ದೀಪಿಕಾ-ರಣವೀರ್ ಮದುವೆಗಾಗಿ ನವೆಂಬರ್ 15ನ್ನು ಆಯ್ಕೆ ಮಾಡಲು ಕಾರಣ ಏನ್ ಗೊತ್ತಾ?

ಕಳೆದ ಕೆಲ ದಿನಗಳಿಂದೀಚೆಗೆ ದೀಪಿಕಾ-ರಣವೀರ್ ವಿವಾಹದ ಬಗ್ಗೆ ಹಲವು ಊಹಾಪೋಹಗಳಿದ್ದವು. ಇದೀಗ ಈ ಜೋಡಿ ತಮ್ಮ ವಿವಾಹದ ದಿನಾಂಕವನ್ನು ನಿಗದಿಮಾಡಿದೆ.

Last Updated : Oct 22, 2018, 01:54 PM IST
ದೀಪಿಕಾ-ರಣವೀರ್ ಮದುವೆಗಾಗಿ ನವೆಂಬರ್ 15ನ್ನು ಆಯ್ಕೆ ಮಾಡಲು ಕಾರಣ ಏನ್ ಗೊತ್ತಾ? title=
Pic: Instagram@britishbindi

ನವದೆಹಲಿ: ಯಾವುದೇ ಜೋಡಿ ತಮ್ಮ ಪ್ರೇಮವನ್ನು ಮದುವೆಯೆಂಬ ಬಂಧನದಲ್ಲಿ ಬಂದಿಸಲು ನಿರ್ಧರಿಸುವಾಗ ಅವರಲ್ಲಿ ಅನೇಕ ಕನಸುಗಳಿರುತ್ತವೆ. ಈ ವಿಷಯದಲ್ಲಿ ನಮ್ಮ ಬಾಲಿವುಡ್ ಸೆಲೆಬ್ರೆಟಿಗಳು ಪರದೆಯ ಮೇಲೆ ಮಾತ್ರವಲ್ಲ, ಆಫ್ ಸ್ಕ್ರೀನ್ ನಲ್ಲೂ ಬಹಳ ರೋಮ್ಯಾಂಟಿಕ್. 

ಬಾಲಿವುಡ್ ನಲ್ಲಿ ಹೆಚ್ಚು ಟ್ರೆಂಡ್ ಆಗಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ  ಜೋಡಿ ನಿನ್ನೆ ತಮ್ಮ ಮದುವೆ ದಿನಾಂಕವನ್ನು ಘೋಷಿಸುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಆ ಸುದ್ದಿ ದೇಶಾದ್ಯಂತ ಹರಡಿತು. ಈ ಜೋಡಿಯ ಮದುವೆಗೆ ನವೆಂಬರ್ 14 ಮತ್ತು 15ರಂದು ದಿನಾಂಕವನ್ನು ನಿಶ್ಚಯಗೊಳಿಸಲಾಗಿದೆ. ಆದರೆ ಈ ಜೋಡಿ ಅದೇ ದಿನಾಂಕವನ್ನು ಆಯ್ಕೆ ಮಾಡಿರುವುದರ ಹಿಂದಿನ ಸಿಕ್ರೆಟ್ ಏನು ಗೊತ್ತೇ? 

ಈ ದಿನಾಂಕವು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರೇಮ ಕಹಾನಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ಅದೇ ದಿನಾಂಕದಲ್ಲಿ ಮೊದಲ ಚಿತ್ರ ಬಿಡುಗಡೆ:
ದೀಪಿಕಾ ರಣವೀರ್ ಅವರ ಜೋಡಿಯು ತೆರೆಯಲ್ಲಿ ಬಹಳ ಹೆಸರು ಮಾಡಿದ ಜೋಡಿ. ಇಬ್ಬರೂ 'ರಾಮ್ ಲೀಲಾ', 'ಬಾಜಿರಾವ್ ಮಸ್ತಾನಿ' ಮತ್ತು 'ಪದ್ಮಾವತ್' ಎಂಬ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವುಗಳಲ್ಲಿ ಎರಡನ್ನೂ ಮೊದಲ ಬಾರಿಗೆ 2013 ರಲ್ಲಿ 'ಗುಲಿಯೋಂಕಿ ರಾಸ್ಲೀಲಾ-ರಾಮ್ಲೀಲಾ' ಚಿತ್ರದಲ್ಲಿ ನೋಡಲಾಗಿತ್ತು. ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿತು.

ಅದೇ ಸಮಯದಲ್ಲಿ ಅವರಿಬ್ಬರ ಪ್ರೇಮಾಂಕುರ ಪ್ರಾರಂಭವಾಗಿತ್ತು. ಈ ಚಿತ್ರ ಬಿಡುಗಡೆಯಾದ ದಿನಾಂಕ ನವೆಂಬರ್ 15 ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದ್ದರಿಂದ ಅದೇ ದಿನಾಂಕದಂದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಇಬ್ಬರೂ ತೀರ್ಮಾನಿಸಿರಬಹುದು ಎನ್ನಲಾಗುತ್ತಿದೆ.

Trending News