Dboss birthday CDP : ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾಮನ್ ಡಿಪಿ ಚಾಲೆಂಜ್.! ಈ ಸಲ ಫುಲ್ ಡಿಫರೆಂಟ್

ದರ್ಶನ್ ಹುಟ್ಟು ಹಬ್ಬ ಈ ಸಲ ಕೊಂಚ ಸ್ಪೆಷಲ್ ಆಗಲಿದೆ. ಸೋಶಿಯಲ್ ಮಿಡಿಯಾದಲ್ಲಿ ವಿಶೇಷ ಅಭಿಯಾನವೊಂದು ಶುರುವಾಗಿದೆ. ಅದು ದಾಸನಿಗೆ ಅಭಿಮಾನಿಗಳು ನೀಡುತ್ತಿರುವ ಹುಟ್ಟುಹಬ್ಬದ ವಿಶೇಷ  ಉಡುಗೊರೆ.

Written by - Ranjitha R K | Last Updated : Feb 14, 2021, 02:37 PM IST
  • ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಡಿಪಿ ಚಾಲೆಂಜ್ ಶುರುವಾಗಿದೆ.
  • ಈ ಸಲದ ಡಿಪಿಯ ಥೀಮ್ ಸಖತ್ ಡಿಫರೆಂಟಾಗಿದೆ.
  • ಈ ಕಾಮನ್ ಥೀಮಿನಲ್ಲಿ ದರ್ಶನ್ ಕೆಮೆರಾ ಹಿಡಿದು, ವನ್ಯಪ್ರಾಣಿಗಳ ಜೊತೆ ನಿಂತಿದ್ದಾರೆ.
Dboss birthday CDP : ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾಮನ್ ಡಿಪಿ ಚಾಲೆಂಜ್.! ಈ ಸಲ ಫುಲ್ ಡಿಫರೆಂಟ್ title=
ಈ ಸಲದ ಡಿಪಿಯ ಥೀಮ್ ಸಖತ್ ಡಿಫರೆಂಟಾಗಿದೆ.(photo twitter)

ಬೆಂಗಳೂರು : ದರ್ಶನ್ (Darshan)ಹುಟ್ಟು ಹಬ್ಬ ಈ ಸಲ ಕೊಂಚ ಸ್ಪೆಷಲ್ ಆಗಲಿದೆ. ದರ್ಶನ್ ಅಭಿನಯದ ರಾಬರ್ಟ್ (Roberrt) ಚಿತ್ರ ಮಾರ್ಚ್ 11 ರಂದು ರಿಲೀಸ್ ಆಗಲಿದೆ. ಈ ನಡುವೆ ಸೋಶಿಯಲ್ ಮಿಡಿಯಾದಲ್ಲಿ ವಿಶೇಷ ಅಭಿಯಾನವೊಂದು ಶುರುವಾಗಿದೆ. ಅದು ದಾಸನಿಗೆ ಅಭಿಮಾನಿಗಳು ನೀಡುತ್ತಿರುವ ಹುಟ್ಟುಹಬ್ಬದ ವಿಶೇಷ  ಉಡುಗೊರೆ. ಆ ಉಡುಗೊರೆ ಕೂಡಾ ಕೊಂಚ ವಿಭಿನ್ನವಾಗಿದೆ.

ದರ್ಶನ್ ಹುಟ್ಟು ಹಬ್ಬಕ್ಕೆ ಡಿಪಿ ಚಾಲೆಂಜ್ : 
ಪ್ರತಿ ವರ್ಷವೂ ಹುಟ್ಟು ಹಬ್ಬದಂದು ದರ್ಶನ್ (D BOSS) ಅಭಿಮಾನಿಗಳು ಒಂದು ಕಾಮನ್ ಡಿಪಿ ಚಾಲೆಂಜ್ (Common DP Challenge) ರಿಲೀಸ್ ಮಾಡುತ್ತಾರೆ. ಈ ಡಿಪಿ ವಾಟ್ಸಾಪ್, Facebook ಮತ್ತು ಇತರ ಸೋಶಿಯಲ್ ಮೀಡಿಯಾಗಳಲ್ಲಿ (Social media)ರಾರಾಜಿಸುತ್ತದೆ.  ಜನ್ಮದಿನಕ್ಕೂ ಕೆಲವು ದಿನ ಮೊದಲೇ ಈ ಅಭಿಯಾನ ಶುರುವಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಡಿಪಿ ಚಾಲೆಂಜ್ ಶುರುವಾಗಿದೆ.

 

 

ಇದನ್ನೂ ಓದಿ : 'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.!

