ʼಚಿತ್ತಾರ ಸ್ಟಾರ್ ಅವಾರ್ಡ್ಸ್-2024ʼ : ನಟ ದರ್ಶನ್‌ಗೆ ʼಅತ್ಯುತ್ತಮ ನಟ ಪ್ರಶಸ್ತಿʼ..

Best actor award to Darshan : ಕಾಟೇರ ಚಿತ್ರದ ನಿರ್ದೇಶನಕ್ಕಾಗಿ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ ಇದೇ ಚಿತ್ರಕ್ಕೆ ನಟ ದರ್ಶನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ʼಸಪ್ತ ಸಾಗರಾದಾಚೆ ಎಲ್ಲೋʼ ಚಿತ್ರದ ಅಭಿನಯಕ್ಕಾಗಿ ನಟಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ಇದೇ ಚಿತ್ರದ ಸಂಗೀತಕ್ಕಾಗಿ ಚರಣ್ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ..

Written by - Krishna N K | Last Updated : Jun 21, 2024, 07:46 PM IST
    • ದರ್ಶನ್ ಅತ್ಯುತ್ತಮ ನಟ, ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ
    • 23 ವಿಭಾಗಗಳು, 276 ಸ್ಫರ್ಧಿಗಳು, 15ಕ್ಕಿಂತಲೂ ಹೆಚ್ಚು ʼಚಿತ್ತಾರ ವಿಶೇಷ ಪ್ರಶಸ್ತಿʼಗಳು
    • ಓಟಿಂಗ್ ಮೂಲಕ 13,49,423 ಸಿನಿ ಪ್ರೇಮಿಗಳು ಭಾಗಿ
 ʼಚಿತ್ತಾರ ಸ್ಟಾರ್ ಅವಾರ್ಡ್ಸ್-2024ʼ : ನಟ ದರ್ಶನ್‌ಗೆ ʼಅತ್ಯುತ್ತಮ ನಟ ಪ್ರಶಸ್ತಿʼ.. title=

ಬೆಂಗಳೂರು : ʼಚಿತ್ತಾರ' ಮಾಸ ಪತ್ರಿಕೆ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಸಲುವಾಗಿ, ಈ ಹಿಂದೆ ಚಿತ್ತಾರ ಶಾರ್ಟ್ ಫಿಲ್ಮ್ ಅವಾರ್ಡ್ಸ್, ಅಭಿಮಾನಿಯೊಂದಿಗೆ ತಾರೆ, ಎ ಡೇ ವಿತ್ ಸ್ಟಾರ್...  ಹೀಗೆ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಚಂದನವನದ ತಾರೆಯರು ಮತ್ತು ತೆರೆ ಹಿಂದೆ ಕೆಲಸ ಮಾಡುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಅದ್ಭುತ ವೇದಿಕೆಯೊಂದನ್ನು 2019ರಲ್ಲಿ ʼಚಿತ್ತಾರ ಸ್ಟಾರ್ ಅವಾರ್ಡ್ಸ್ʼ ಎಂಬ ವಿಭಿನ್ನ ವರ್ಣರಂಜಿತ ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮ ನೀಡಿ ಇತಿಹಾಸ ಸೃಷ್ಟಿಸಿತ್ತು.

ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯಲು `ಚಿತ್ತಾರ ಸ್ಟಾರ್ ಅವಾರ್ಡ್ಸ್’ ವೇದಿಕೆಯಾಗಬೇಕೆಂಬ ಚಿತ್ತಾರದ ಆಶಯ ಈಡೇರಿದ್ದು, ಸ್ಯಾಂಡಲ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಶಿಸಿ ಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡಲಾಗಿದೆ. 2023ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು ʼಚಿತ್ತಾರ ಸ್ಟಾರ್ ಅವಾರ್ಡ್ಸ್-2024ʼಕ್ಕೆ ಪರಿಗಣಿಸಲಾಗಿದೆ.

ಇದನ್ನೂ ಓದಿ:ಕೊಲೆ ಕೇಸ್‌ ಬೆನ್ನಲ್ಲೆ ನಟ ದರ್ಶನ್‌ಗೆ ಐಟಿ ಸಂಕಷ್ಟ..! ನೋಟಿಸ್ ನೀಡುವ ಸಾಧ್ಯತೆ.?

