ಸಿಂಹಾಸನದ ಮೇಲೆ ಚಪ್ಪಲಿ, ಮಚ್ಚು..: ಧ್ರುವಾ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡೈರೆಕ್ಟರ್‌ ಪ್ರೇಮ್‌..!

ಸಿಂಹಾಸನದ ಮೇಲಿರುವುದು ಪಾದುಕೆನಾ ಅಥವಾ ಚಪ್ಲಿನಾ..? ಇದು ಅಹಂನ ಪರಮಾವಧಿಯಾ..? ಅಥವಾ ಆತ್ಮಾಸಾಕ್ಷಿಗೆ ಕೊಡ್ತಿರೋ ಗೌರವನಾ..? ಇಲ್ಲವೇ ಫೀಲ್ಡಿಗೆ ಹೊಸ‌ ಲಾಂಗ್ ಕಿಂಗ್ ಪರಿಯಿಸಿ ಪಟ್ಟಾಭಿಷೇಕ‌ ಮಾಡೋ ಚಿನ್ಹೆನಾ..? ಏನಿದು..? ಲಾಂಗು... ಖುರ್ಚಿ.. ಖುರ್ಚಿ ಮೇಲಿರೋ ಚಪ್ಲಿ... ಚಲ್ಲಾಪ್ಪಿಲ್ಲಿಯಾಗಿರೋ ಗನ್ನು, ಬುಲ್ಲೆಟ್ಸ್‌, ಏನಿದೆಲ್ಲಾ..? ಎಂದು ಚಿಂತಿಸುವಂತೆ ನಿರ್ದೇಶಕ ಪ್ರೇಮ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

Written by - YASHODHA POOJARI | Edited by - Krishna N K | Last Updated : Oct 5, 2022, 05:10 PM IST
  • ಅಭಿಮಾನಿಗಳ ತಲೆಗೆ ಹುಳ ಬಿಟ್ಟಿ ನಿರ್ದೇಶಕ ಪ್ರೇಮ್
  • ಫ್ಯಾನ್ಸ್‌ ತಲೆಕೆಡಿಸುತ್ತಿದೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ‌ ನ್ಯೂ ಫಿಲಂ ಪೋಸ್ಟರ್‌
  • ಸಿಂಹಾಸನದ ಮೇಲೆ ಚಪ್ಪಲಿ, ಮಚ್ಚು.ಚಲ್ಲಾಪ್ಪಿಲ್ಲಿಯಾಗಿರೋ ಗನ್ನು, ಬುಲ್ಲೆಟ್ಸ್‌, ಏನಿದೆಲ್ಲಾ..?
ಸಿಂಹಾಸನದ ಮೇಲೆ ಚಪ್ಪಲಿ, ಮಚ್ಚು..: ಧ್ರುವಾ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡೈರೆಕ್ಟರ್‌ ಪ್ರೇಮ್‌..! title=

