Jaya Bachchan - Vrinda Rai Video: ಐಶ್ವರ್ಯಾ ರೈ ಅವರ ತಾಯಿಯೊಂದಿಗೆ ಜಯಾ ಬಚ್ಚನ್ ಕೋಪದಿಂದ ವರ್ತಿಸಿದ್ದಾರೆ ಎಂದು ಹೇಳುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋ 2014 ರದ್ದು ಎನ್ನಲಾಗಿದೆ. ಮುಂಬೈನಲ್ಲಿ ದೀಪಿಕಾ ಪಡುಕೋಣೆ ಮತ್ತು ರಜನಿಕಾಂತ್ ಅಭಿನಯದ ಕೊಚ್ಚಡೈಯಾನ್ ಸಿನಿಮಾದ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಈ ವಿಡಿಯೋ ಸೆರೆಯಾಗಿದೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ, ಜಯಾ ಬಚ್ಚನ್ ಕೋಪದಿಂದ ಐಶ್ವರ್ಯಾ ಅವರ ತಾಯಿ ವೃಂದಾ ರೈ ಅವರ ಕೈಯನ್ನು ಎಳೆದಿರುವುದು ಕಂಡುಬರುತ್ತದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ, ಜಯಾ ಬಚ್ಚನ್ ಮತ್ತು ಐಶ್ವರ್ಯಾ ಅವರ ತಾಯಿ ವೃಂದಾ ರೈ ಪಾಪರಾಜಿಗಳಿಗೆ ಪೋಸ್ ನೀಡುವ ವೇಳೆ ಇದು ಸಂಭವಿಸಿದೆ ಎನ್ನಲಾಗಿದೆ. ಸಿಟ್ಟಿಗೆದ್ದಂತೆ ತೋರುತ್ತಿದ್ದ ಜಯ ಬಚ್ಚನ್ ಅವರು ವೃಂದಾ ರೈ ಪಕ್ಕದಲ್ಲಿ ನಿಂತಿದ್ದರು. ಐಶ್ವರ್ಯಾ ರೈ ತಾಯಿ ಪೋಸ್ ಕೊಡಲು ಜಯಾ ಬಚ್ಚನ್ ಅವರ ಕೈಯನ್ನು ಹಿಡಿದಾಗ, ಜಯಾ ವೃಂದಾಳ ಕೈಯನ್ನು ದೂಡಿ ಪಕ್ಕದಲ್ಲಿ ನಿಂತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ : ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ; 29 ವರ್ಷದ ಯುವ ನಟಿ ಸಾವು!
ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರು ಜಯಾ ಅವರ ವರ್ತನೆ ಕಂಡು ಅಸಮಾಧಾನ ಹೊರ ಹಾಕಿದರೆ, ಮತ್ತೆ ಕೆಲವರು ಇದು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ. "ದಯವಿಟ್ಟು ಪೂರ್ತಿ ವಿಡಿಯೋ ನೋಡಿ. ಐಶ್ ಮತ್ತು ಅಮಿತಾಭ್ ನಡುವೆ ಜಯಾ ನಿಲ್ಲಲಿಲ್ಲ. ಐಶ್‌ನ ತಾಯಿ ಪಕ್ಕದಲ್ಲಿ ನಿಲ್ಲುವಂತೆ ಕೇಳಿದಾಗ, ಜಯ ಗೌರವಯುತವಾಗಿ ಅವರ ಕೈಯನ್ನು ಹಿಡಿದು ನಿಲ್ಲುತ್ತಾರೆ. ಸ್ವಲ್ಪ ಸಮಯ ಹಿಡಿದುಕೊಂಡು ಬಳಿಕ ಐಶ್‌ನ ತಾಯಿ ತನ್ನ ಕೈಯನ್ನು ಸ್ವತಃ ತೆಗೆದರು" ಎಂದು ಅನೇಕರು ಸೂಕ್ಷ್ಮವಾಗಿ ಗಮನಿಸಿ ಕಾಮೆಂಟ್ ಮಾಡಿದ್ದಾರೆ.
ಐಶ್ವರ್ಯಾ ರೈ ತನ್ನ ಕಾನ್ಸ್ 2023 ಫಿಲ್ಮ್ ಫೆಸ್ಟಿವಲ್‌ನ ಉಡುಗೆಯಿಂದ ಸದ್ಯ ಮುಖ್ಯಾಂಶದಲ್ಲಿದ್ದಾರೆ. ಈ ವರ್ಷ ತನ್ನ ರೆಡ್ ಕಾರ್ಪೆಟ್ ಲುಕ್‌ನ್ನು ಒಂದಕ್ಕೆ ಸೀಮಿತಗೊಳಿಸಿದ ಐಶ್ವರ್ಯಾ ತನ್ನ ಉಡುಪಿನೊಂದಿಗೆ ಎಲ್ಲರ ಗಮನಸೆಳೆದಿದ್ದಾರೆ. ಅವರು ಶುಕ್ರವಾರ ರಾತ್ರಿ ಕಾನ್ಸ್ ನಿಂದ ಮರಳಿದರು. ಅವರ ಮಗಳು ಆರಾಧ್ಯ ಬಚ್ಚನ್ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ : ವರುಣ್ ಧವನ್ ಜೊತೆ ಸಮಂತಾ ರೋಮ್ಯಾನ್ಸ್! ಹಾಟ್ ಬೆಡ್ ರೂಮ್ ದೃಶ್ಯ..?