ನಾಮನಿರ್ದೇಶಿತರನ್ನು, ವಿಜೇತರನ್ನಾಗಿಸುವ ಆಯ್ಕೆಯ ಅವಕಾಶವನ್ನು ʼಆನ್‌ಲೈನ್ ವೋಟಿಂಗ್ʼ ಮೂಲಕ ಸಾರ್ವಜನಿಕರಿಗೂ ಕಲ್ಪಿಸುವುದರ ಜೊತೆಗೆ, ಆಯ್ಕೆಯು ಯಾವುದೇ ವ್ಯಕ್ತಿಗಳು, ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಅತ್ಯಂತ ಪಾರದರ್ಶಕ ಮತ್ತು ವೃತ್ತಿಪರವಾಗಿ ನಡೆದಿದೆ. ಇನ್ನು, ಚಿತ್ತಾರ ಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಸದಾಶಿವ ಶೆಣೈ ಅವರ ಸಾರಥ್ಯದಲ್ಲಿ ʼಆಯ್ಕೆ ಸಮಿತಿʼಯು ರಚನೆಗೊಂಡು, ಹಿರಿಯ ನಿರ್ದೇಶಕರಾದ ಶ್ರೀ ಸಾಯಿ ಪ್ರಕಾಶ್, ಖ್ಯಾತ ನಿರ್ದೇಶಕರಾದ ಶ್ರೀ ಮಹೇಶ್ ಬಾಬು, ಖ್ಯಾತ ನಟಿ ಶ್ರೀಮತಿ ಅನು ಪ್ರಭಾಕರ್ ಮುಖರ್ಜಿ, ಪತ್ರಿಕಾ ಸಂಪರ್ಕಾಧಿಕಾರಿಯಾದ ಶ್ರೀ ಸುಧೀಂದ್ರ ವೆಂಕಟೇಶ್, ಚಿತ್ತಾರ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಕುಮಾರ್ ಮತ್ತು ಖ್ಯಾತ ನಟಿ ಕುಮಾರಿ ಅಪೂರ್ವ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿ ನಾಮನಿರ್ದೇಶಿತರ ಆಯ್ಕೆ ಪ್ರಕ್ರಿಯೆ ನಡೆದಿತ್ತು. 

ಜಾಗತಿಕ ಮಟ್ಟದಲ್ಲಿ ಚಂದನವನದ ಅಭೂತಪೂರ್ವ ಸಾಧನೆಗೆ ಕನ್ನಡಿಯಾಗುವ ʼಚಿತ್ತಾರ ಸ್ಟಾರ್ ಅವಾರ್ಡ್ಸ್ʼ, ಇಲ್ಲಿನ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿತ್ತು. ಕನ್ನಡದ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಶಿಸಿ, ಮೆಚ್ಚುಗೆ ವ್ಯಕ್ತಪಡಿಸುವುದು ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಹೊಸತನವನ್ನು ಕೂಡ ಉತ್ತೇಜಿಸುವ ಈ ಅಪರೂಪದ ಕಾರ್ಯಕ್ರಮದಲ್ಲಿ ಬೇರೆ ಭಾಷೆಯ ಚಿತ್ರರಂಗದ ಗಣ್ಯರೂ ಪಾಲ್ಗೊಂಡಿರುವುದು ವಿಶೇಷತೆಗಳಲ್ಲೊಂದು.

ಇದನ್ನೂ ಓದಿ:ನಟಿ ಪ್ರಿಯಾಂಕಾ ರಕ್ತಸಿಕ್ತ ವಿಡಿಯೋ ವೈರಲ್‌..! ಏನಾಯ್ತು ನಟಿಗೆ, ಶಾಕ್‌ನಲ್ಲಿ ಪ್ಯಾನ್ಸ್‌

