ಬೆದರಿಕೆಗೆ ಹೆದರುವುದಿಲ್ಲ, ದೇಶ ಬಿಟ್ಟು ಹೋಗುವುದಿಲ್ಲ : ದೀಪಿಕಾ ಹೀಗೆ ಅಂದಿದ್ದು ಯಾರಿಗೆ..?

Deepika Padukone : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ತಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಅಂತ ಖಡಕ್‌ ಆಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇಶ ಬಿಟ್ಟು ಹೋಗುವ ಮಾತೇ ಇಲ್ಲ ಅಂತ ಖಡಾ ಖಂಡಿತವಾಗಿ ನುಡಿದಿದ್ದಾರೆ. ಆದ್ರೆ ದೀಪಿಕಾ ಈ ಮಾತನ್ನು ಈಗ ಯಾಕೆ ಹೇಳಿದ್ರು ಎನ್ನುವುದೇ ಕುತೂಹಲಕಾರಿಯಾಗಿದೆ.

Written by - Krishna N K | Last Updated : Nov 15, 2023, 04:07 PM IST
  • ಯಾವುದೇ ಬೆದರಿಕೆಗೆ ಹೆದರುವುದಿಲ್ಲ
  • ದೇಶ ಬಿಟ್ಟು ಹೋಗುವ ಮಾತೇ ಇಲ್ಲ
  • ನಟಿ ದೀಪಿಕಾ ಪಡುಕೋಣೆ ಖಡಕ್‌ ಮಾತು
ಬೆದರಿಕೆಗೆ ಹೆದರುವುದಿಲ್ಲ, ದೇಶ ಬಿಟ್ಟು ಹೋಗುವುದಿಲ್ಲ : ದೀಪಿಕಾ ಹೀಗೆ ಅಂದಿದ್ದು ಯಾರಿಗೆ..? title=

Deepika padukone : ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ನಂತರ ಹೆಚ್ಚು ಗುರುತಿಸಲ್ಪಟ್ಟ ನಟಿ. ಸೌಂದರ್ಯ, ನಟನೆ ಮತ್ತು ಆಕ್ಷನ್ ಯಾವುದಕ್ಕೂ ಸಿದ್ಧ ಈ ಕನ್ನಡದ ಸುಂದರಿ ಸದಾ ಸಿದ್ಧ.  ಬಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿ ಸದಾ ಬ್ಯುಸಿಯಾಗಿರುತ್ತಾರೆ. ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಜೊತೆಗಿನ ಮದುವೆಯ ನಂತರ ವೈವಾಹಿಕ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಆದ್ರೆ ಇತ್ತೀಚಿಗೆ ಅವರು ಯಾರಿಗೂ ಹೆದರಲ್ಲ, ದೇಶ ಬಿಡಲ್ಲ ಎಂದು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿವೆ.

ಹೌದು.. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ದೀಪಿಕಾ ರಣವೀರ್‌, ತಮ್ಮ ವೃತ್ತಿಜೀವನದ ಜೊತೆಗೆ ಅನೇಕ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಬೆಳೆಯುವಾಗ ಹಲವು ಸವಾಲುಗಳು ಎದುರಾಗಿವೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ಎಷ್ಟೇ ಕಷ್ಟ ಬಂದರೂ ಹೆದರಿಸಿ ತೋರಿಸುತ್ತೇನೆ ಎಂದಿದ್ದಾರೆ ದೀಪಿಕಾ.

ಇದನ್ನೂ ಓದಿ: ಬಾಲಿವುಡ್‌ ಕಿಂಗ್‌ ಶಾರುಖ್‌ ಖಾನ್‌ ಅವರ ಸಹೋದರಿ ಯಾರು ಗೊತ್ತೇ?