ಈ ಸಲ `ದಾಸ ಪರ್ವ' :
ಈ ಸಲದ ಡಿಪಿಯ ಥೀಮ್ ಸ್ವಲ್ಪ ಡಿಫರೆಂಟಾಗಿದೆ. ದರ್ಶನ್ ಅವರಿಗೆ ವನ್ಯಜೀವಿ, ವನ್ಯಜೀವಿ ಫೋಟೋಗ್ರಫಿ (Darshan Photography) ಅಂದರೆ ಆಸಕ್ತಿ ಹೆಚ್ಚು. ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲೂ ಅವರು ಸಕ್ರಿಯರಾಗಿದ್ದಾರೆ. ಕಾಡಿಗೆ ತೆರಳಿ ಫೋಟೋಗ್ರಪಿ ಮಾಡುತ್ತಾರೆ. ಮೈಸೂರು ಮೃಗಾಲಯದಲ್ಲಿ  (Mysore Zoo) ಹುಲಿಯನ್ನು ದತ್ತು ಪಡೆದಿದ್ದಾರೆ. ಇದೇ ಥೀಮ್ ಮೇಲೆ ಕಾಮನ್ ಡಿಪಿ ಸಿದ್ದಪಡಿಸಲಾಗಿದೆ. ಅದರಲ್ಲಿ `ದಾಸ ಪರ್ವ'`ಬಾಸ್' ಹೀಗೆಲ್ಲಾ ಬರೆಯಲಾಗಿದೆ. ಈ ಕಾಮನ್ ಥೀಮಿನಲ್ಲಿ ದರ್ಶನ್ (Darshan) ಕೆಮೆರಾ  ಹಿಡಿದು, ವನ್ಯಪ್ರಾಣಿಗಳ ಜೊತೆ ನಿಂತಿದ್ದಾರೆ.

ಹುಟ್ಟುಹಬ್ಬದ ಥೀಮ್ ಸಾಕಷ್ಟು ವೈರಲ್ : 
ಅಭಿಮಾನಿಗಳು ಸಿದ್ದಪಡಿಸಿರುವ ಕಾಮನ್ ಡಿಪಿ ಚಾಲೆಂಜ್ ಈ ಸಲ ಸಾಕಷ್ಟು ವೈರಲ್ ಆಗಿದೆ. ಡಿಬಾಸ್ ಅಭಿಮಾನಿಗಳು ಡಿಪಿ ಚಾಲೆಂಜಿಗೆ  ಭರ್ಜರಿಯಾಗಿ ರೆಸ್ಪಾನ್ಸ್ ನೀಡಿದ್ದಾರೆ. ಕನ್ನಡದ ಸೆಲೆಬ್ರಿಟಿಗಳೂ ದಾಸ ಪರ್ವ ಡಿಪಿ ಶೇರ್ ಮಾಡಿದ್ದಾರೆ. ಅದರಲ್ಲಿ ರಿಷಬ್ ಶೆಟ್ಟಿ (Rishab Shetty), ಸುಮಲತಾ ಅಂಬರೀಷ್  ಕೂಡಾ ಸೇರಿದ್ದಾರೆ.

ಇದನ್ನೂ ಓದಿ : ಬ್ರಹ್ಮಾಂಡದ ಅತ್ಯುತ್ತಮ ನಟಿ ಎಂದು ತನ್ನನ್ನು ತಾನೇ ಹೊಗಳಿ ಟ್ರೋಲ್‌ಗೆ ಸಿಲುಕಿದ Kangana Ranaut

 

`ಕೋಟಿ ಜನರ ಪ್ರೀತಿ ಎಂಬ ಆಸ್ತಿ ಸಂಪಾದಿಸು':
ಸಂಸದೆ ಸುಮಲತಾ ಅಂಬರೀಷ್ (Sumalatha Ambarish) ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ಆಗಿ ವಿಶ್ ಮಾಡಿದ್ದಾರೆ. `ಕಲೆಯ ಹೊರತಾಗಿ ನೀನು ತೊಡಗಿಸಿಕೊಳ್ಳುವ ಕೆಲಸಗಳು ಲಕ್ಷಾಂತರ ಯುವಕರಿಗೆ ಸ್ಪೂರ್ತಿ ಆಗಿದೆ. ಇನ್ನೂ ಕೋಟಿ ಕೋಟಿ ಜನರ ಪ್ರೀತಿ ಎಂಬ ಆಸ್ತಿ ಸಂಪಾದಿಸು ಎಂದು ಹಾರೈಸುವೆ' ಎಂದಿದ್ದಾರೆ ಸುಮಲತಾ. 
ಅಂದಹಾಗೆ ದರ್ಶನ್ ಹುಟ್ಟು ಹಬ್ಬ ಮಂಗಳವಾರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News