Video: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಫ್ರೂಫ್ ಕೇಳಿದ ಸೆಕ್ಯುರಿಟಿ ಮ್ಯಾನ್..!

 ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಪ್ರೂಫ್ ಕೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Last Updated : Jun 23, 2019, 12:27 PM IST
Video: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಫ್ರೂಫ್ ಕೇಳಿದ ಸೆಕ್ಯುರಿಟಿ ಮ್ಯಾನ್..! title=
Photo courtesy: Instagram

ನವದೆಹಲಿ:  ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಪ್ರೂಫ್ ಕೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 
 
 
 

 
 
 
 
 
 
 
 
 

Thy shall always obey rules 👍 #deepikapadukone

A post shared by Viral Bhayani (@viralbhayani) on

ದೀಪಿಕಾ ಪಡುಕೋಣೆ ಹಾಗೂ ತಂದೆ ಪ್ರಕಾಶ್ ಪಡುಕೋಣೆ ಮುಂಬೈ ನಿಂದ ಬೆಂಗಳೂರಿಗೆ ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ಐಡಿ ಪ್ರೂಫ್ ಕೇಳಿದ್ದಾರೆ. ಇದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿ ನಂತರ ಚಾಹಿಯೇ ? ಎಂದು ಹಿಂದಿಯಲ್ಲಿ ಕೇಳಿದ್ದಾರೆ. ನಂತರ ಅವರು ಮುಂದೆ ಹೋಗಿ ಸೆಕ್ಯುರಿಟಿ ಮ್ಯಾನ್ ಗೆ ತನ್ನ ಐಡಿಯನ್ನು ತೋರಿಸಿದ್ದಾರೆ. ಐಡಿ ಪರಿಶೀಲಿಸಿದ ನಂತರ ಗಾರ್ಡ್ ದೀಪಿಕಾಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ನೀಡಿದರು.

ಈ ವಿಡಿಯೋದಲ್ಲಿ ನಿಜ ಹೇಳಬೇಕೆಂದರೆ ದೀಪಿಕಾ ಪಡುಕೋಣೆ ಸಹ ತಾನು ವಿಐಪಿ ಎನ್ನುವ ಯಾವುದೇ ಗತ್ತು ತೋರಿಸದೆ ಸಾಮಾನ್ಯ ನಾಗರಿಕಳಂತೆ ವರ್ತಿಸಿ ಭದ್ರತಾ ನಿಯಮವನ್ನು ಅನುಸರಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Trending News