TikTokಗೆ ಕಾಲಿಟ್ಟ ಗುಳಿಕೆನ್ನೆ ಬೆಡಗಿ? ೧೨ ಗಂಟೆಯೊಳಗೆ ಹಿಂಬಾಲಿಸಿದವರೆಷ್ಟು?

ತನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಟಿಕ್-ಟಾಕ್ ಕೆ ಕಾಲಿಟ್ಟ ಈ ಗುಳಿಕೆನ್ನೆ ಬೆಡಗಿ ಅಪಾರ ಪ್ರಮಾಣದ ಅಭಿಮಾನಿಗಳ ಬಳಗ ಹೊಂದಿದ್ದಾರೆ.

Last Updated : Jan 6, 2020, 03:12 PM IST
TikTokಗೆ ಕಾಲಿಟ್ಟ ಗುಳಿಕೆನ್ನೆ ಬೆಡಗಿ? ೧೨ ಗಂಟೆಯೊಳಗೆ ಹಿಂಬಾಲಿಸಿದವರೆಷ್ಟು? title=

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಎಲ್ಲ ಕಲಾವಿದರ ಎಲ್ಲ ಸಾಮಾಜಿಕ ಪ್ಲಾಟ್ಫಾರ್ಮ್ ಗಳ ಮೇಲೆ ತಮ್ಮ ಖಾತೆ ತೆರೆಯಲು ಇಷ್ಟಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ-ಟೌನ್ ನ ಅತ್ಯಂತ ಸುಂದರ ಬೆಡಗಿ ಹಾಗೂ ನಟಿ ದೀಪಿಕಾ ಪಡುಕೋಣೆ ಕೂಡ ಟಿಕ್-ಟಾಕ್ ಮೇಲೆ ತಮ್ಮ ಯಾತ್ರೆ ಆರಂಭಿಸಿದ್ದಾರೆ. ತನ್ನ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಟಿಕ್-ಟಾಕ್ ಗೆ ಕಾಲಿಟ್ಟ ಈ ಗುಳಿಕೆನ್ನೆ ಬೆಡಗಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾಳೆ.

@deepikapadukone

Hope I’m not too late to the party!🎉@riyaz.14 @awezdarbar

♬ original sound - deepikapadukone

ದೀಪಿಕಾ ಇಟ್ಟಿರುವ ಈ ಹೆಜ್ಜೆಯಿಂದ ಅವರ ಅಭಿಮಾನಿ ಬಳಗ ತುಂಬಾ ಸಂತಸ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಟಿಗೆ ಇದಕ್ಕಾಗಿ ಶುಭಕೋರಿದ್ದಾರೆ. ದೀಪಿಕಾ ಟಿಕ್-ಟಾಕ್ ಗೆ ಕಾಲಿಡುತ್ತಿದ್ದಂತೆ ಕೇವಲ ೧೨ ಗಂಟೆಗಳಲ್ಲಿ ೧೨ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅವರನ್ನು ಹಿಂಬಾಲಿಸಿದ್ದಾರೆ. ಸದ್ಯ ಅವರ ಹಿಂಬಾಲಕರ ಸಂಖ್ಯೆ ೩೦ ಲಕ್ಷಕ್ಕೆ ತಲುಪಿದೆ.

@deepikapadukone

Latt Patt Latt Patt!💋 @nagmaa

♬ original sound - deepikapadukone

ಈ ಸಂದರ್ಭದಲ್ಲಿ ದೀಪಿಕಾ ತನ್ನ ಅಧಿಕೃತ ಟಿಕ್-ಟಾಕ್ ಹ್ಯಾಂಡಲ್ ಮೂಲಕ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಕೆಲ ಟಿಕ್-ಟಾಕ್ ಸ್ಟಾರ್ ಗಳ ಜೊತೆಗೆ ಕಂಡುಬಂದಿದ್ದು, ತಾವೂ ಕೂಡ ಈ ಟ್ರೆಂಡಿಂಗ್ ಪ್ಲಾಟ್ಫಾರ್ಮ್ ಮೇಲೆ ಲಗ್ಗೆ ಇಟ್ಟಿರುವುದಾಗಿ ಘೋಷಿಸಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ೩೦ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

@deepikapadukone

bohut zyaada masti...dher sara pyaar...❤ @thelaxmiagarwalpihu

♬ original sound - deepikapadukone

ಟಿಕ್-ತಾಕ್ ಮೇಲೆ ಇದುವರೆಗೆ ದೀಪಿಕಾ ೧೧ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಇವುಗಳಲ್ಲಿ ಆಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೊತೆಗೆ ಎರಡು ವಿಡಿಯೋಗಳಲ್ಲಿ ದೀಪಿಕಾ ಕಂಡುಬಂದಿದ್ದಾರೆ. ದೀಪಿಕಾಗೂ ಮೊದಲು ಶಿಲ್ಪಾ ಶೆಟ್ಟಿ ಕುಂದ್ರಾ ಕೂಡ ಈ ಟ್ರೆಂಡಿಂಗ್ ಪ್ಲಾಟ್ಫಾರ್ಮ್ ಗೆ ಲಗ್ಗೆ ಇಟ್ಟಿದ್ದಾರೆ. ದೀಪಿಕಾ ಸದ್ಯ ತಮ್ಮ ಮುಂಬರುವ ಚಿತ್ರ 'ಛಪಾಕ್'ನ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

@deepikapadukone

Swaaaag Se Swaagat!😎@awezdarbar @riyaz.14 @faby_makeupartist @nagmaa @gunjanshouts @thelaxmiagarwalpihu

♬ original sound - deepikapadukone

Trending News