ಸಾತನೂರು : ಸೋಮವಾರದ ಹೊತ್ತಿಗೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯಾಗಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬಸ್ ಗಳು ಸರಿಯಾದ ಸಮಯಕ್ಕೆ ಬರದ ಕಾರಣಕ್ಕೆ ನಾವು ವಾರಕ್ಕೆ ಮೂರು ದಿನ ಕ್ಲಾಸಿಗೆ ಸರಿಯಾಗಿ ಬರಲು ಆಗುತ್ತಿಲ್ಲ. ನಮಗೆ ಹರಿಹರದಿಂದ ಸಾತಾನೂರುವರೆಗೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಬೇಕು ಎಂದು ಸಾತನೂರು ಗ್ರಾಮಾಂತರ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಹರ್ಷಿತ, ಗಾನವಿ, ಕುಸುಮ, ಕೀರ್ತನ, ದಿವ್ಯ ಅವರ ಮನವಿಗೆ ಡಿಸಿಎಂ ಸ್ಪಂದಿಸಿದ್ದು ಹೀಗೆ.
ಇದನ್ನೂ ಓದಿ:ಬಿಗ್‌ಬಾಸ್ ಮನೆಯ 4ನೇ ಸ್ಪರ್ಧಿ ಇವರೇ! ಎರಡು ಕೋಟಿ ಗೋಲ್ಡ್ ಹಾಕೊಂಡು ಓಡಾಡೋ ಈತ ಯಾರು ಗೊತ್ತೇ?
ಸಾತನೂರಿನ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯರಾದ ತೇಜಸ್ವಿನಿ, ಶ್ವೇತಾ, ಅನು, ಮಂಗಳ ಗೌರಿ ಅವರು "ನಮ್ಮ ಊರುಗಳಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂದಾಗ "ಈ ವಿದ್ಯಾರ್ಥಿಗಳು ಪ್ರಯಾಣ ಮಾಡುವ ಹಲಗೂರಿನಿಂದ ಕನಕಪುರಕ್ಕೆ ಬರುವ ಬಸ್ ಗಳು ಪ್ರತಿ ಹಳ್ಳಿಗಳಲ್ಲಿ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂದು ಕೆಎಸ್ ಆರ್ ಟಿಸಿ ಡಿಟಿಓ ರಾಘವೇಂದ್ರ ಅವರನ್ನು ಕರೆದು ಸೂಚನೆ ನೀಡಿದರು.
ನಾನು ಪಕ್ಕಾ ಡಿ.ಕೆ.ಸುರೇಶ್ ಅಭಿಮಾನಿ : ನಾನು ಪಕ್ಕಾ ಕಾಂಗ್ರೆಸ್ ಅಭಿಮಾನಿ, ಡಿ.ಕೆ. ಸುರೇಶ್ ಪರವಾಗಿ ಕೆಲಸ ಮಾಡುತ್ತಾ ಇದ್ದೇನೆ. ನನಗೆ ಬಗರ್ ಹುಕುಂ ಜಮೀನು ನೀಡಿ ಎಂದು ಸೋರೆಕಾಯಿದೊಡ್ಡಿಯ ಸುಶೀಲಮ್ಮ ಅವರು ಮನವಿ ಮಾಡಿದಾಗ ಸುರೇಶ್ ಅವರಿಗೆ ಹೇಳುತ್ತೇನೆ ಈ ಬಾರಿ ನಿನಗೆ ಜಮೀನು ಕೈ ತಪ್ಪುವುದಿಲ್ಲ ಎಂದು ಭರವಸೆ ನೀಡಿದರು.
ಈ ಸಮಸ್ಯೆ ಮಾತ್ರ ಮರೆಯಬೇಡಿ : ಸಾತನೂರು ಪಟ್ಟಣದ ಸುಮಾರು 90 ವರ್ಷದ ಕೆಂಚೇಗೌಡ ಅವರು ನನಗೆ ಪಿಂಚಣಿ ಬರುವುದು ನಿಂತು ಹೋಗಿ ಒಂದೂವರೆ ವರ್ಷಗಳಾಗಿವೆ. ನೀವೇ ಪರಿಹಾರ ನೀಡಿ" ಎಂದು ಕೇಳಿದಾಗ "ಇವರ ಸಮಸ್ಯೆಯನ್ನೂ ಯಾವುದೇ ಕಾರಣಕ್ಕೂ ಮರೆಯಬೇಡಿ, ಕೂಡಲೇ ಬಗೆಹರಿಸಿ ಎಂದು ಖಡಕ್ ಸೂಚನೆ ನೀಡಿದರು.
