Martain Update: ಗೋವಾದಲ್ಲಿ ಮಾರ್ಟಿನ್‌ ಆಫ್ರೋ ಲುಕ್‌: ಧ್ರುವ ಹೊಸ ಫೋಟೋ ವೈರಲ್!

Dhruva Sarja Martain Look: ಚಂದನವನದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ  ಸಾಂಗ್‌ ಶೂಟಿಂಗ್‌ ಗೋವಾದಲ್ಲಿ ಭರದಿಂದ ಸಾಗುತ್ತಿದ್ದು, ಅಲ್ಲಿ ಈ ನಟನ ಹೊಸ ಆಫ್ರೋ ಲುಕ್‌ ಫೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Feb 14, 2024, 10:57 AM IST
  • 'ಮಾರ್ಟಿನ್' ಚಿತ್ರ ಅಂದುಕೊಂಡದಿಕ್ಕಿಂತೆ ಹೆಚ್ಚಾಗಿ ದೊಡ್ಡ ಮಟ್ಟದ ಬಜೆಟ್‌ನಲ್ಲಿ ನಿರ್ಮಣವಾಗುತ್ತಿದ್ದು, ಕಾಶ್ಮೀರ, ಮಂಗಳೂರು ಸೇರಿದಂತೆ ಹಲವೆಡೆ ಸಿನಿಮಾದ ಶೂಟಿಂಗ್‌ ನಡೆದಿದೆ.
  • 'ಮಾರ್ಟಿನ್' ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಡೈರೆಕ್ಟರ್‌ ಎ. ಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಅರ್ಜುನ್ ಸರ್ಜಾ ಸಿನಿಮಾ ಕಥೆ ಬರೆದಿದ್ದಾರೆ.
  • ಈಗಾಗಲೇ 'ಮಾರ್ಟಿನ್' ಚಿತ್ರದ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಐದು ಭಾಷೆಗಳಿಗೆ ಸೇರಿ ಒಂದೇ ಟೀಸರ್ ರಿಲೀಸ್‌ ಮಾಡಲಾಗಿತ್ತು.
Martain Update: ಗೋವಾದಲ್ಲಿ ಮಾರ್ಟಿನ್‌ ಆಫ್ರೋ ಲುಕ್‌: ಧ್ರುವ ಹೊಸ ಫೋಟೋ ವೈರಲ್! title=

Dhruva Sarja Apro Look Viral: ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾಅಭಿನಯದ ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾಗಾಗಿ ಫ್ಯಾನ್ಸ್‌ ಕಾದಿದ್ದು, ಈಗಾಗಲೇ ಕೆಲವು ಅಪ್‌ಡೇಟ್‌ಗಳು ಸಿಕ್ಕಿವೆ. ಸದ್ಯ ಧ್ರುವ ಸರ್ಜಾ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ವರ್ಷವೇ ಮಾರ್ಟಿನ್‌ ಟೀಸರ್ ರಿಲೀಸ್‌ ಮಾಡಲಾಗಿದ್ದು ಬಿಟ್ಟರೇ ಬೇರೆ ಯಾವ ಮಾಹಿತಿಯು ಹೊರ ಬಂದಿರಲಿಲ್ಲ. ಆದರೆ ಚಿತ್ರದ ನಿರ್ಮಾಪಕರು ಮಾತ್ರ ನೆನಪಿಸುವ ಪ್ರಯತ್ನ ಮಾಡಿದ್ದು, ಹಾಗೆಯೇ ಇತ್ತೀಚೆಗೆ ಸಿನಿಮಾದ ಆಡಿಯೋ ರೈಟ್ಸ್ 9 ಕೋಟಿ ರೂ.ಗೂ ಮಾರಾಟ ಆಗಿದ್ದು ಸುದ್ದಿ ಹೊರ ಬಂದಿತ್ತು.  

