ಸ್ಯಾಂಡಲ್ವುಡ್ನಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100, ಗಾಳಿಪಟ 2 ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಂ. ರಮೇಶ್ ರೆಡ್ಡಿ, ತಮ್ಮ ಹೋಮ್ ಬ್ಯಾನರ್ ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಹಿಂದಿ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನು ಓದಿ: ಏಪ್ರಿಲ್ 9ರಂದು ಎಫ್ಸಿಎಲ್ಗೆ ಚಾಲನೆ: ಓನ್ಲಿ ಕನ್ನಡ ಒಟಿಟಿಯಲ್ಲಿ ನೇರಪ್ರಸಾರ
ದಿಲ್ ಹೈ ಗ್ರೇ ಶೀರ್ಷಿಕೆಯುಳ್ಳ ಆ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ. ವಿನೀತ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್ಲೈನ್ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವವನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ‘ಐರಾವತ’ ಖ್ಯಾತಿಯ ಊರ್ವಶಿ ರೌಟೇಲಾ ನಟಿಸಿದ್ದಾರೆ. ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ.
ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರದ ಕಥೆಯೇ ರೋಚಕವಾಗಿದೆ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಸೂಕ್ತವಾಗಿದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಸದ್ಯ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ತೆರೆಗೆ ಬರಲಿದ್ದೇವೆ ಎನ್ನುತ್ತಾರೆ.
ಇದನ್ನು ಓದಿ: ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ
ನಿರ್ದೇಶಕ ಸುಸಿ ಗಣೇಶನ್ ಸಹ ಅಷ್ಟೇ ಎಗ್ಸೈಟ್ಮೆಂಟ್ನಲ್ಲಿದ್ದಾರೆ. ಇಡೀ ಜಗತ್ತೇ ಇದೀಗ ಆನ್ಲೈನ್ ಮಯವಾಗಿದೆ. ಆ ಆನ್ಲೈನ್ನಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ನಾವಿಲ್ಲಿ ಇಂಟರ್ನೆಟ್ನಿಂದ ಮಹಿಳೆಯರು ಎದುರಿಸುವ ಆತಂಕಕಾರಿ ಸಮಸ್ಯೆಗಳನ್ನು ತೋರಿಸಿದ್ದೇವೆ. ಸೈಬರ್ ಕ್ರೈಂನ ಮತ್ತೊಂದು ಮುಖವೂ ಅನಾವರಣಗೊಳ್ಳಲಿದೆ ಎಂದು ಮಾಹಿತಿ ನೀಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.