ಘೋಸ್ಟ್ ನಂತರ ಶ್ರೀನಿಯ ಮುಂದಿನ ಚಿತ್ರ..? ಘೋಸ್ಟ್‌-2 ಅಥವಾ ಬೀರ್‌ಬಲ್-2..!

Director Srini: ಸ್ಯಾಂಡಲ್‌ವುಡ್ ನಿರ್ದೇಶಕ ಶ್ರೀನಿಯ ಘೋಸ್ಟ್‌ ಸಿನಿಮಾ ತೆರೆಗೆ ಬಂದ ಬಳಿಕ ಒಂದು ನಿರೀಕ್ಷೆಯಿದ್ದು, ಫೋಸ್ಟ್-2‌ ಚಿತ್ರ ಮೊದಲು ತೆರೆಕಾಣುತ್ತಾ ಅಥವಾ ಬೀರ್‌ಬಲ್‌-2 ಚಿತ್ರ ತೆರೆಕಾಣುತ್ತಾ ಎಂಬ ಕುತೂಹಲ ಫ್ಯಾನ್ಸ್‌ಗಳಲ್ಲಿ ಹೆಚ್ಚಿಸಿದೆ. ಹಾಗಾದ್ರೆ ಶ್ರೀನಿ ಮುಂದಿನ ಸಿನಿಮಾ ಯಾವ್ದು? ಇದೆಲ್ಲದರ ಕಂಪ್ಲೀಟ್‌ ಡಿಟೇಲ್ಸ್‌ ಹೀಗಿದೆ.  

Written by - Zee Kannada News Desk | Last Updated : Nov 9, 2023, 05:38 PM IST
  • ಘೋಸ್ಟ್‌ ಚಿತ್ರ ಇದೀಗ 25 ದಿನದತ್ತ ಯಶಸ್ವಿ ಪಯಣ ಮುಂದುವರೆಸುತ್ತಿದೆ.
  • ಶ್ರೀನಿಯ ಮುಂದಿನ ಚಿತ್ರಗಳ ಲಿಸ್ಟ್‌ನಲ್ಲಿ ಒಟ್ಟು ಮೂರು ಸಿನಿಮಾಗಳಾದ ಬೀರ್‌ಬಲ್-2, ಗೀತಾ ಪ್ರೊಡಕ್ಷನ್ ಫಿಲ್ಮಂ, ಘೋಸ್ಟ್-2 ಇದೆ.
  • ಬೀರ್‌ಬಲ್‌-2 ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಇರ್ತಾರಾ ಇಲ್ವಾ ಅನ್ನೊದು ಕುತೂಹಲ ಹುಟ್ಟಿದೆ.
ಘೋಸ್ಟ್ ನಂತರ ಶ್ರೀನಿಯ ಮುಂದಿನ ಚಿತ್ರ..? ಘೋಸ್ಟ್‌-2 ಅಥವಾ ಬೀರ್‌ಬಲ್-2..! title=

Director Srini Movies: ನಿರ್ದೇಶಕ ಶ್ರೀನಿ ಆಕ್ಷನ್‌ ಕಟ್‌ ಹೇಳಿದ ಘೋಸ್ಟ್ ಚಿತ್ರ ಕನ್ನಡದಲ್ಲಿ ಧಮಾಕಾ ಮಾಡಿ, ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೆ ಕ್ಲಿಕ್ ಆಗಿದೆ. ನಟ ಶಿವರಾಜ್ ಕುಮಾರ್ ಪಾತ್ರವನ್ನ ಎಲ್ಲ ಭಾಷೆಯ ಜನ ಮೆಚ್ಚುಕೊಂಡಿದ್ದು, ಈ ಸಿನಿಮಾದಿಂದ ಶಿವಣ್ಣನ ಖದರ್ ಬೇರೇನೆ ಇದೆ ಅಂತಲೂ ಬಣ್ಣಿಸಬಹುದು. ಇಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿರೋ ಈ ಚಿತ್ರ ಇದೀಗ 25 ದಿನದತ್ತ ಯಶಸ್ವಿ ಪಯಣ ಮುಂದುವರೆಸುತ್ತಿದ್ದು, ಈ ಮೂಲಕ ಸಿನಿತಂಡ 25 ನೇ ದಿನವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡೋಕೆ ಪ್ಲಾನ್ ಮಾಡುತ್ತಿದೆ. 