ʼಚಿತ್ತಾರ ಸ್ಟಾರ್ ಅವಾರ್ಡ್ಸ್-2024ʼನ ಪ್ರಮುಖ ವಿಜೇತರನ್ನು ಹೆಸರಿಸುವುದಾದರೆ.. ಕಾಟೇರ ಚಿತ್ರದ ನಿರ್ದೇಶನಕ್ಕಾಗಿ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ ಇದೇ ಚಿತ್ರಕ್ಕೆ ನಟ ದರ್ಶನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ʼಸಪ್ತ ಸಾಗರಾದಾಚೆ ಎಲ್ಲೋʼ ಚಿತ್ರದ ಅಭಿನಯಕ್ಕಾಗಿ ನಟಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ಇದೇ ಚಿತ್ರದ ಸಂಗೀತಕ್ಕಾಗಿ ಚರಣ್ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ.. ಅತ್ಯುತ್ತಮ ಪೋಷಕ ನಟಿ- ಶ್ರುತಿ (ಕಾಟೇರ), ಅತ್ಯುತ್ತಮ ಪೋಷಕ ನಟ- ಶರತ್ ಲೋಹಿತಾಶ್ವ (ಸಪ್ತ ಸಾಗರಾದಾಚೆ ಎಲ್ಲೋ), ಅತ್ಯುತ್ತಮ ಗೀತರಚನೆಕಾರ - ಚೇತನ್ ಕುಮಾರ್(ಕಾಟೇರ), ಅತ್ಯುತ್ತಮ ಛಾಯಾಗ್ರಹಣ-ಶ್ವೇತ್ ಪ್ರಿಯಾ ನಾಯಕ್ (ಕೈವ), ಅತ್ಯುತ್ತಮ ಹಿನ್ನಲೆ ಗಾಯಕ- ಹೇಮಂತ್ (ಕಾಟೇರ), ಅತ್ಯುತ್ತಮ ಹಿನ್ನಲೆ ಗಾಯಕಿ-ಪ್ರಥ್ವಿ ಭಟ್ (ಕೌಸಲ್ಯ ಸುಪ್ರಜಾ ರಾಮ), ಬೆಸ್ಟ್ ಡೆಬ್ಯುಡೆಂಟ್ ಮೇಲ್-ಶಿಶಿರ್ ಬೈಕಾಡಿ (ಡೇರ್ ಡೆವಿಲ್ ಮುಸ್ತಾಫಾ), ಬೆಸ್ಟ್ ಡೆಬ್ಯುಡೆಂಟ್ ಫಿಮೇಲ್-ಆರಾಧನಾ ರಾಮ್ (ಕಾಟೇರ), ಅತ್ಯುತ್ತಮ ಚಿತ್ರ-ಕಾಟೇರ, ಅತ್ಯುತ್ತಮ ಹಾಸ್ಯ ನಟ-ದತ್ತಣ್ಣ(ನಾನು ಅದು ಮತ್ತು ಸರೋಜ), ಅತ್ಯುತ್ತಮ ಖಳ ನಟ-ರಮೇಶ್ ಇಂದಿರಾ(ಸಪ್ತ ಸಾಗರಾದಾಚೆ ಎಲ್ಲೋ), ಅತ್ಯುತ್ತಮ ಸಾಹಸ ನಿರ್ದೇಶಕ-ಥ್ರಿಲ್ಲರ್ ಮಂಜು(ಮಾರಕಾಸ್ತ), ಅತ್ಯುತ್ತಮ ಸಂಕಲನಕಾರ-ಆಶಿಕ್ ಕುಸುಗೋಳಿ(ಆಚಾರ್ ಅಂಡ್ ಕೋ), ಅತ್ಯುತ್ತಮ ಕಲಾನಿರ್ದೇಶಕ-ವಿಶ್ವಾಸ್ ಕಶ್ಯಪ್(ಗುರುದೇವ ಹೋಯ್ಸಳ), ಅತ್ಯುತ್ತಮ ನೃತ್ಯ ನಿರ್ದೇಶಕ-ಮುರಳಿ ಮಾಸ್ಟರ್(ವೀರಂ), ಅತ್ಯುತ್ತಮ ಬಾಲ ನಟ-ಮಾಸ್ಟರ್ ರೋಹಿತ್(ಕಾಟೇರ), ಅತ್ಯುತ್ತಮ ಬಾಲ ನಟಿ-ಗ್ರೀಷ್ಮಾ ಗೌಡ(ಬಾನದಾರಿಯಲ್ಲಿ), ಅತ್ಯುತ್ತಮ ಸಮಾಜಿಕ ಪರಿಣಾಮ ಬೀರಿದ ಚಿತ್ರ-ಬನ್ ಟೀ, ಜಲಪಾತ ಮತ್ತು ಕಾಸಿನ ಸರ. ಅತ್ಯುತ್ತಮ ಭರವಸೆ ಮೂಡಿಸಿದ ಚಿತ್ರ ತತ್ಸಮ ತದ್ಭವ ಮತ್ತು ರಾಘು.   

