ಈಗಾಗಲೇ ತನ್ನ ಮೇಕಿಂಗ್ ಹಾಗೂ ಹಾಡುಗಳ ಮೂಲಕವೇ ಎಲ್ಲರ ಗಮನ ಸೆಳೆದಿರುವ 'ಬೈ ಟು ಲವ್' ಸಿನಿಮಾದ ಟ್ರೈಲರ್ ಇಂದು ಸಂಜೆ ರಿಲೀಸ್ ಆಗಲಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಇದಕ್ಕಾಗಿ ಸಂಭ್ರಮದ ಸಿದ್ಧತೆ ಭರದಿಂದ ಸಾಗಿದೆ.
ಕಳೆದ ಶುಕ್ರವಾರ ಬಹುನಿರೀಕ್ಷಿತ ʼಲವ್ ಮಾಕ್ಟೇಲ್-2(Love Mocktail 2)ʼ ರಿಲೀಸ್ ಆಗಿತ್ತು. ಇದೀಗ 'ಬೈ ಟು ಲವ್' ರಿಲೀಸ್ಗೂ ಕೌಂಟ್ಡೌನ್ ಶುರುವಾಗಿದೆ. ಈ ಮೂಲಕ ಬರುವ ಶುಕ್ರವಾರವೇ ಮತ್ತೊಂದು ಪ್ರೇಮ್ ಕಹಾನಿ ಕನ್ನಡ ಪ್ರೇಕ್ಷಕರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ : Karnataka Hijab Row : ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಹುಡುಗಿಗೆ ಸಲ್ಮಾನ್-ಅಮೀರ್ ಕೊಟ್ಟರಾ 3 ಕೋಟಿ? ಸತ್ಯ ಇಲ್ಲಿದೆ!
ಚಂದನವನದಲ್ಲಿ ಲವ್ ಸ್ಟೋರಿಗಳಿಗೆ ಕೊರತೆ ಏನಿಲ್ಲ. ಆದ್ರೆ ಈ ಬಾರಿ ಡಿಫರೆಂಟ್ ಲವ್ ಸ್ಟೋರಿಯೊಂದನ್ನು ಹೇಳೋದಕ್ಕೆ 'ಬೈ ಟು ಲವ್'(By Two Love) ಟೀಂ ಸಜ್ಜಾಗಿದೆ. 'ಬಜಾರ್' ಹೀರೋ ಧನ್ವೀರ್, 'ಭರ್ಜರಿ' ಚಿತ್ರದ ಶ್ರೀಲೀಲಾ ಸ್ಯಾಂಡಲ್ವುಡ್ ಸಿನಿ ಪ್ರಿಯರಿಗೆ ಪ್ರೀತಿಯ ಕಥೆ ಹೇಳಲು ರೆಡಿಯಾಗಿದ್ದಾರೆ.
ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್ ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿದ್ದೇ ಸಿಕ್ಕಿದ್ದು ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೀಗೆ 'ಬಜಾರ್' ಸಿನಿಮಾದ ಹೀರೋ ಧನ್ವೀರ್(Dhanveer Gowda) ಹಾಗೂ 'ಭರ್ಜರಿ' ಚಿತ್ರದ ಶ್ರೀಲೀಲಾ(Sreeleela) ಸದ್ಯಕ್ಕೆ 'ಬೈ ಟು ಲವ್' ಕಥೆ ಹೇಳಲು ಸಜ್ಜಾಗಿದ್ದಾರೆ.
ಬಹುಬೇಗ ಎಂಟ್ರಿ
ಹರಿ ಸಂತೋಶ್ ನಿರ್ದೇಶನದ, 'ಬೈ ಟು ಲವ್'(By Two Love) ಬಹುಬೇಗನೇ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಫೆಬ್ರವರಿ 24ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಅಂದುಕೊಂಡಿದ್ದಕ್ಕಿಂತ 1 ವಾರ ಮೊದಲೇ ಸಿನಿಮಾ ಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದೆ.
ಇದನ್ನೂ ಓದಿ : ‘ಮೆಜೆಸ್ಟಿಕ್’ ಚಿತ್ರಕ್ಕೆ 20 ವರ್ಷ: ಹಳೆಯ ದಿನಗಳನ್ನು ನೆನೆದು ದರ್ಶನ್ ಭಾವುಕ
ಮಲೆನಾಡ ಹುಡುಗಿ..!
ಇಲ್ಲಿ 'ಬೈ ಟು ಲವ್' ಟೀಂ ದಾವಣಗೆರೆಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಒಂದು ಕಾರಣವಿದೆ. ಸಿನಿಮಾದಲ್ಲಿ ಧನ್ವೀರ್(Dhanveer) ದಾವಣಗೆರೆ ಹುಡುಗನಾಗಿದ್ರೆ, ಶ್ರೀಲೀಲಾ ಮಲೆನಾಡ ಹುಡುಗಿ ಅಂತೆ. ಈ ಕಾರಣಕ್ಕೆ ದಾವಣೆಗೆರೆಯಿಂದಲೇ ಚಿತ್ರತಂಡದ ಪ್ರಚಾರ ಕಾರ್ಯ ಶುರುವಾಗಿದೆ. 'ಬೈ ಟು ಲವ್'ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಕೇಳುಗರನ್ನ ರಂಜಿಸುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.