ಸಾತನೂರಿನ ಜಯಮ್ಮ ಅವರು ಸ್ವಾಮಿ ನಿಮ್ಮ ಊರಿನವಳಾದ ನನಗೇ ಸರಿಯಾಗಿ ಪಿಂಚಣಿ ಬರುತ್ತಿಲ್ಲ ಎಂದಾಗ ಮುಂದಿನ ದಿನಗಳಿಂದ ಸರಿಯಾಗಿ ಬರುತ್ತದೆ ಎಂದು ನಗುತ್ತಲೇ ಉತ್ತರಿಸಿದರು.
ಜ್ಞಾನಭಾರತಿಯಲ್ಲಿ ಸೀಟು ಕೊಡಿಸಿ : ನಾಗರಸನಕೋಟೆಯ ಚೈತ್ರ ಅವರು ಬೆಂಗಳೂರಿನ ಜ್ಞಾನಭಾರತಿಯಲ್ಲಿ ಎಂಸಿಎ ಸೀಟು ಕೊಡಿಸಿ ಎಂದು ಮನವಿ ಮಾಡಿದಾಗ ಪಕ್ಕದಲ್ಲಿಯೇ ಇದ್ದ ಕರಿಯಪ್ಪ ರೂರಲ್ ಕಾಲೇಜಿನ ಅಧ್ಯಕ್ಷ ಶ್ರೀಕಂಠು ಅವರನ್ನು ಕರೆದು "ನಿಮ್ಮ ಕಾಲೇಜಿನಲ್ಲಿ ಸೀಟು ಕೊಡಿ" ಎಂದರು. ವಿದ್ಯಾರ್ಥಿನಿಯನ್ನು ಕುರಿತು "ಅಷ್ಟು ದೂರ ಏಕೆ? ಈ ಕಾಲೇಜು ಚೆನ್ನಾಗಿದೆ, ಇಲ್ಲಿಯೇ ಓದು " ಎಂದು ಹೇಳಿದರು.
ಇದನ್ನೂ ಓದಿ:BBK 11 : ಬಿಗ್ ಬಾಸ್ 11ರ ಮನೆಗೆ ʼಹಿಂದೂ ಪರ ಫೈರ್ ಬ್ರಾಂಡ್ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್
ಸಾಸಲುಪುರದ ಲಕ್ಷ್ಮಮ್ಮ ಮನೆ ನೀಡಿ ಎಂದು ಮನವಿ ಸಲ್ಲಿಸಿದರು. ನಾಗರಸನಕೋಟೆಯ ವಿನೋದಮ್ಮ ದಾಸಪ್ಪ ಅವರು ಹಸು ಸಾಕಾಣಿಕೆ ಶೆಡ್ ಕಟ್ಟಲು ಸಹಾಯಧನ ಕೊಡಿಸಿ ಎಂದು ಮನವಿ ಸಲ್ಲಿಸಿದರು. ಹೊನಗಳ್ಳಿಯ ವೆಂಕಟಮ್ಮ ಅವರು ಸಂಸಾರ ದೊಡ್ಡದಾಗಿದ್ದು ಮನೆ ಕೊಡಿ ಎಂದು ಮನವಿ ಮಾಡಿದರು. ಸಾಸಲಪುರದ ಪುಟ್ಟತಾಯಮ್ಮ ಕಬ್ಬಾಳು, ಕುರುಬಳ್ಳಿ ದೊಡ್ಡಿ, ಸಾಸಲಪುರ ಮಾರ್ಗವಾಗಿ ಬಸ್ ವ್ಯವಸ್ಥೆಗೆ ಮನವಿ ಸಲ್ಲಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.