ಏಪ್ರಿಲ್ 9ರಂದು ಎಫ್‌ಸಿಎಲ್‌ಗೆ ಚಾಲನೆ: ಓನ್ಲಿ ಕನ್ನಡ ಒಟಿಟಿಯಲ್ಲಿ ನೇರಪ್ರಸಾರ

ಕನ್ನಡ ಚಿತ್ರರಂಗದ 12 ಖ್ಯಾತ ನಾಯಕ ನಟರ ಅಭಿಮಾನಿಗಳ 12 ತಂಡ ಈ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಪಂದ್ಯಗಳು ನಡೆಯಲಿದೆ.

Written by - Zee Kannada News Desk | Last Updated : Apr 8, 2022, 03:52 PM IST
  • ಏಪ್ರಿಲ್ 9, 10 ರಂದು ಎಫ್‌ಸಿಎಲ್‌ ಪಂದ್ಯ ಶುರು
  • 12 ಖ್ಯಾತ ನಾಯಕ ನಟರ ಅಭಿಮಾನಿಗಳ 12 ತಂಡ ಭಾಗವಹಿಸಲಿದೆ
  • ವಿಜಯನಗರದ ಬಿ.ಜಿ.ಎಸ್ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ
ಏಪ್ರಿಲ್ 9ರಂದು ಎಫ್‌ಸಿಎಲ್‌ಗೆ ಚಾಲನೆ:  ಓನ್ಲಿ ಕನ್ನಡ ಒಟಿಟಿಯಲ್ಲಿ ನೇರಪ್ರಸಾರ title=
Only Kannada OTT

ಅವರ  ಫ್ಯಾನ್ಸ್ ನಮಗಾಗಲ್ಲ, ಇವರ ಫ್ಯಾನ್ಸ್ ನಮಗಾಗಲ್ಲ ಅಂತ ಕೆಲವರು ಮಾತಿನ‌ ಗುದ್ದಾಟ ನಡೆಸುತ್ತಾ ಇರುತ್ತಾರೆ. ಆದರೆ  ನಾವೆಲ್ಲ ಒಂದೇ ಎನ್ನುವ ನಿಟ್ಟಿನಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ಆಯೋಜಿಸಿದ್ದಾರೆ ನಮ್ ಟಾಕೀಸ್ ಭರತ್. ಇದೇ‌ ಏಪ್ರಿಲ್ 9, 10 ರಂದು ವಿಜಯನಗರದ ಬಿ.ಜಿ.ಎಸ್ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಸತತ ಏಳು ವರ್ಷಗಳಿಂದ ಈ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಇದನ್ನು ಓದಿ: ಮೇ ತಿಂಗಳಲ್ಲಿ ತೆರೆಗೆ ಬರ್ತಿದೆ 'ಖಾಸಗಿ ಪುಟಗಳು': ಯೂಟ್ಯೂಬ್‌ನಲ್ಲಿ 'ಅರೆಘಳಿಗೆ' ಹಾಡಿನ ದಿಬ್ಬಣ

ಕನ್ನಡ ಚಿತ್ರರಂಗದ 12 ಖ್ಯಾತ ನಾಯಕ ನಟರ ಅಭಿಮಾನಿಗಳ 12 ತಂಡ ಈ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಪಂದ್ಯಗಳು ನಡೆಯಲಿದೆ. ಶನಿವಾರ ಸಚಿವ ವಿ.ಸೋಮಣ್ಣ ಹಾಗೂ ಡಾ||ವಿ.ನಾಗೇಂದ್ರ ಪ್ರಸಾದ್ ಈ ಲೀಗನ್ನು ಉದ್ಘಾಟಿಸಲಿದ್ದಾರೆ. ಆರು ಓವರ್‌ಗಳಂತೆ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಎಂಟು ಓವರ್‌ನಲ್ಲಿ ಇರುತ್ತದೆ. ಗೆದ್ದ ತಂಡಕ್ಕೆ ಮೂವತ್ತು ಸಾವಿರ ನಗದು ಸಿಗಲಿದೆ.‌ ಎರಡನೇ ತಂಡಕ್ಕೆ ಇಪ್ಪತ್ತು ಸಾವಿರ ಲಭಿಸಲಿದೆ. ಫೈನಲ್ ಪಂದ್ಯಕ್ಕೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಗಣ್ಯರು ಆಗಮಿಸುವ ನಿರೀಕ್ಷೆಯಿದೆ ಎಂದು ನಮ್ ಟಾಕೀಸ್ ಭರತ್ ತಿಳಿಸಿದ್ದಾರೆ.

​ಇದನ್ನು ಓದಿ: ವಿಮಾನ ಭೀಕರ ಅಪಘಾತ, ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಇಬ್ಭಾಗವಾದ ಪ್ಲೇನ್ , ಇಲ್ಲಿದೆ ವಿಡಿಯೋ

ಕನ್ನಡಕ್ಕಾಗಿ ಮೀಸಲಿರುವ ಓನ್ಲಿ ಕನ್ನಡ ಒಟಿಟಿಯಲ್ಲಿ ಎಲ್ಲಾ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿದ್ದೇವೆ. ಪ್ಲೇ ಸ್ಟೋರ್‌ನಲ್ಲಿ ನಮ್ಮ ಆಪ್ ಡೌನ್‌ಲೋಡ್  ಮಾಡಿಕೊಂಡು ಪಂದ್ಯ ವೀಕ್ಷಿಸಬಹುದು. ಸೋಮವಾರ ಗೋಲ್ಡನ್ ಸ್ಟಾರ್ ಗಣೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮತ್ತೊಂದು ಕ್ರಿಕೆಟ್ ಲೀಗ್ ಸಹ ನಮ್ಮ ಒಟಿಟಿಯಲ್ಲಿ ನೇರಪ್ರಸಾರವಾಗಲಿದೆ ಎಂದು  ಓನ್ಲಿ ಕನ್ನಡ ಒಟಿಟಿಯ ಪ್ರದೀಪ್ ಮುಳ್ಳೂರು ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News