'ಮಾರ್ಟಿನ್' ಚಿತ್ರ ಅಂದುಕೊಂಡದಿಕ್ಕಿಂತೆ ಹೆಚ್ಚಾಗಿ ದೊಡ್ಡ ಮಟ್ಟದ ಬಜೆಟ್‌ನಲ್ಲಿ ನಿರ್ಮಣವಾಗುತ್ತಿದ್ದು, ಕಾಶ್ಮೀರ, ಮಂಗಳೂರು ಸೇರಿದಂತೆ ಹಲವೆಡೆ ಸಿನಿಮಾದ ಶೂಟಿಂಗ್‌ ನಡೆದಿದೆ. ಸದ್ಯ ಮಾರ್ಟಿನ್‌ ಸಿನಿತಂಡ ಗೋವಾದಲ್ಲಿ ಬೀಡುಬಿಟ್ಟಿದ್ದು ಚಿತ್ರದ ಸಾಂಗ್‌ ಶೂಟಿಂಗ್‌ ನಡೆಯುತ್ತಿದ್ದು, ಚಿತ್ರೀಕರಣಕ್ಕಾಗಿ ಆಕ್ಷನ್‌ ಪ್ರಿನ್ಸ್‌ ಆಫ್ರೋ ಲುಕ್‌ನಲ್ಲಿ ಕಾಣಿಸಕೊಂಡಿದ್ದಾರೆ. ಧ್ರುವನ ಹೊಸ ಲುಕ್‌ ವೈರಲ್‌ ಆಗುತ್ತಿದ್ದು, ಈ ನಟ ನೋಡುವುದಕ್ಕೆ ಒಂದು ಕ್ಷಣ ತಮಿಳು ನಟ ಯೋಗಿ ಬಾಬು ನೆನಪಾಗುತ್ತಾರೆ.

ಇದನ್ನೂ ಓದಿ: Yuva: 'ಯುವ' ಶೂಟಿಂಗ್‌ ಕಂಪ್ಲೀಟ್‌: ಭರ್ಜರಿಯಾಗಿ ನಡೆಯುತ್ತಿದೆ ಚಿತ್ರದ ಪ್ರಮೋಷನ್‌ ಪ್ಲಾನ್!

'ಮಾರ್ಟಿನ್' ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಡೈರೆಕ್ಟರ್‌ ಎ. ಪಿ ಅರ್ಜುನ್ ನಿರ್ದೇಶನ ಮಾಡಿದ್ದು,  ಅರ್ಜುನ್ ಸರ್ಜಾ ಸಿನಿಮಾ ಕಥೆ ಬರೆದಿದ್ದಾರೆ.  ಈ ಚಿತ್ರದ ಹಾಡುಗಳಿಗೆ ತೆಲುಗು ಮ್ಯೂಸಿಕ್‌ ಡೈರೆಕ್ಟರ್‌ ಮಣಿಶರ್ಮ ಟ್ಯೂನ್ ಹಾಕಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಅದರ ತಕ್ಕ ಹಾಗೆಯೇ ದೊಡ್ಡಮಟ್ಟದಲ್ಲಿ ಸಾಂಗ್ ಶೂಟಿಂಗ್ ಮಾಡಲಾಗುತ್ತಿದ್ದು, ನಟ ಧ್ರುವ ಸರ್ಜಾ ಆಫ್ರೋ ಲುಕ್‌ ವಿಗ್ ಧರಿಸಸುವುದರ ಜೊತೆಗೆ ದೊಡ್ಡ ಫ್ಯಾನ್ಸಿ ಸನ್‌ ಗ್ಲಾಸ್ ಹಾಕಿಕೊಂಡು  ಗಮನ ಸೆಳೆದಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ. 

ಈಗಾಗಲೇ 'ಮಾರ್ಟಿನ್' ಚಿತ್ರದ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಐದು ಭಾಷೆಗಳಿಗೆ ಸೇರಿ ಒಂದೇ ಟೀಸರ್  ರಿಲೀಸ್‌ ಮಾಡಲಾಗಿತ್ತು. ಈ ಸಿನಿಮಾದಲ್ಲಿ ದೇಶ ಪ್ರೇಮದ ಕಥೆಯಿದ್ದು, ಟೀಸರ್‌ನಲ್ಲಿ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ  ಅಬ್ಬರಿಸುವ ದೃಶ್ಯವನ್ನು ತೋರಿಸಲಾಗಿದ್ದ ಕಾರಣ ಚಿತ್ರಕಥೆ ಕುತೂಹಲ ಮೂಡಿಸಿದೆ. ಸದ್ಯ ಸಿನಿತಂಡ ಚಿತ್ರದ ಫೈನಲ್‌ ಸ್ಟೇಜ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ತದನಂತರ ಪ್ಲ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಮೋಷನ್ ಪ್ಲ್ಯಾನ್ ಮಾಡುತ್ತಿದೆ. ಶೀಘ್ರದಲ್ಲೇ ಮಾರ್ಟಿನ್‌ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಆಗುವ ಸಾಧ್ಯತೆಯಿದೆ.  

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News