ವಿಮಾನದಲ್ಲಿ 'ದಂಗಲ್' ಖ್ಯಾತಿ ಜೈರಾಗೆ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ

     

Last Updated : Dec 10, 2017, 02:32 PM IST
ವಿಮಾನದಲ್ಲಿ 'ದಂಗಲ್' ಖ್ಯಾತಿ ಜೈರಾಗೆ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ title=

ನವದೆಹಲಿ: ದಂಗಲ್ ಖ್ಯಾತಿಯ ನಟಿ ಜೈರಾ ವಾಸಿಮ್ ದೆಹಲಿಯಿಂದ ಮುಂಬೈಗೆ ತೆರಳುವ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಘಟನೆ ನಡೆದಿದೆ.
 
ಶನಿವಾರದಂದು ಈ ಕಹಿ ಘಟನೆಯ ಕುರಿತಾಗಿ ವಿವರಿಸಿದ ಜೈರಾ ಇತ್ತೀಚಿಗೆ 'ವಿಸ್ತಾರ್' ಕಂಪನಿಯ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿದಾಗ ಅವಳ ಹಿಂಬದಿಯ ಸಿಟ್ ನಲ್ಲಿ  ಕುಳಿತಿದ್ದ ಮಧ್ಯವಯಸ್ಕನೊಬ್ಬ ಜೈರಾಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ ಎಂದು  ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಈ ಘಟನೆಯ ಕುರಿತಾಗಿ ಪ್ರತಿಕ್ರಯಿಸಿರುವ ವಿಸ್ತಾರ್ ಕಂಪನಿ "ಜೈರಾ ವಾಸಿಮ್ ರವರ ಈ ಘಟನೆಯ ಅನುಭವದ ವರದಿ ಕಂಪನಿಯ ಗಮನಕ್ಕೆ ಬಂದಿದ್ದು.ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಯನ್ನು ಆರಂಭಿಸಲಾಗಿದೆ, ಅದಕ್ಕೆ ಬೇಕಾಗುವ ಪೂರಕ ಮಾಹಿತಿಯನ್ನು ಜೈರಾರವರಿಂದಲೂ ಸಹ ಪಡೆದುಕೊಳ್ಳಲಾಗುತ್ತದೆ ಎಂದು ವಿಸ್ತಾರ್ ತಿಳಿಸಿದೆ.  

Trending News