ನಾಮನಿರ್ದೇಶನ ಪ್ರಶಸ್ತಿಗಳನ್ನು ಹೊರತುಪಡಿಸಿ, ಚಿತ್ತಾರ `ವಿಶೇಷ ಪ್ರಶಸ್ತಿಗಳನ್ನೂ ಸಾಧಕರಿಗೆ ನೀಡಿ ಗೌರವಿಸಿತ್ತು. ಅವುಗಳ ವಿವಿರ ಈ ಕೆಳಗಿನಂತಿದೆ..
ಚಿತ್ತಾರ READERS CHOICE ಪ್ರಶಸ್ತಿ-ಪ್ರಜ್ವಲ್ ದೇವರಾಜ್
ಚಿತ್ತಾರ READERS CHOICE ಪ್ರಶಸ್ತಿ-ಸೋನಲ್ ಮೊಂಟೆರೋ
ಚಿತ್ತಾರ BEST FILM INDUSTRY COORDINATOR-ಪ್ರಶಸ್ತಿ -ಎಸ್.ಕೆ.ಅನಂತ್
ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿ-ಕಾರ್ತಿಕ್ ಮಹೇಶ್
ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿ-ಚೈತ್ರ ಜೆ ಆಚಾರ್
ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿ-ಅನೂಷಾ ರೈ
ಚಿತ್ತಾರ ಬೆಸ್ಟ್ ಪ್ರಾಮಿಸಿಂಗ್ ಟೀಮ್ ಪ್ರಶಸ್ತಿ-`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ತಂಡ
ಚಿತ್ತಾರ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ-ಉಮಾಶ್ರೀ
ಚಿತ್ತಾರ ಪ್ರಾಮಿಸಿಂಗ್ ಸ್ಟಾರ್ ಪ್ರಶಸ್ತಿ-ಸ್ವಾತಿಷ್ಠ ಕೃಷ್ಣನ್
ಚಿತ್ತಾರ ಪ್ರಾಮಿಸಿಂಗ್ ಸ್ಟಾರ್ ಪ್ರಶಸ್ತಿ-ವಿನಯ್ ರಾಜ್‌ಕುಮಾರ್
ಚಿತ್ತಾರ ಸ್ಟಾರ್ ಅಚೀವರ್ ಪ್ರಶಸ್ತಿ-ಅಶ್ವಿನಿ ಪುನೀತ್ ರಾಜ್‌ಕುಮಾರ್
ಚಿತ್ತಾರ ಸ್ಟಾರ್ ಐಕಾನ್ ಪ್ರಶಸ್ತಿ-ಶಾನ್ವಿ ಶ್ರೀವಾಸ್ತವ್
ಚಿತ್ತಾರ ಸ್ಟಾರ್ ಐಕಾನ್ ಪ್ರಶಸ್ತಿ-ಶ್ರೀ ಮುರಳಿ
ಚಿತ್ತಾರ ಸೌತ್ ಗೋಲ್ಡನ್ ಮೂವಿ ಪ್ರಶಸ್ತಿ-ಮಂಜುಮೆಲ್ ಬಾಯ್ಸ್
ಚಿತ್ತಾರ ಯೂತ್ ಐಕಾನ್ ಪ್ರಶಸ್ತಿ-ಡಾಲಿ ಧನಂಜಯ
ಚಿತ್ತಾರ ಬೆಸ್ಟ್ ಫಿಲ್ಮ್ ಪಬ್ಲಿಸಿಟೀ ಡಿಸೈನರ್-ಮಣಿ
ಚಿತ್ತಾರ PRIDE OF KARNATAKA ಪ್ರಶಸ್ತಿ-ಪ್ರಣೀತಾ ಸುಭಾಶ್
ಚಿತ್ತಾರ ಕ್ರಿಟಿಕ್ ಅವಾರ್ಡ್ ಬೆಸ್ಟ್ actress ಪ್ರಶಸ್ತಿ-ಮೆಘಾ ಶೆಟ್ಟಿ
ಚಿತ್ತಾರ ಕ್ರಿಟಿಕ್ ಅವಾರ್ಡ್ ಬೆಸ್ಟ್ ಆಕ್ಟರ್ ಪ್ರಶಸ್ತಿ-ಡಾರ್ಲಿಂಗ್ ಕೃಷ್ಣ

``ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ಕ್ಕೆ 23 ವಿಭಾಗದಲ್ಲಿ 276 ಪ್ರತಿಭೆಗಳು ನಾಮನಿರ್ದೇಶನಗೊಂಡಿತ್ತು, ವೆಬ್‌ಸೈಟ್ ಮೂಲಕ ವೋಟಿಂಗ್ ಮಾಡುವ ಪ್ರಕ್ರಿಯೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು, 13,49,423 ಸಿನಿ ಪ್ರೇಮಿಗಳು ವೋಟ್ ಮಾಡಿದ್ದು, ಒಟ್ಟು 23 ವಿಭಾಗಳಲ್ಲಿ ಎರಡು ಕೋಟಿಗೂ ಹೆಚ್ಚು ವೋಟಿಂಗ್ ನಡೆದಿದೆ. ಪ್ರತೀ ವಿಭಾಗದಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು, ಪಬ್ಲಿಕ್ ವೋಟಿಂಗ್‌ನ್ನು ಆಧಾರವಾಗಿಟ್ಟುಕೊಂಡು `ಆಯ್ಕೆ ಸಮಿತಿ' ಸದಸ್ಯರು ಅಸಲಿ ಪ್ರತಿಭೆಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು, ಪ್ರತಿ ವರ್ಷದಂತೆ ಈ ವರ್ಷವೂ ಬಹುಪಾಲು ಚಂದನವನವೇ ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಕಾರ್ಯಕ್ರಮ ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ನೆರವೇರಿದೆ.

ಇದನ್ನೂ ಓದಿ:ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ

ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶ್ರೀ ವಿನಯ್ ಗುರೂಜಿ, ಅಯೋಧ್ಯೆಯ ಬಾಲ ರಾಮ ಶಿಲ್ಪಿ ಅರುಣ್ ಯೋಗಿ ರಾಜ್, ಬಿ.ಜಿ.ಎಸ್ ಸಮೂಹ ಸಂಸ್ಥೆಯ ರುವಾರಿಗಳಾದ ಶ್ರೀ ಪ್ರಕಾಶನಾಥ ಗುರೂಜಿ, ಶ್ರೀ ಮಾಸ್ಟರ್ ಆನಂದ್, ಐಎಎಸ್ ಅಧಿಕಾರಿ ರವಿ ಚೆನ್ನಣ್ಣನವರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಎನ್.ಎಮ್.ಸುರೇಶ್, ಶ್ರೀ ಭಾ.ಮ.ಹರೀಶ್, ಶ್ರೀ ಉಮೇಶ್ ಬಣಕಾರ್ ಓಂ ಶ್ರೀ ಸಾಯಿ ಪ್ರಕಾಶ್, ಶ್ರೀ ದೊಡ್ಡರಂಗೇ ಗೌಡ್ರು, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀಮತಿ ಮಾಲಾಶ್ರೀ, ಶ್ರೀ ವಿಜಯ ರಾಘವೇಂದ್ರ, ಶ್ರೀ ಶೈನ್ ಶಟ್ಟಿ, ಶ್ರೀ ಕವಿರಾಜ್, ಶ್ರೀಮತಿ ಅನುಪ್ರಭಾಕರ್, ರೂಪಿಕಾ, ದುನಿಯಾ ರಶ್ಮಿ, ಶ್ರೀ ಸುಧೀಂದ್ರ ವೆಂಕಟೇಶ್, ಶ್ರೀ ಮಹೇಶ್ ಬಾಬು, ಅಪೂರ್ವ.. ಹೀಗೆ, ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯಾತಿಗಣ್ಯರಿಂದ ಕಾರ್ಯಕ್ರಮ ಕಳೆ ಕಟ್ಟಿತ್ತು. ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದ''  ಎಂದು ಚಿತ್ತಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್ ಅವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News