Captain Miller : ಕ್ಯಾಪ್ಟನ್‌ ಮಿಲ್ಲರ್‌ನಲ್ಲಿ ಧನುಷ್‌ ಡೆವಿಲ್‌..! ಶಿವಣ್ಣ ರಕ್ಷಕನೋ... ರಾಕ್ಷಸನೋ..?

Dhanush - Shivarajkumar : ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ ಮತ್ತು ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನಟನೆಯ ʼಕ್ಯಾಪ್ಟನ್‌ ಮಿಲ್ಲರ್‌ʼ ಟ್ರೇಲರ್‌ ರಿಲೀಸ್‌ ಆಗಿದ್ದು, ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಪಾತ್ರವೇನು ಅಂತ ನಿಮ್ಗೆ ಗೊತ್ತೆ..? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್‌ ವಿಚಾರ.. 

Written by - Krishna N K | Last Updated : Jan 7, 2024, 04:13 PM IST
  • ಬಹುನಿರೀಕ್ಷಿತ ʼಕ್ಯಾಪ್ಟನ್‌ ಮಿಲ್ಲರ್‌ʼ ಟ್ರೇಲರ್‌ ರಿಲೀಸ್‌.
  • ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ ನಟನೆಯ ಸಿನಿಮಾ.
  • ಈ ಸಿನಿಮಾದಲ್ಲಿ ಡಾ. ಶಿವರಾಜ್‌ಕುಮಾರ್‌ ನಟಿಸಿದ್ದಾರೆ.
Captain Miller : ಕ್ಯಾಪ್ಟನ್‌ ಮಿಲ್ಲರ್‌ನಲ್ಲಿ ಧನುಷ್‌ ಡೆವಿಲ್‌..! ಶಿವಣ್ಣ ರಕ್ಷಕನೋ... ರಾಕ್ಷಸನೋ..? title=

Captain Miller trailer : ನಟ ಧನುಷ್ ಅವರ ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್ ಟ್ರೇಲರ್‌ ಬಿಡುಗಡೆಯಾಗಿದೆ. ಎರಡು ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೇಲರ್, ಸ್ವತಂತ್ರ ಪೂರ್ವ ಭಾರತದಲ್ಲಿ ನಡೆದ ಘಟನಾವಳಿಗಳನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಧನುಷ್ ಬ್ರಿಟಿಷರಿಗೆ ಡೆವಿಲ್‌ ಆಗಿ ಕಾಡಿದ್ದಾರೆ. ಆದ್ರೆ ಶಿವಣ್ಣ ಪಾತ್ರ ಏನು ಅಂತ ಗೊತ್ತಾಗಿಲ್ಲ.

ಹೌದು. ಕ್ಯಾಪ್ಟನ್‌ ಮಿಲ್ಲರ್‌ನಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ರಾಕ್ಷಸನೋ.. ಅಥವಾ ರಕ್ಷಕನೋ...? ಅಂತ ತಿಳಿದಿಲ್ಲ. ಅಲ್ಲದೆ ಟ್ರೇಲರ್ ಅಷ್ಟಾಗಿ ಅವರ ಪಾತ್ರದ ಕುರಿತು ಸುಳಿವು ನೀಡಿಲ್ಲ. ಇದರಿಂದಾಗಿ ಹ್ಯಾಟ್ರಿಕ್‌ ಹೀರೋ ಪಾತ್ರ ಗುಟ್ಟಾಗಿದ್ದು, ಕ್ಯೂರಿಯಾಸಿಟಿಗೆ ಕಾರಣವಾಗಿದೆ.

ಇದನ್ನೂ ಓದಿ:ಅಮೇರಿಕಾ ಮಾತ್ರವಲ್ಲ: ಜಪಾನ್‌ನಲ್ಲೂ ತೆರೆಕಾಣಲಿದೆ ಸಲಾರ್!‌

ಇನ್ನು ಸೂಪರ್‌ಸ್ಟಾರ್‌ ಧನುಷ್‌, ಹಲವು ಮುಖಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಿಂದ ಪ್ರಾರಂಭವಾಗುವ ಟ್ರೇಲರ್‌, ನಮಗೆ ಕ್ರಮೇಣ ಹಿಂಸಾತ್ಮಕ ನೋಟವನ್ನು ನೀಡುತ್ತದೆ. ಟ್ರೇಲರ್‌ನಲ್ಲಿ ಧನುಷ್ ಕೆಲವು ಮಾರಣಾಂತಿಕ ಸಾಹಸ ದೃಶ್ಯಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು.

ಅಲ್ಲದೆ, ಧನುಷ್‌ ತಮ್ಮ ಗ್ರಾಮ ಮತ್ತು ಗಣಿಯನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಟ್ರೇಲರ್‌ ಕೊನೆಯಲ್ಲಿ ಬರುವ ಟ್ವಿಸ್ಟ್‌ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸುತ್ತದೆ. ಒಂದು ಕಾಲದಲ್ಲಿ ಧನುಷ್ ಬ್ರಿಟಿಷರ ಅಡಿಯಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದುದನ್ನು ತೋರಿಸಲಾಗಿದ್ದು, ʼಕ್ಯಾಪ್ಟನ್ ಮಿಲ್ಲರ್ʼ ಹೇಗೆ ಹೋರಾಟಗಾರನಾದ ಎನ್ನುವುದೇ ಸಿನಿಮಾದ ಸಿಕ್ರೇಟ್‌. 

ಇದನ್ನೂ ಓದಿ:ಶ್ರೀರಾಮನ ಭಕ್ತಿಯಲ್ಲಿ ಮುಳುಗಿಸಿದ ಈ ಟಿವಿ ಕಾರ್ಯಕ್ರಮಗಳು ಬಹಳ ಪ್ರಸಿದ್ಧವಾಗಿವೆ!

ಅರುಣ್ ಮಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಪ್ರಿಯಾಂಕಾ ಅರುಲ್ ಮೋಹನ್, ಶಿವರಾಜ್ ಕುಮಾರ್, ನಿವೇದಿತಾ ಸತೀಶ್, ವಿನಾಯಕನ್ ಮತ್ತು ಸಂದೀಪ್ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದ್ದು, ಜನವರಿ 12 ರಂದು ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News