ಕಾಜಲ್ ಅಗರವಾಲ್ ಗೆ ವೇದಿಕೆಯಲ್ಲಿ ಕಿಸ್ ಕೊಟ್ಟ ಸಿನಿಮಾಟೋಗ್ರಾಫರ್ !

 ತೆಲುಗು ಸಿನಿಮಾದ ಸಿನಿಮಾಅಟೋಗ್ರಾಫರ್ ಛೋಟಾ ಕೆ ನಾಯ್ಡು ಹೊಸದೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

Last Updated : Nov 15, 2018, 02:22 PM IST
ಕಾಜಲ್ ಅಗರವಾಲ್ ಗೆ ವೇದಿಕೆಯಲ್ಲಿ ಕಿಸ್ ಕೊಟ್ಟ ಸಿನಿಮಾಟೋಗ್ರಾಫರ್ ! title=

ನವದೆಹಲಿ:  ತೆಲುಗು ಸಿನಿಮಾದ ಸಿನಿಮಾಅಟೋಗ್ರಾಫರ್ ಛೋಟಾ ಕೆ ನಾಯ್ಡು ಹೊಸದೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ಅಷ್ಟಕ್ಕೂ ಈ ವಿವಾದ ಏನಂತೀರಾ? ಕವಚಂ ಸಿನಿಮಾದ ಟಿಸರ್ ಬಿಡುಗಡೆ ಸಮಾರಂಭದಲ್ಲಿ ಸಿನಿಮಾಟೋಗ್ರಾಫರ್ ಛೋಟಾ ಕೆ ನಾಯ್ಡು ದಕ್ಷಿಣ ಭಾರತದ ಖ್ಯಾತ ನಟಿ ಮಗವೀರ ಬೆಡಗಿ ಕಾಜಲ್ ಅಗರವಾಲ್ ರನ್ನು ವೇದಿಕೆಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತಿಕ್ಕಿ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

ಈ ಸಿನಿಮಾಟೋಗ್ರಾಫರ್ ಛೋಟಾ ಅವರ ವರ್ತನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದ ಕಾಜಲ್ ನಂತರ ಈ ಘಟನೆಯಿಂದ ಸರಿಪಡಿಸಿಕೊಂಡು ಸಿನಿಮಾ ಆಟೋಗ್ರಾಫರ್ ಚೋಟಾ ಅವರು ಕುಟುಂಬದ ಹಾಗೆ ಎಂದು ಅವರು ಉತ್ತರಿಸಿದ್ದಾರೆ.

ಇನ್ನೊಂದೆಡೆಗೆ ಛೋಟಾ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ" ಕಾಜಲ್ ಅಗರವಾಲ್ ಅವರೊಟ್ಟಿಗೆ ಕೆಲಸ ಮಾಡುವುದೆಂದರೆ ಇಷ್ಟ. ಸೌಂದರ್ಯ ನಂತರ  ಅವರು ನನ್ನ ನೆಚ್ಚಿನ ನಟಿ.ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ.ಕಾಜಲ್ ಮತ್ತು ನಾನು ಪರಸ್ಪರ ಹಲವಾರು ವರ್ಷಗಳಿಂದ ಗೊತ್ತಿರುವವರು.ಉತ್ತಮ ಭಾಂದವ್ಯವನ್ನು ಹೊಂದಿದ್ದೇವೆ ಅವರು ತಮ್ಮ ಕುಟುಂಬದ ಸದಸ್ಯರಂತೆ ತಿಳಿದಿದ್ದಾರೆ ಎಂದು ತಿಳಿಸಿದರು. 

 

Trending News