ಆದರೆ ಘೋಸ್ಟ್‌ ಸಿನಿಮಾದ 25 ನೇ ದಿನವನ್ನ ದೊಡ್ಡಮಟ್ಟದಲ್ಲಿಯೇ ಸೆಲೆಬ್ರೇಟ್ ಮಾಡೋ ಪ್ಲಾನ್ ಮಾಡಲಾಗುತ್ತಿದ್ದು, ಈ ಬಗ್ಗೆ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ. ಚಿತ್ರದ 25ನೇ ದಿನವನ್ನ ವಿಶೇಷವಾಗಿಯೇ ಸೆಲೆಬ್ರೇಟ್ ಮಾಡಲಾಗುತ್ತಿದ್ದು, ಈ ಕುರಿತಿಯ ಎಲ್ಲ ಪ್ಲಾನಿಂಗ್ ನಡೆಯುತ್ತಿದೆ ಅಂತಲೇ ತಿಳಿಸಿದ್ದಾರೆ. ಘೋಸ್ಟ್ ಬಳಿಕ ಎಲ್ಲರಿಗೂ ಒಂದು ನಿರೀಕ್ಷೆಯಿದ್ದು, ಈ ಸಿನಿಮಾ ಆದ್ಮೇಲೆ ಘೋಸ್ಟ್-2 ಸಿನಿಮಾ ಬರುತ್ತದೆ ಅನ್ನುವ ಕುತೂಹಲ ಇದೆ. ಆದರೆ ಈ ಒಂದು ಕುತೂಹಲಕ್ಕೆ ಡೈರೆಕ್ಟರ್ ಶ್ರೀನಿ ತೆರೆ ಎಳೆದಿದ್ದು, ತಮ್ಮ ಮುಂದಿನ ಸಿನಿಮಾ ಘೋಸ್ಟ್-2 ಅಲ್ಲವೇ ಅಲ್ಲ, ಅದು ಬೇರೆನೆ ಇದೆ ಅಂತಲೇ ಹೇಳಿಕೊಂಡಿದ್ದಾರೆ.

ಇದನು ಓದಿ: ಶಿವಣ್ಣ & ಧನುಷ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ಕ್ಯಾಪ್ಟನ್ ಮಿಲ್ಲರ್ ಎಂಟ್ರಿಗೆ ಡೇಟ್‌ ಫಿಕ್ಸ್‌

 ಸದ್ಯ ಘೋಸ್ಟ್ ಸಕ್ಸಸ್ ಖುಷಿಯಲ್ಲಿಯೇ ಇರುವ ಡೈರೆಕ್ಟರ್ ಶ್ರೀನಿ, ಈಗಾಗಲೇ ತಮ್ಮ ಮುಂದಿನ ಚಿತ್ರದ ತಯಾರಿಯನ್ನೂ ಸಹ ಶುರು ಮಾಡಿದ್ದಾರೆ. ಅವರೇ ಹೇಳುವಂತೆ ತಮ್ಮ ಮುಂದಿನ ಚಿತ್ರಗಳ ಲಿಸ್ಟ್‌ನಲ್ಲಿ ಒಟ್ಟು ಮೂರು ಸಿನಿಮಾಗಳಾದ ಬೀರ್‌ಬಲ್-2, ಗೀತಾ ಪ್ರೊಡಕ್ಷನ್ ಫಿಲ್ಮಂ, ಘೋಸ್ಟ್-2 ಇದ್ದು,  ಡೈರೆಕ್ಟರ್ ಶ್ರೀನಿ ಘೋಸ್ಟ್ ಚಿತ್ರದಲ್ಲಿಯೇ ತಮ್ಮ ಬೀರ್‌ಬಲ್-2 ಚಿತ್ರದ ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಆ ಪ್ರಕಾರವೇ ಶ್ರೀನಿ ಈಗ ಮೊದಲು ಕೈಗೆ ಎತ್ತಿಕೊಳ್ಳುವ ಸಿನಿಮಾ ಬೀರ್‌ಬಲ್-2 ಆಗಿದೆ. 

ಬೀರ್‌ಬಲ್‌ ರುಕ್ಮಿಣಿ ವಸಂತ್ ಅಭಿನಯದ ಈ ಮೊದಲ ಚಿತ್ರಕ್ಕೆ ಆಗ ಒಳ್ಳೆ ಅಭಿಪ್ರಾಯ ಕೂಡ ಬಂದಿದ್ದು, ಅದರಂತೆ ಬೀರ್‌ಬಲ್‌-2 ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಇರ್ತಾರಾ ಇಲ್ವಾ ಅನ್ನೊದು  ಕುತೂಹಲವೇ ಆಗಿದೆ. ಈ ಒಂದು ಸಿನಿಮಾ ಬಂದ್ಮೇಲೆ, ಶಿವರಾಜ್‌ ಕುಮಾರ್  ಸಿನಿಮಾ ನಿರ್ಮಾಣ ಸಂಸ್ಥೆ ಗೀತಾ ಪ್ರೊಡಕ್ಷನ್ ಫಿಲ್ಮಂಗಾಗಿಯೇ ಒಂದು ಸಿನಿಮಾ ಮಾಡಲಿದ್ದು, ಇದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ರಿವಿಲ್‌ ಮಾಡಿಲ್ಲ. ಈ ಎರಡೂ ಸಿನಿಮಾ ಆದ್ಮೇಲೇನೆ ಘೋಸ್ಟ್-2 ಸಿನಿಮಾ ಸೆಟ್ಟೇರಲಿದೆ ಅಂತಲೇ  ಹೇಳಬಹುದು. ಘೋಸ್ಟ್ ಚಿತ್ರದ 25 ನೇ ದಿನದ ಸೆಲೆಬ್ರೇಷನ್ ತಯಾರಿನೂ ಮಾಡಿಕೊಳ್ಳುತ್ತಿದ್ದಾರೆ ಅಂತಲೇ ತಿಳಿಯಬಹುದು

 

Trending News