Rashmika v/s Srileela: ಟಾಪ್ ಹೀರೋಯಿನ್ಸ್ ವಾರ್.. ರಶ್ಮಿಕಾ - ಶ್ರೀಲೀಲಾ ನಡುವೆ ನಡೀತಿರೋದಾದ್ರೂ ಏನು?

Cold War Between South Actress: ಟಾಲಿವುಡ್ ನ ಟಾಪ್ ಹೀರೋಯಿನ್ ರೇಸ್ ನಲ್ಲಿರುವ ಇಬ್ಬರು ನಟಿಯರಿವರು. ಸಾಲು ಸಾಲು ಸಿನಿಮಾಗಳ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದಾರೆ. 

Written by - Chetana Devarmani | Last Updated : Mar 16, 2024, 02:59 PM IST
  • ಟಾಲಿವುಡ್ ನ ಟಾಪ್ ಹೀರೋಯಿನ್
  • ರಶ್ಮಿಕಾ v/s ಶ್ರೀಲೀಲಾ!!
  • ಸ್ಟಾರ್‌ ನಟಿಯರ ನಡುವೆ ಏನ್‌ ನಡೀತಿದೆ?
Rashmika v/s Srileela: ಟಾಪ್ ಹೀರೋಯಿನ್ಸ್ ವಾರ್.. ರಶ್ಮಿಕಾ - ಶ್ರೀಲೀಲಾ ನಡುವೆ ನಡೀತಿರೋದಾದ್ರೂ ಏನು? title=

Srileela not follow Rashmika Mandanna on Instagram: ತೆಲುಗು ಚಿತ್ರರಂಗದ ಟಾಪ್‌ ನಟಿಯರ ಪಟ್ಟಿಯಲ್ಲಿ ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ ಮುಂಚೂಣಿಯಲ್ಲಿದ್ದಾರೆ. ಈ ಹೀರೋಯಿನ್‌ಗಳ ಸೌಂದರ್ಯಕ್ಕೆ ಲಕ್ಷಾಂತರ ಅಭಿಮಾನಿಗಳು ಮನಸೋತಿದ್ದಾರೆ. ಬೆಳ್ಳಿತೆರೆಯಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಕ್ಯೂಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಶ್ರೀಲೀಲಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನೂರಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ಶ್ರೀಲೀಲಾ ಫಾಲೋ ಮಾಡುತ್ತಾರೆ. ಆದರೆ ಈ ಲಿಸ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಇಲ್ಲ. ಇದೇ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಸಮಂತಾ 3 ಕೋಟಿ ಫಾಲೋವರ್ಸ್ ದಿಕ್ಕು ತಪ್ಪಿಸುತ್ತಿದ್ದಾರೆ.. ವೈದ್ಯರ ಪೋಸ್ಟ್ ವೈರಲ್! 

ರಶ್ಮಿಕಾ ಮಂದಣ್ಣ ಅವರನ್ನು ಶ್ರೀಲೀಲಾ ಇನ್‌ಸ್ಟಾಗ್ರಾಮ್‌ನಲ್ಲಿ ಏಕೆ ಫಾಲೋ ಮಾಡುತ್ತಿಲ್ಲ? ಎಂದು ಸಿನಿಮಾ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ದಿವ್ಯಾ ಸ್ಪಂದನ (ರಮ್ಯಾ), ಸಾನ್ವಿ ಶ್ರೀವಾಸ್ತವ, ರಾಧಿಕಾ ಪಂಡಿತ್, ಆಶಿಕಾ ರಂಗನಾಥ್ ಹೀಗೆ ಶ್ರೀಲೀಲಾ ಕನ್ನಡ ಮತ್ತು ತೆಲುಗು ಚಿತ್ರರಂಗದ ಅನೇಕ ನಟಿಯರನ್ನು ಫಾಲೋ ಮಾಡುತ್ತಾರೆ. ಆದರೆ ಈ ಪಟ್ಟಿಯಲ್ಲಿ ಎಲ್ಲಿಯೂ ರಶ್ಮಿಕಾ ಹೆಸರು ಕಾಣಿಸುತ್ತಿಲ್ಲ.  

ಈ ಇಬ್ಬರು ಸೌತ್‌ ನ ಟಾಪ್ ಹೀರೋಯಿನ್ ರೇಸ್ ನಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇಬ್ಬರ ನಡುವಿನ ಈ ಪೈಪೋಟೊಯೇ ಶ್ರೀಲಾಲಾ ಮತ್ತು ರಶ್ಮಿಕಾ ನಡುವಿನ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ. ಅದಕ್ಕೆ ರಶ್ಮಿಕಾ ಅವರಿಗೆ ಶ್ರೀಲೀಲಾ ಫಾಲೋ ಮಾಡ್ತಿಲ್ಲ ಎಂದು ಕೆಲವು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ: Jackie Chan : ಜಾಕಿ ಚಾನ್ ಎಂದೇ ಫೇಮಸ್‌ ಆದ ನಟ..! ಈಗ ಹೇಗಿದ್ದಾರೆ ನೋಡಿದ್ರೆ ಶಾಕ್‌ ಆಗ್ತೀರಾ

ಶ್ರೀಲೀಲಾ 2017 ರಲ್ಲಿ "ಚಿತ್ರಾಂಗದಾ" ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು. ಬಾಲ ಕಲಾವಿದೆಯಾಗಿ ನಟಿಸಿದ್ದರು. 2019 ರ ಕನ್ನಡ ಚಲನಚಿತ್ರ "ಕಿಸ್" ಸಿನಿಮಾ ನಾಯಕಿಯಾದರು. 

ಧಮಾಕಾ (2022) ನಂತಹ ಸೂಪರ್ ಹಿಟ್ ಟಾಲಿವುಡ್ ಸಿನಿಮಾದಲ್ಲಿ ಚಾನ್ಸ್‌ ಪಡೆಯುವ ಮೂಲಕ ಜನಪ್ರಿಯತೆ ಗಳಿಸಿದರು. ಧಮಾಕಾ ಚಿತ್ರದಲ್ಲಿನ ಅಭಿನಯಕ್ಕಾಗಿ ತೆಲುಗಿನಲ್ಲಿ ಅತ್ಯುತ್ತಮ ನಟಿ SIIMA ಪ್ರಶಸ್ತಿಯನ್ನು ಗೆದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News