ರೆಚಲ್ ಡೇವಿಡ್  ಸಿಹಿ ಪಾತ್ರದಲ್ಲಿ ಅಭಿನಯಿಸಿದ್ದು, ಬಳಿಕ ರೆಚಲ್ ಡೇವಿಡ್ ಲವ್ ಮಾಕ್ಟೆಲ್ ನಟಿ ಅಂತಲೇ ಗುರುತಿಸಿಕೊಂಡರು. ಚೆಫ್‌ ಚಿದಂಬರ ಸಿನಿಮಾದಲ್ಲಿ ಇನ್ನೂ ದೊಡ್ಡ ತಾರಾಂಗಣವಿದ್ದು, ಅದರಲ್ಲಿ ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ, ಕೆ.ಎಸ್.ಶ್ರೀಧರ್ ನಟಿಸಿದ್ದಾರೆ. ಇವರೆಲ್ಲ ಈ ಚಿತ್ರ ಅತಿ ಶೀಘ್ರದಲ್ಲಿಯೇ ತೆರೆಗೆ ಬರೋ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಅಂತಲೇ ಹೇಳಬಹುದು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News