ನಟ ಆದಿತ್ಯ ವಿರುದ್ಧ ವಂಚನೆ ಆರೋಪ; ದೂರು ದಾಖಲು

ಬೆಂಗಳೂರಿನ ಸದಾಶಿವನಗರದ ಆರ್ ಎಂವಿಎಕ್ಸ್ ಬಡಾವಣೆ ಬಳಿ ಇರುವ ಪ್ರಸನ್ನ ಅವರ ಮನೆಯಲ್ಲಿ ನಿರ್ದೇಶಕ ರಾಜೇಂದ್ರ ನಟ ಆದಿತ್ಯ ಅವರು ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದಾರೆ.

Updated: May 10, 2019 , 05:06 PM IST
ನಟ ಆದಿತ್ಯ ವಿರುದ್ಧ ವಂಚನೆ ಆರೋಪ; ದೂರು ದಾಖಲು

ಬೆಂಗಳೂರು: ಸ್ಯಾಂಡಲ್ವುಡ್ ನಟ ಆದಿತ್ಯ ವಿರುದ್ಧ ಮನೆ ಬಾಡಿಗೆ ಕಟ್ಟದೆ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಏಳು ತಿಂಗಳಿನಿಂದ ಆದಿತ್ಯ ಅವರು ಮನೆ ಬಾಡಿಕೆ ಕೊಟ್ಟಿಲ್ಲ. ಪ್ರತಿ ತಿಂಗಳಿಗೆ 48 ಸಾವಿರ ರೂ ಮನೆ ಬಾಡಿಗೆ ನಿಗದಿ ಮಾಡಲಾಗಿದೆ. ಇಲ್ಲಿಯವರೆಗೆ ಎರಡೂವರೆ ಲಕ್ಷದಷ್ಟು ಬಾಡಿಗೆ ಬಾಕಿ ಇದೆ ಎಂದು ಮನೆಯ ಮಾಲೀಕ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. 

ಬೆಂಗಳೂರಿನ ಸದಾಶಿವನಗರದ ಆರ್ ಎಂವಿಎಕ್ಸ್ ಬಡಾವಣೆ ಬಳಿ ಇರುವ ಪ್ರಸನ್ನ ಅವರ ಮನೆಯಲ್ಲಿ ನಿರ್ದೇಶಕ ರಾಜೇಂದ್ರ ನಟ ಆದಿತ್ಯ ಅವರು ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದಾರೆ.

ಬಾಡಿಗೆ ನೀಡದೇ ಇರುವ ಬಗ್ಗೆ 2018 ನವೆಂಬರ್​ನಲ್ಲಿ ನಗರದ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಎವಿಕ್ಷನ್ ಫೈಲ್ ಮಾಡಲಾಗಿತ್ತು. ಆದರೆ ಇದೀಗ ಮನೆ ಮಾಲೀಕ ಪ್ರಸನ್ನ ಅವರು ಮನೆ ಖಾಲಿ ಮಾಡುವಂತೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.