ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬಕ್ಕೆ ʼಡೆವಿಲ್‌ʼ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ

Darshans Next Film Updates: ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ದರ್ಶನ್‌, ʼನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15ರ ರಾತ್ರಿ 11.59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿʼ ಎಂದು ಹೇಳಿದ್ದಾರೆ. ​

Written by - Puttaraj K Alur | Last Updated : Feb 12, 2024, 10:58 PM IST
  • ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಮುಂದಿನ ಸಿನಿಮಾ "ಡೆವಿಲ್‌- ದಿ ಹೀರೋ" ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ
  • ಸ್ಯಾಂಡಲ್‌ವುಡ್‌ ದಾಸನ ಬರ್ತ್‌ ಡೇಗೆ ʼಡೆವಿಲ್‌ - ದಿ ಹೀರೋʼ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ
  • ಫೆ.16ರ ದರ್ಶನ್‌ ಹುಟ್ಟಹಬ್ಬಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬಕ್ಕೆ ʼಡೆವಿಲ್‌ʼ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ title=
ದರ್ಶನ್‌ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸೂಪರ್‌ ಡೂಪರ್‌ ಹಿಟ್ ʼಕಾಟೇರʼ ಸಿನಿಮಾದ ಯಶಸ್ಸಿನ ಬಳಿಕ‌ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಮುಂದಿನ ಸಿನಿಮಾ "ಡೆವಿಲ್‌- ದಿ ಹೀರೋ" ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು 3 ದಿನದಲ್ಲಿ ದರ್ಶನ್‌ ಹುಟ್ಟುಹಬ್ಬ ಇರುವುದರಿಂದ ಅಂದು ʼಡೆವಿಲ್‌ - ದಿ ಹೀರೋʼ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಲಿದೆ ಎಂದು ವೈಷ್ಣೋ ಸ್ಟುಡಿಯೋಸ್‌ ಟ್ವೀಟ್‌ ಮಾಡಿದೆ.

ಒಂದೆಡೆ ದರ್ಶನ್ ಅಭಿಮಾನಿಗಳು ದರ್ಶನ್‌‌ ಅವರ ರಜತ ಮಹೋತ್ಸವದ ಖುಷಿಯಲ್ಲಿದ್ದರೆ, ಇನ್ನೊಂದೆಡೆ ಇದೇ ಫೆ.16ಕ್ಕೆ ಸ್ಯಾಂಡಲ್‌ವುಡ್‌ ʼದಾಸʼನ ಹುಟ್ಟುಹಬ್ಬದ ಸಂಭ್ರಮವಿದೆ. ಇವೆರಡರ ನಡುವೆ "ಡೆವಿಲ್‌ - ದಿ ಹೀರೋ" ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಬಗ್ಗೆ ಮಾಹಿತಿ ಹೊರಬಿದ್ದಿದೆ.  

ಇದನ್ನೂ ಓದಿ: ಡಾಲಿ ಪಿಕ್ಚರ್ಸ್‌ನಿಂದ ಹೊಸ ಸಿನಿಮಾ, ಹೀರೋ ಯಾರು ಗೊತ್ತಾ..? 

ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ದರ್ಶನ್‌, ʼನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15ರ ರಾತ್ರಿ 11.59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿʼ ಎಂದು ಹೇಳಿದ್ದಾರೆ. 

́ಡೆವಿಲ್ - ದಿ ಹೀರೋʼ ಸಿನಿಮಾದ ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15ರ ರಾತ್ರಿ 11 ಗಂಟೆ 59 ನಿಮಿಷಕ್ಕೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ಹುಟ್ಟುಹಬ್ಬಕ್ಕೆ ಕೇವಲ 3 ದಿನಗಳು ಬಾಕಿ ಉಳಿದಿವೆ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು. ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್" ಎಂದು ಲಕ್ಷಾಂತರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ಹಳದಿಯ ಹೊಳಪಲ್ಲಿ ಹೊಳೆದ ಸಾರಾ : ಫೋಟೋಸ್ ವೈರಲ್

ದರ್ಶನ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ

ಫೆ.16ರಂದು ನಟ ದರ್ಶನ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಳ್ಲಿ ʼಡಿʼ ಬಾಸ್‌ ಅಭಿಮಾನಿಗಳು ಕಟೌಟ್‌, ಬ್ಯಾನರ್‌ ಹಾಕಲು ಆರಂಭಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಸಹ ಪೋಸ್ಟರ್‌, ಸಂದೇಶಗಳ ಮೂಲಕ ಶುಭಾಶಯ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News