ಬೆಂಗಳೂರು: ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಆಪರೇಷನ್ ಚಕ್ರ ಹೆಸರಲ್ಲಿ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಇದರಂತೆ ಒಟ್ಟು 300 ಅಪರಾಧಿಗಳಿಗಾಗಿ 105 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಇದರಲ್ಲಿ ಸುಮಾರು 87 ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಲಾಗಿದ್ದು, ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರ ನೆರವಿನೊಂದಿಗೆ ಈ ದಾಳಿ ನಡೆದಿದೆ. 300 ಖದೀಮರು ಸಿಬಿಐ ಸ್ಕ್ಯಾನರ್ ಅಡಿಯಲ್ಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಂಡಮಾನ್ ನಿಕೋಬಾರ್ ದ್ವೀಪದ ಐದು ಪ್ರದೇಶಗಳಲ್ಲೂ ಈ ದಾಳಿ ನಡೆದಿದೆ. ಅಲ್ಲದೇ ದೆಹಲಿಯಲ್ಲಿ ಐದು ಕಡೆ, ಚಂಡಿಘರ್‌ನಲ್ಲಿ ಮೂರು ಕಡೆ ಹಾಗೂ ಪಂಜಾಬ್, ಕರ್ನಾಟಕ, ಅಸ್ಸಾಂನಲ್ಲಿ ತಲಾ ಎರಡು ಕಡೆ ದಾಳಿ ನಡೆದಿದ್ದು, ಶೋಧ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಮತ್ತೆ ನಟಿ ಶ್ರೀಲೀಲಾ ತಾಯಿಯ ಕಿರಿಕ್: ಗಂಡನ ಮನೆಗೆ ನುಗ್ಗಿ ಸ್ವರ್ಣಲತಾ ದಾಂಧಲೆ
ಇನ್ನೂ ಅಮೆರಿಕಾ ಪ್ರಜೆಗಳನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದ, ಪುಣೆ ಹಾಗೂ ಅಹ್ಮದಾಬಾದ್‌ನ ಎರಡು ಕಾಲ್‌ಸೆಂಟರ್‌ಗಳ ಮೇಲೆಯೂ ದಾಳಿ ನಡೆಸಲಾಗಿದೆ. ರಾಜಸ್ಥಾನದಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಬಿಐ ಅಧಿಕಾರಿಗಳಿಗೆ 1.5 ಕೋಟಿ ನಗದು ಹಾಗೂ ಒಂದೂವರೆ ಕೆಜಿ ಚಿನ್ನ ದೊರೆತಿದೆ ಎನ್ನಲಾಗಿದೆ. ಇಂಟರ್‌ಪೋಲ್ , ಎಫ್‌ಬಿಐ, ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ ಮತ್ತು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರ ಬಳಿಯಿಂದ ಸಿಕ್ಕ ಸೈಬರ್ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.