ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ : ಪ್ರಭಾಸ್‌ ಜೊತೆಗಿನ ಫೋಟೋ ರಹಸ್ಯ ಬಯಲು..!

ಪ್ರಶಾಂತ್ ನೀಲ್ ಸಾರಥ್ಯದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ..! ಹೌದು ಈ ರೀತಿಯ ಸುದ್ದಿ ಸಮಾಚಾರ ಟಾಲಿವುಡ್‌ನಲ್ಲಿ ಗುಲ್ಲಾಗಿದೆ, ಸ್ಯಾಂಡಲ್​ವುಡ್​​​ನಲ್ಲೂ ಈ ಮ್ಯಾಟರ್‌ ಸದ್ದು ಮಾಡ್ತಿದೆ. ಇದಕ್ಕೆ ಕಾರಣ ಟಾಲಿವುಡ್ ಬಾಹುಬಲಿ ಪ್ರಭಾಸ್ ಜೊತೆ ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಇರುವ ಫೋಟೋ.

Written by - YASHODHA POOJARI | Edited by - Krishna N K | Last Updated : Oct 1, 2022, 02:19 PM IST
  • ಪ್ರಶಾಂತ್ ನೀಲ್ ಸಾರಥ್ಯದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ
  • ಟಾಲಿವುಡ್‌ನಲ್ಲಿ ಗುಲ್ಲಾಗಿದೆ, ಸ್ಯಾಂಡಲ್​ವುಡ್​​​ನಲ್ಲೂ ಈ ಮ್ಯಾಟರ್‌
  • ಕ್ರಾಸ್ ಚೆಕ್ ಮಾಡ್ದಾಗ ಚಿಕ್ಕಣ್ಣ ಎಂದ್ರು ನೋ ವೇ ಚಾನ್ಸೇ ಇಲ್ಲಾ
ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ : ಪ್ರಭಾಸ್‌ ಜೊತೆಗಿನ ಫೋಟೋ ರಹಸ್ಯ ಬಯಲು..! title=

ಬೆಂಗಳೂರು : ಪ್ರಶಾಂತ್ ನೀಲ್ ಸಾರಥ್ಯದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ..! ಹೌದು ಈ ರೀತಿಯ ಸುದ್ದಿ ಸಮಾಚಾರ ಟಾಲಿವುಡ್‌ನಲ್ಲಿ ಗುಲ್ಲಾಗಿದೆ, ಸ್ಯಾಂಡಲ್​ವುಡ್​​​ನಲ್ಲೂ ಈ ಮ್ಯಾಟರ್‌ ಸದ್ದು ಮಾಡ್ತಿದೆ. ಇದಕ್ಕೆ ಕಾರಣ ಟಾಲಿವುಡ್ ಬಾಹುಬಲಿ ಪ್ರಭಾಸ್ ಜೊತೆ ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಇರುವ ಫೋಟೋ.

ಸ್ಯಾಂಡಲ್​​ವುಡ್​​ನ ನಗೆ ವೀರ ಚಿಕ್ಕಣ್ಣ ಈಗ ಉಪಾಧ್ಯಕ್ಷ ಸಿನಿಮಾದ ಮೂಲಕ ಹೀರೋ ಆಗಿ ಶೂಟಿಂಗ್​​ನಲ್ಲಿ ಡ್ಯುಯೆಟ್ ಹಾಡ್ತಾ ಬ್ಯುಸಿಯಾಗಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ರಾಂಬೊ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದಲ್ಲಿ ಉಪಾದ್ಯಕ್ಷ ಸಿನಿಮಾ ಮೂಡಿ ಬರುತ್ತಿದೆ. ವಿಷಯ ಹಿಂಗಿರುವಾಗ ಟಾಲಿವುಡ್​ ಸುದ್ದಿ ಜಾಲಗಳು ಬಾಹುಬಲಿ ನಟ ಡಾರ್ಲಿಂಗ್ ಪ್ರಭಾಸ್ ಮತ್ತು ಚಿಕ್ಕಣ್ಣ ಒಟ್ಟಿಗೆ ಇರೋ ಫೋಟೋವನ್ನ ವೈರಲ್ ಮಾಡ್ತಾ ಇದ್ದಾರೆ.

ಇದನ್ನೂ ಓದಿ: ಬಿಎಸ್‌ವೈ ಸೇರಿದಂತೆ ಅನೇಕ ಗಣ್ಯರಿಂದ ಶಬ್ಬಾಸ್‌ಗಿರಿ ಪಡೆದ ʼಗುರು ಶಿಷ್ಯರುʼ..ʻ!
 
