Kantara: ʻಕಾಂತಾರʼ ಪದದ ಅರ್ಥವೇನು ಗೊತ್ತಾ? ರಿಷಬ್ ಶೆಟ್ಟಿ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದೇಕೆ?

Kantara: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ ಬಾಕ್‌ ಬಾಸ್ಟರ್‌ ಹಿಟ್‌ ಕಂಡಿತು. ತುಳುನಾಡ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯದ ವಿಷಯಗಳನ್ನ ಈ ಸಿನಿಮಾ ಒಳಗೊಂಡಿದೆ. ಕಾಂತಾರ ಪದದ ಅರ್ಥವನ್ನು ಹುಡುಕುವ ಪ್ರಯತ್ನ ಇಂದು ನಾವು ಮಾಡಿದ್ದೇವೆ.   

Written by - Chetana Devarmani | Last Updated : May 22, 2023, 02:32 PM IST
  • ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ
  • ʻಕಾಂತಾರʼ ಪದದ ಅರ್ಥವೇನು ಗೊತ್ತಾ?
  • ರಿಷಬ್ ಶೆಟ್ಟಿ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದೇಕೆ?
Kantara: ʻಕಾಂತಾರʼ ಪದದ ಅರ್ಥವೇನು ಗೊತ್ತಾ? ರಿಷಬ್ ಶೆಟ್ಟಿ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದೇಕೆ? title=
Kantara

Kantara: ಸ್ಯಾಂಡಲ್‌ವುಡ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಕಾಂತಾರ ಚಿತ್ರದ ಮೂಲಕ ಹೊಸ ಮಟ್ಟದ ಯಶಸ್ಸನ್ನು ಗಳಿಸಿದ್ದಾರೆ. ಕಾಂತಾರ ಒಂದು ವಿಶಿಷ್ಟ ಪರಿಕಲ್ಪನೆ, ತರ್ಕವನ್ನು ಮೀರಿದ ವಿಶೇಷ ಶಕ್ತಿಯ ಬಗ್ಗೆ ಕತೆ ಹೇಳುವ ಸಿನಿಮಾ. ತುಳುನಾಡ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯದ ವಿಷಯಗಳೊಂದಿಗೆ ಕೊನೆಯ ಸೀನ್‌ ವರೆಗೂ ಪ್ರೇಕ್ಷಕನನ್ನು ಹಿಡಿದು ಕೂರಿಸುತ್ತೆ ಈ ಚಿತ್ರ.

ಹಲವಾರು ಸಿನಿಪ್ರೇಮಿಗಳು ಒಂದಕ್ಕಿಂತ ಹೆಚ್ಚು ಬಾರಿ ಚಿತ್ರವನ್ನು ವೀಕ್ಷಿಸುವುದಾಗಿ ಹೇಳಿಕೊಂಡಿದ್ದರೂ, ಹೆಚ್ಚಿನ ಪ್ರೇಕ್ಷಕರಿಗೆ ಕಾಂತಾರ ಪದದ ಅರ್ಥವೇ ತಿಳಿದಿಲ್ಲ. ಸುಮಾರು 90 ಪ್ರತಿಶತ ಅಭಿಮಾನಿಗಳಿಗೆ ಚಿತ್ರದ ಶೀರ್ಷಿಕೆಯ ವ್ಯಾಖ್ಯಾನವೂ ತಿಳಿದಿಲ್ಲ ಎಂದು ನಂಬಲಾಗಿದೆ. ಕಾಂತಾರ ಪದದ ಅರ್ಥವನ್ನು ಹುಡುಕುವ ಪ್ರಯತ್ನ ಇಂದು ನಾವು ಮಾಡಿದ್ದೇವೆ. 

ಇದನ್ನೂ ಓದಿ :  ಅಭಿಷೇಕ್ ಅಂಬರೀಶ್-ಅವಿವಾ ಮದುವೆ ಡೇಟ್ ಫಿಕ್ಸ್ ! ಯಾವಾಗ ಗೊತ್ತಾ?

ಕಾಂತಾರ ಹಳ್ಳಿಗರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಕೋರಾಡುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ನಾಯಕ ಶಿವ (ರಿಷಬ್ ಶೆಟ್ಟಿ) ಪ್ರಾಣಿಗಳನ್ನು ಬೇಟೆಯಾಡಲು ಕಾಡಿಗೆ ಭೇಟಿ ನೀಡುತ್ತಾನೆ ಮತ್ತು ವರಾಹ ದೇವ (ವಿಷ್ಣುವಿನ ಅವತಾರ) ಇರುವಿಕೆಯ ಸೂಚನೆಗಳನ್ನು ಅನುಭವಿಸುತ್ತಾನೆ. ಇದರಿಂದ ಆತನಿಗೆ ತೀವ್ರ ಆತಂಕ ಉಂಟಾಗುತ್ತದೆ.

ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಸಿನಿಪ್ರಿಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ದುರಾಸೆಯ ಜಮೀನ್ದಾರನ ಮೇಲೆ ಸೇಡು ತೀರಿಸಿಕೊಳ್ಳಲು ಅಲೌಕಿಕ ಶಕ್ತಿಯು ಶಿವನ ದೇಹವನ್ನು ಪ್ರವೇಶಿಸುತ್ತದೆ. ಕೊನೆಯಲ್ಲಿ, ನಾವು ದೈವ ಪಂಜುರ್ಲಿಯ ರುದ್ರಾವತಾರವನ್ನು ಸಹ ಕಾಣುತ್ತೇವೆ. ಭೂಮಿಯ ರಕ್ಷಕ. ದೈವ ಪಂಜುರ್ಲಿ ಕನ್ನಡ ಸಂಸ್ಕೃತಿಯ ಬಹುಮುಖ್ಯ ಭಾಗವಾಗಿದೆ. ‌ಭೂತಕೋಲದ ಆಚರಣೆ ಮತ್ತು ದೈವದ ಮಹತ್ವವನ್ನು ಸಾರಲಾಗಿದೆ. 

ಇದನ್ನೂ ಓದಿ : ತಲೆದಿಂಬು ಹಿಡಿದು ವಿಮಾನ ನಿಲ್ದಾಣಕ್ಕೆ ಬಂದ ಜಾನ್ವಿ ಕಪೂರ್‌..! ವಿಡಿಯೋ ವೈರಲ್‌

ರಿಷಬ್ ಶೆಟ್ಟಿ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ , ಫಾರೆಸ್ಟ್‌ ಆಫೀಸರ್‌ ಮುರಳೀಧರ್ ಪಾತ್ರದಲ್ಲಿ ಕಿಶೋರ್, ಭೂ ಮಾಲೀಕ ದೇವೇಂದ್ರ ಸುತ್ತೂರು ಪಾತ್ರದಲ್ಲಿ ಅಚ್ಯುತ್ ಕುಮಾರ್ ಸೇರಿದಂತೆ ಬಹು ತಾರಾಗಣವಿದೆ.  

30ನೇ ಸೆಪ್ಟೆಂಬರ್ 2022 ರಂದು ಸಿನಿಮಾ ಹಾಲ್‌ಗಳಲ್ಲಿ ಬಿಡುಗಡೆಯಾದ ಕಾಂತಾರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 450 ಕೋಟಿ ರೂಪಾಯಿ ಗಳಿಸಿದೆ ಎಂದು ನಂಬಲಾಗಿದೆ. ಏತನ್ಮಧ್ಯೆ, ನಿರ್ಮಾಪಕರು ಕಾಂತಾರ 2 ರಲ್ಲೂ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಕಾಂತಾರ 2 ಸಿನಿಮಾ ಕೂಡ ತೆರೆಗೆ ಬರಲಿದೆ. ಹೀಗಿರುವಾಗ ಕಾಂತಾರ ಎಂದರೆ ಏನು ಎಂಬುದು ಅನೇಕರ ತಲೆಯಲ್ಲಿ ಬಂದಿರಬಹುದು. ಕಾಂತಾರ ಎಂದರೆ ನಿಗೂಢ ಕಾಡು. ಇದರ ಇನ್ನೊಂದು ಅರ್ಥ ಮಾಯಾವಿ ಜಂಗಲ್, ಇದು ಮಾನವರು ಪ್ರಕೃತಿ ಮತ್ತು ದೈವಿಕ ಶಕ್ತಿಯೊಂದಿಗೆ ಒಂದಾಗುವ ಸ್ಥಳವಾಗಿದೆ. ಇದೇ ಕಾರಣಕ್ಕೆ ರಿಷಬ್‌ ಶೆಟ್ಟಿ ಈ ಸಿನಿಮಾಗೆ ಕಾಂತಾರ ಎಂಬ ಟೈಟಲ್‌ ನೀಡಿದ್ದಾರೆ. 

ಇದನ್ನೂ ಓದಿ : ಕೋಪದಿಂದ ಐಶ್ವರ್ಯಾ ರೈ ತಾಯಿಯ ಕೈ ದೂಡಿದ ಜಯಾ ಬಚ್ಚನ್! ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News