ʼದಾಸʼನ ದರ್ಬಾರ್‌ಗೆ 19 ವರ್ಷ : DBoss ರಕ್ತಸಿಕ್ತ ಚರಿತ್ರೆ ಇಂದಿಗೂ ಫೇಮಸ್‌ ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಾಸʼ ಸಿನಿಮಾ ಬಿಡುಗಡೆಯಾಗಿ ಇಂದಿಗೆ 19 ವರ್ಷ ಗತಿಸಿವೆ. 21 ನವೆಂಬರ್‌ 2003 ರಂದು ಬಿಡುಗಡೆಯಾದ ದರ್ಶನ್‌ ಸಿನಿಮಾ ಸ್ಯಾಂಡಲ್‌ವುಡ್‌ನ ಬ್ಲಾಕ್ಬಸ್ಟರ್‌ ಸಿನಿಮಾಗಳಲ್ಲಿ ಒಂದು. ಇಂದಿಗೂ ದಾಸ ಸಿನಿಮಾಗೆ ಭಾರಿ ಬೇಡಿಕೆ ಇದೆ. ಸಿನಿಮಾದಲ್ಲಿ ದರ್ಶನ್‌ ನಟನೆ ಪ್ರೇಕ್ಷಕರನ್ನು ನಿಬ್ಬೆರಾಗುವಂತೆ ಮಾಡಿತ್ತು.

Written by - Krishna N K | Last Updated : Nov 23, 2022, 02:18 PM IST
  • ದರ್ಶನ್ ಅಭಿನಯದ ʼದಾಸʼ ಸಿನಿಮಾ ಬಿಡುಗಡೆಯಾಗಿ ಇಂದಿಗೆ 19 ವರ್ಷ
  • ಅಂದು ಇದ್ದ ಕ್ರೇಜ್‌ ಇಂದಿಗೂ ದಾಸ ಸಿನಿಮಾದ ಮೇಲೆ ಇದೆ
  • ಮುಗ್ದ ಕಾಲೇಜು ಹುಡುಗ ಒಬ್ಬ ನಟೋರಿಸ್‌ ರೌಡಿ ದಾಸನಾಗಿ ಬದಲಾಗುವ ಕಥೆಯೇ ದಾಸ
ʼದಾಸʼನ ದರ್ಬಾರ್‌ಗೆ 19 ವರ್ಷ : DBoss ರಕ್ತಸಿಕ್ತ ಚರಿತ್ರೆ ಇಂದಿಗೂ ಫೇಮಸ್‌ ..! title=

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಾಸʼ ಸಿನಿಮಾ ಬಿಡುಗಡೆಯಾಗಿ ಇಂದಿಗೆ 19 ವರ್ಷ ಗತಿಸಿವೆ. 21 ನವೆಂಬರ್‌ 2003 ರಂದು ಬಿಡುಗಡೆಯಾದ ದರ್ಶನ್‌ ಸಿನಿಮಾ ಸ್ಯಾಂಡಲ್‌ವುಡ್‌ನ ಬ್ಲಾಕ್ಬಸ್ಟರ್‌ ಸಿನಿಮಾಗಳಲ್ಲಿ ಒಂದು. ಇಂದಿಗೂ ದಾಸ ಸಿನಿಮಾಗೆ ಭಾರಿ ಬೇಡಿಕೆ ಇದೆ. ಸಿನಿಮಾದಲ್ಲಿ ದರ್ಶನ್‌ ನಟನೆ ಪ್ರೇಕ್ಷಕರನ್ನು ನಿಬ್ಬೆರಾಗುವಂತೆ ಮಾಡಿತ್ತು.

ಹೌದು.. ಪಿ.ಎನ್‌. ಸತ್ಯ ನಿರ್ದೇಶನ ದಾಸ ಸಿನಿಮಾ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳು ತುಂಬಿವೆ. ಅಂದು ಇದ್ದ ಕ್ರೇಜ್‌ ಇಂದಿಗೂ ದಾಸ ಸಿನಿಮಾದ ಮೇಲೆ ಇದೆ. ಮುಗ್ದ ಕಾಲೇಜು ಹುಡುಗ ಒಬ್ಬ ನಟೋರಿಸ್‌ ರೌಡಿ ದಾಸನಾಗಿ ಬದಲಾಗುವ ಕಥೆ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ಮಾಡಿತ್ತು. ತಾಯಿಗೆ ಕೊಟ್ಟ ಮಾತು, ಕಡುಬಡತನ, ಯುವತಿಯ ಪ್ರೀತಿಯ ಬಲೆಗೆ ಸಿಲುಕಿ ರೌಡಿ ಆಗುವ ದಾಸನ ಸ್ಟೋರಿ ರೋಚಕವಾಗಿದೆ.

ಇದನ್ನೂ ಓದಿ: Priyanka Chopra daughter : ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

ರಾಯಲ್‌ ಪ್ರೋಡಕ್ಷನ್‌ ಬ್ಯಾನರ್‌ ಅಡಿ ನಿರ್ಮಾಣವಾದ ಸಿನಿಮಾದಲ್ಲಿ ದರ್ಶನ್‌, ಅಮೃತ, ಅವಿನಾಶ್‌, ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಸಿನಿಮಾದಲ್ಲಿದೆ. ದಾಸ ಸಿನಿಮಾಗೆ ಖ್ಯಾತ ಹಾಸ್ಯನಟ, ಸಾಧುಕೋಕಿಲ ಅವರ ಸಂಗೀತ ನಿರ್ದೇಶನ ಇದೆ. ಯಾವಳಪ್ಪಾ ರಾಣಿ ರಾಣಿ ರಸಿಕರ ರಾಣಿ ಮಹಾರಾಣಿ, ಕುಲುಕಬೇಡ ಕುಲುಕಬೇಡ ಸಿಲುಕು ಹಾಡುಗಳಂತು ಇಂದಿಗೂ ಫೇಮಸ್‌. 

ಸದ್ಯ ದರ್ಶನ್‌ ಅವರ ಕ್ರಾಂತಿ ಸಿನಿಮಾವನ್ನು ಅವರ ಅಭಿಮಾನಿಗಳೇ ಬರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ವಿ. ಹರಿಕೃಷ್ಣ ನಿರ್ದೇಶನದ ʼಕ್ರಾಂತಿʼಗೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್‌ ಅಭಿಮಾನಿಗಳಿಗೆ ಇನ್ನೊಂದು ಖುಷಿ ವಿಚಾರ ಅಂದ್ರೆ ತರುಣ್‌ ಸುದೀಪ್‌ ಅವರ ನಿರ್ದೇಶನದಲ್ಲಿ D56 ಸಿನಿಮಾ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News