ಬೆಂಗಳೂರು : ಸಿಂಹಾಸನದ ಮೇಲಿರುವುದು ಪಾದುಕೆನಾ ಅಥವಾ ಚಪ್ಲಿನಾ..? ಇದು ಅಹಂನ ಪರಮಾವಧಿಯಾ..? ಅಥವಾ ಆತ್ಮಾಸಾಕ್ಷಿಗೆ ಕೊಡ್ತಿರೋ ಗೌರವನಾ..? ಇಲ್ಲವೇ ಫೀಲ್ಡಿಗೆ ಹೊಸ‌ ಲಾಂಗ್ ಕಿಂಗ್ ಪರಿಯಿಸಿ ಪಟ್ಟಾಭಿಷೇಕ‌ ಮಾಡೋ ಚಿನ್ಹೆನಾ..? ಏನಿದು..? ಲಾಂಗು... ಖುರ್ಚಿ.. ಖುರ್ಚಿ ಮೇಲಿರೋ ಚಪ್ಲಿ... ಚಲ್ಲಾಪ್ಪಿಲ್ಲಿಯಾಗಿರೋ ಗನ್ನು, ಬುಲ್ಲೆಟ್ಸ್‌, ಏನಿದೆಲ್ಲಾ..? ಎಂದು ಚಿಂತಿಸುವಂತೆ ನಿರ್ದೇಶಕ ಪ್ರೇಮ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಹೌದು..  ಕೆವಿಎನ್‌ ಬ್ಯಾನರ್‌ ಅಡಿಯಲ್ಲಿ ಪ್ರೇಮ್ಸ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ‌ ನಟನೆಯ ಇನ್ನೂ ಹೆಸರಿಡಲಾರದ ಚಿತ್ರದ ಪೋಸ್ಟರ್‌ ಒಂದು ಬಿಡುಗಡೆಯಾಗಿದ್ದು, ಫ್ಯಾನ್ಸ್‌ ತಲೆ ಕೆಡುವಂತೆ ಮಾಡಿದೆ. ಪೋಸ್ಟರ್‌ ನೋಡಿದ ಅಭಿಮಾನಿಗಳು ಟೈಟಲ್ ಏನಿರುತ್ತೆ..? ಫಸ್ಟ್ ಲುಕ್ ಟೀಸರ್ ಹೇಗಿರಬಹುದು..? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇದೇ 20ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗ್ತಿರೋ ಟೀಸರ್ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೈಬರ್ ಕ್ರೈಂ ಖದೀಮರ ವಿರುದ್ಧ ಸಿಬಿಐ ಸಮರ : ಬೆಂಗಳೂರು ಸೇರಿ ದೇಶದ 105 ಕಡೆ ದಾಳಿ

ಧ್ರುವ ಸರ್ಜಾ ಸಿನಿಮಾ ತುಂಬಾ ಸ್ಪೆಷಲ್ ಆಗಿರುತ್ತೆ. ಜೋಗಿ ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಬ್ಬರ ಕಾಂಬಿನೇಶನ್ ಅಂದ್ರೆ ಕೇಳ್ಬೇಕಾ..? ಹಂಡ್ರೆಡ್ ಪರ್ಸೆಂಟ್ ಹಲವು ವಿಶೇಷತೆಗಳು ಸಿನಿಮಾದಲ್ಲಿ ಇರೋದು ಕನ್ಫರ್ಮ್. ಇದೀಗ ರಿಲೀಸ್ ಆಗಿರೋ ಈ ಪೋಸ್ಟರ್ ಹಲವು ವಿಚಾರಗಳನ್ನ ಹೇಳುತ್ತಿದೆ. ಸಿಂಹಾಸನದ ಮೇಲೆ ಯಾಕೆ ಪಾದುಕೆ ಇಟ್ಟಿದ್ದಾರೆ. ಇದು ಏನನ್ನ ಸೂಚಿಸುತ್ತೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 3 SUV ಗಳು ಇವೆ ನೋಡಿ..

ಇದೀಗ ಎಲ್ಲೆಡೆ ಈ ಪೋಸ್ಟರ್ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೇ ತಿಂಗಳ 20ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಟೀಸರ್ ಕೂಡ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ತುಂಬಾ ಕ್ಯೂರಿಯಾಸಿಟಿಯಿಂದ ವೇಟ್ ಮಾಡ್ತಾ ಇದ್ದಾರೆ. ಧ್ರುವ ಸರ್ಜಾ ಕೂಡ ಸುಮ್ಮನೇ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಆಕ್ಷನ್ ಪ್ರಿನ್ಸ್ ಮಾಡಿರೋ ಅಷ್ಟೂ ಸಿನಿಮಾ ಕೂಡ ಭರ್ಜರಿ ಸಕ್ಸಸ್ ಕಂಡಿದೆ. ಇದೀಗ ಈ ಸಿನಿಮಾ ಕೂಡ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚು ಮಾಡಿದೆ. ಸೋ ವೇಟ್ ಮಾಡಿ ಸಿನಿಮಾ ನೋಡೋ ಮಜಾನೇ ಬೇರೇ ಬಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News