ನಾನು ಯಾರಿಗೂ ಹೆದರುವುದಿಲ್ಲ. ಮೊದಲು ನಾನು ಜೆಎನ್‌ಯು ವಿದ್ಯಾರ್ಥಿಗಳ ಪರವಾಗಿ ನಿಲ್ಲಬೇಕು ಎಂದು ಭಾವಿಸಿದ್ದೆ. ನಾನು ಅಂದುಕೊಂಡಂತೆ ಮಾಡಿದೆ. ಆ ಸಮಯದಲ್ಲಿ ಅನೇಕ ಬೆದರಿಕೆಗಳು ಬಂದವು. ನಾನು ಅನೇಕ ಒತ್ತಡಗಳನ್ನು ಎದುರಿಸಿದೆ. ಆದರೆ, ಅವರನ್ನು ಲೆಕ್ಕಿಸದೆ ತೆಗೆದುಕೊಂಡ ನಿಲುವಿನ ಮೇಲೆ ನಿಂತಿದ್ದೇನೆ. ಮೌಲ್ಯಗಳಿರುವ ಸಂಸಾರದಲ್ಲಿ ಭಯ ತಿಳಿಯದೆ ಬೆಳೆದೆ. ಅಕಸ್ಮಾತ್ ನಾನು ತಪ್ಪು ನಿರ್ಧಾರ ತೆಗೆದುಕೊಂಡರೆ, ಕ್ಷಮೆ ಕೇಳಲು ಹಿಂಜರಿಯುವುದಿಲ್ಲ ಎಂದು ದೀಪಿಕಾ ತಮ್ಮ ಸ್ಪಷ್ಟ ನಿಲುವಿನ ಬಗ್ಗೆ ಹೇಳಿಕೊಂಡಿದ್ದಾರೆ. 

ಮಾಡೆಲ್ ಆಗಿ ಕೆರಿಯರ್ ಆರಂಭಿಸಿದಾಗ ನಾಯಕಿಯಾಗಿ ಮಿಂಚಲು ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ಆ ಸಮಯದಲ್ಲಿ ಅನೇಕರು ಪ್ಯಾರಿಸ್‌ಗೆ ಹೋಗುವಂತೆ ಸಲಹೆ ನೀಡಿದರು. ಅಲ್ಲಿ ನೀವು ಉತ್ತಮ ಸಾಧನೆ ಮಾಡುತ್ತೀರಿ ಅಂತ ಹೇಳಿದರು. ಆದರೆ ನಾನೇಕೆ ನನ್ನ ದೇಶವನ್ನು ತೊರೆಯಬೇಕು? ಎಂದು ಯೋಚಿಸಿದೆ. ಜಾಗತಿಕ ತಾರೆಯಾಗಲು ಬೇರೆ ದೇಶಕ್ಕೆ ಏಕೆ ಹೋಗಬೇಕೆ..?. ಇಲ್ಲಿಯೇ ಇದ್ದು, ಜಾಗತಿಕ ತಾರೆಯಾಗಿ ಮಿಂಚಬೇಕು ಎಂದುಕೊಂಡಿದ್ದೆ. ನಾನು ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದೇನೆ. ಅದರ ನಂತರ, ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಜ್ಯೂರಿ ಸದಸ್ಯನಾಗಿ ಫ್ರಾನ್ಸ್‌ಗೆ ಹೋದಾಗ, ಅಲ್ಲಿ ನನ್ನ ಹೋರ್ಡಿಂಗ್‌ಗಳನ್ನು ಹಾಕಲಾಯಿತು. ಅದನ್ನು ನೋಡಿ ನಾನು ಬಯಸಿದ್ದನ್ನು ಸಾಧಿಸಿದೆ ಎಂದು ಹೆಮ್ಮೆ ಪಟ್ಟೆ ಎಂದು ದೀಪಿಕಾ ದೇಶದ ಮೇಲಿರುವ ಅಭಿಮಾನದ ಬಗ್ಗೆ ವಿವರಿಸಿದರು..

ಸಧ್ಯ ದೀಪಿಕಾ ಟಾಲಿವುಡ್‌ ಸ್ಟಾರ್‌ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಜೊತೆಗೆ 'ಫೈಟರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News