ಬೆಂಗಳೂರು: ನಗರದಲ್ಲಿರುವ 28 ಶಾಸಕರಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ. ಶಾಸಕರಾಗಲು ರಿಯಲ್ ಎಸ್ಟೇಟ್ ಉದ್ಯಮಿಯೇ ಬೇಕೆ..?. ಎಂದು ನಟಿ, ಮಾಜಿ ಸಂಸದೆ ರಮ್ಯಾ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ಟೀಟ್ ಮಾಡಿರುವ ಅವರು, ನಗರದಲ್ಲಿರುವ ಶಾಸಕರು ಹಾಗೂ ಸಂಸದರಲ್ಲಿ ಎಷ್ಟು ಮಂದಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆಂದು ನಿಮಗೆ ಗೊತ್ತೇ?.. ವ್ಯಕ್ತಿಯೊಬ್ಬರ ಹೇಳಿಕೆ ಪ್ರಕಾರ, 28 ಶಾಸಕರಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರಂತೆ. ಈ ಸಂಖ್ಯೆ ನನಗೆ ದಿಗ್ಭ್ರಮೆ ಮೂಡಿಸಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದ ಕಾಡಿನ ಅಂದಕ್ಕೆ ಮನಸೋತಿದ್ದ ಕತ್ತಿ; ಆನೆಗಳಿಗೆ ಬೆಲ್ಲ ತಿನ್ನಿಸಿ ಖುಷಿಗೊಂಡಿದ್ದ ಸಚಿವ!
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವ ಈ 26 ಶಾಸಕರು ಜನರಿಂದಲೇ ಚುನಾಯಿತರಾಗಿದ್ದಾರೆ. ಇದು 'ಜನರ ಆಯ್ಕೆ'. ಆದ್ದರಿಂದ ದಯವಿಟ್ಟು ಮೊದಲು ಮತ ಹಾಕಿ (ಮೊದಲು) ಮತ್ತು ಬುದ್ಧಿವಂತಿಕೆಯಿಂದ ಮತ ಚಲಾಯಿಸಿ. ಹೆಚ್ಚಾಗಿ ನಗರ ನಿವಾಸಿಗಳು ಮತ ಹಾಕುವುದಿಲ್ಲ ಅದಕ್ಕಾಗಿಯೇ ಇಂದು ಈ ಪರಿಸ್ಥಿರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Why is it that only people who have the money (mostly real estate) are given tickets to contest? (Think hard) The expenditure allowed by the EC is 40 lakhs for an MLA but why do elections run into crores?! (Think hard) The answer is all here-
— Divya Spandana/Ramya (@divyaspandana) September 6, 2022
ಅಲ್ಲದೆ, ಹಣ ಇರುವ ಜನರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತದೆ ಏಕೆ..? ಚುನಾವಣೆ ಆಯೋಗ ಒಬ್ಬ ಶಾಸಕನಿಗೆ ₹40 ಲಕ್ಷ ರೂ. ಮಾತ್ರ ವೆಚ್ಚ ಮಾಡಲು ಅನುಮತಿ ನೀಡುತ್ತದೆ. ಆದರೆ ಚುನಾವಣೆಗಳು ಕೋಟಿಗಳಲ್ಲಿ ನಡೆಯುತ್ತದೆ. ಇದೆಲ್ಲದರ ಪರಿಣಾಮವೇ ಇದು.. ಎಂದು ಮಳೆ ಅವಾಂತರದ ಕುರಿತು ಕಿಡಿಕಾರಿದ್ದಾರೆ.
ಈ ಹಿಂದೆ ಮಳೆ ಅವಾಂತರಕ್ಕೆ ಬೆಂಗಳೂರು ನಗರದ ಜನರು ಬೇಸತ್ತಿದ್ದಾರೆ ಈ ನಡುವೆ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿನ್ನುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಕಾಲೆಳೆದಿದ್ದರು. ಸದ್ಯ ರಮ್ಯಾ ಅಪಲ್ ಬಾಕ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.