'ಕ್ಯಾಪ್ಟನ್ ಮಿಲ್ಲರ್' ಚಿತ್ರೋತ್ಸವದಲ್ಲಿ ಶಿವಣ್ಣ ಜೊತೆ ಹೆಜ್ಜೆ ಹಾಕಿದ ಧನುಷ್! ವಿಡಿಯೋ ವೈರಲ್

Shivanna-Dhanush Dance Video: ಪೊಂಗಲ್ ಹಬ್ಬದಂದು ಬಿಡುಗಡೆಯಾಗಲಿರುವ 'ಕ್ಯಾಪ್ಟನ್ ಮಿಲ್ಲರ್' ಚಿತ್ರೋತ್ಸವದಲ್ಲಿ ಧನುಷ್ ಹಾಗೂ ಕನ್ನಡದ ಹ್ಯಾಟ್ರಿಕ್‌ ಹಿರೋ ಶಿವಣ್ಣ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.  

Written by - Savita M B | Last Updated : Jan 4, 2024, 11:09 AM IST
  • ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ದೇಶನದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ
  • ನಟ ಧನುಷ್ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
  • ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಿದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.
'ಕ್ಯಾಪ್ಟನ್ ಮಿಲ್ಲರ್' ಚಿತ್ರೋತ್ಸವದಲ್ಲಿ ಶಿವಣ್ಣ ಜೊತೆ ಹೆಜ್ಜೆ ಹಾಕಿದ ಧನುಷ್! ವಿಡಿಯೋ ವೈರಲ್ title=

Captain Miller: ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ದೇಶನದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ನಟ ಧನುಷ್ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಪೊಂಗಲ್ ಸಂದರ್ಭದಲ್ಲಿ ಜನವರಿ 12 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹೀಗಿರುವಾಗ ಈ ಚಿತ್ರದ ಪ್ರಮೋಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಚಿತ್ರದ ಫ್ರೀ ರಿಲೀಸ್ ಕಾರ್ಯಕ್ರಮ ಚೆನ್ನೈನ ನೆಹರು ಇನ್ನರ್ ಸ್ಪೋರ್ಟ್ಸ್ ಅರೇನಾದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. 

ಇದನ್ನೂ ಓದಿ-ಟಾಲಿವುಡ್‌ನಲ್ಲಿ ಸಂಕ್ರಾಂತಿ ಸಮರ: 'ಗುಂಟೂರು ಖಾರಂ' Vs 'ಸೈಂಧವ'!

ಈ ಕಾರ್ಯಕ್ರಮಕ್ಕೆ ನಟ ಧನುಷ್ ತಮ್ಮ ಇಬ್ಬರು ಪುತ್ರರು ಮತ್ತು ಇಡೀ ಕುಟುಂಬದೊಂದಿಗೆ ಹಾಜರಿದ್ದರು. ಚಿತ್ರದ ನಾಯಕಿ ಪ್ರಿಯಾಂಕಾ ಮೋಹನ್, ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್, ಕಾಳಿ ವೆಂಕಟ್, ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್, ನಿರ್ದೇಶಕ ಅರುಣ್ ಮಾಥೇಶ್ವರನ್ ಮತ್ತು ಚಿತ್ರದ ಇಡೀ ತಂಡ ಕೂಡ ಹಾಜರಿದ್ದರು.

ಕ್ಯಾಪ್ಟನ್ ಮಿಲ್ಲರ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಕರುನಾಡ ಕಂದ ಶಿವರಾಜ್ ಕುಮಾರ್, ಚಿತ್ರದಲ್ಲಿ ನಟಿಸಿದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.. ಆ ನಂತರ ಅಭಿಮಾನಿಗಳ ಕೋರಿಕೆಯ ಮೇರೆಗೆ ಧನುಷ್ ಮತ್ತು ಶಿವರಾಜ್ ಕುಮಾರ್ ಚಿತ್ರದಲ್ಲಿ ಒಟ್ಟಿಗೆ ನಟಿಸಿರುವ ಹಾಡಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.. 

ಇದನ್ನೂ ಓದಿ-ಸಂಗೀತಾ ಶೃಂಗೇರಿ ವಿವಾಹ…! ಇಷ್ಟವಿಲ್ಲದಿದ್ದರೂ ದಾಂಪತ್ಯ ಜೀವನಕ್ಕೆ ಕಾಲಿಡಲು ಫಿಕ್ಸ್ ಆಯ್ತು ಡೇಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News