ಪ್ರಭಾಸ್ ಜೊತೆ ಚಿಕ್ಕಣ್ಣ..! ಯಾಕೆ..? ಎಲ್ಲಿ..? ಮತ್ತು ಹೇಗೆ..? ಅನ್ನೋದೆ ಇಂಟ್ರಸ್ಟಿಂಗ್.. ಟಾಲಿವುಡ್ ನೆಟ್ಟಿಗರು ಸಲಾರ್ ಸಿನಿಮಾದಲ್ಲಿ ಕನ್ನಡ ಕಾಮಿಡಿ ಸ್ಟಾರ್ ಚಿಕ್ಕಣ್ಣಗಾರು ನಟಿಸ್ತುನಾರು ಅಂತ ಗಾಳಿಯಲ್ಲಿ ಗುಂಡಾರಿಸುತ್ತಿದ್ದಾರೆ. ಹೌದಾ..? ಚಿಕ್ಕಣ್ಣ ಸಲಾರ್‌ನಲ್ಲಿ ನಟಿಸಿದ್ದಾರಾ? ನಾವು ಕ್ರಾಸ್ ಚೆಕ್ ಮಾಡ್ದಾಗ ನೋ ವೇ ಚಾನ್ಸೇ ಇಲ್ಲಾ ಅಂತ ಸ್ವತಃ ಚಿಕ್ಕಣ್ಣ ಅವರೇ ಸ್ಪಷ್ಟಿಕರಣ ನೀಡಿದ್ದಾರೆ. ಹಿಂದೊಮ್ಮೆ ಪಾರ್ಟಿಯಲ್ಲಿ ಸಿಕ್ಕಾಗ ನಾನು ಪ್ರಭಾಸ್ ಸರ್ ಫೋಟೋ ತೆಗೆಸಿಕೊಂಡಿದ್ದೇವೆ. ಈಗ್ಯಾಕೆ ಈ ಫೋಟೋ ವೈರಲ್ ಆಗ್ತಿದೆ ಅಂತ ನಂಗೆ ಗೊತ್ತಿಲ್ಲ ಅಂದಿದ್ದಾರೆ. 

ಇದನ್ನೂ ಓದಿ: ಹಾಲಿವುಡ್ ಶೈಲಿಯ ‘ಮರ್ಡರ್ ಲೈವ್’ನಲ್ಲಿ ಕನ್ನಡತಿ ಶರ್ಮಿಳಾ ಮಾಂಡ್ರೆ ನಟನೆ..!

ಸಲಾರ್​ನಲ್ಲಿ ಪ್ರಭಾಸ್ ಜೊತೆ ಚಿಕ್ಕಣ್ಣ ನಟಿಸೋದು ಸುಳ್ಳು. ಆದ್ರೆ ಅಭಿಮಾನಿಗಳಿಗೆ ಅಯ್ಯೋ ಇದು ನಿಜ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಬೆಜಾರ್ ಮಾಡ್ಕೋಳ್ತಾ ಇದ್ದಾರೆ. ಚಿಕ್ಕಣ್ಣನಿಗಿರೋ ವಿಶೇಷ ನಟನಾ ಕೌಶಲ್ಯ ನಿಜಕ್ಕೂ ಅದ್ಭುತ ಅಂತನೇ ಹೇಳಬಹುದು. ಕನ್ನಡ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಸ್ಟಾರ್ ನಟರ ಸಿನಿಮಾದಲ್ಲಿ ಚಿಕ್ಕಣ್ಣ ಇಲ್ಲ ಅಂದ್ರೆ ಜನ ಛೇ ಚಿಕ್ಕಣ್ಣ ಇದ್ರೆನೇ ಮಜಾ ಅಂತಾರೆ.ಆ ಲೆವೆಲ್ಲಿಗೆ ಹವಾ ಇಟ್ಟಿದ್ದಾರೆ ಕಾಮಿಡಿ ಕಿಂಗ್ ಚಿಕ್ಕಣ್ಣ.

ಇದೀಗ ಮೊದಲ ಬಾರಿ ನಾಯಕನಾಗಿ ತೆರೆಗೆ ಎಂಟ್ರಿ ಕೊಡಲು ಭರ್ಜರಿಯಾಗಿ ಸಿದ್ಧತೆ ನಡೆಸಿ ಶೂಟಿಂಗ್ನಲ್ಲೂ ಬ್ಯುಸಿಯಾಗಿದ್ದಾರೆ ಚಿಕ್ಕಣ್ಣ.ಸೋ ಚಿಕ್ಕಣ್ಣ ಇನ್ನಷ್ಟು ಸಿನಿಮಾಗಳಲ್ಲಿ ನಟಿಸಲಿ ಅನ್ನೋದೇ ನಮ್ಮ ಆಶಯ.ಬರೀ ಸ್ಯಾಂಡಲ್ವುಡ್ ನಲ್ಲಿ ಅಷ್ಟೇ ಅಲ್ಲದೇ ಹೊರಭಾಗದಲ್ಲೂ ಇವರ ಪ್ರತಿಭೆಯ ಘಮಲು ಪಸರಿಸಲಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News