ರಾಮ್ ಚರಣ್ ಹೀರೋ ಆಗುವ ಮುನ್ನ ಬಾಲನಟನಾಗಿ ನಟಿಸಿದ ಸಿನಿಮಾ ಯಾವುದು ಗೊತ್ತಾ?

Ram Charan Child Artist: ರಾಮ್ ಚರಣ್ ಬಾಲನಟರಾ..? ಹೌದು .. ಮೆಗಾ ಸ್ಟಾರ್ ಬಾಲನಟನನಾಗಿ ಕಾಣಿಸಿಕೊಂಡ ಸಿನಿಮಾ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Nov 16, 2023, 12:32 PM IST
  • ಸತತ ಹಿಟ್‌ ಸಿನಿಮಾಗಳಿಂದ ಯಶಸ್ಸಿನ ಉತ್ತುಂಗದಲ್ಲಿರುವ ಮೆಗಾ ಸ್ಟಾರ್‌ ರಾಮ್‌ ಚರಣ್‌
  • ರಾಮ್‌ ಚರಣ್‌ ಸದ್ಯ ಸೋಷಿಯಲ್‌ ಮಿಡಿಯಾದ ಹಾಟ್‌ ಟಾಫಿಕ್‌..
  • ರಾಮ್‌ ಚರಣ್‌ ಬಾಲ ನಟನಾಗಿ ನಟಿಸಿದ ಸಿನಿಮಾಗಳ ಬಗ್ಗೆ ಮಾಹಿಯೊಂದು ಹೊರಬಿದ್ದಿದೆ
ರಾಮ್ ಚರಣ್ ಹೀರೋ ಆಗುವ ಮುನ್ನ ಬಾಲನಟನಾಗಿ ನಟಿಸಿದ ಸಿನಿಮಾ ಯಾವುದು ಗೊತ್ತಾ? title=

Megha Star Ram Charan: ಸತತ ಹಿಟ್‌ ಸಿನಿಮಾಗಳಿಂದ ಯಶಸ್ಸಿನ ಉತ್ತುಂಗದಲ್ಲಿರುವ ಮೆಗಾ ಸ್ಟಾರ್‌ ರಾಮ್‌ ಚರಣ್‌ ಸದ್ಯ ಸೋಷಿಯಲ್‌ ಮಿಡಿಯಾದ ಹಾಟ್‌ ಟಾಫಿಕ್‌.. ಹೌದು ಇದೀಗ ರಾಮ್‌ ಚರಣ್‌ ಬಾಲ್ಯದ ಕುರಿತ ಮಾಹಿತಿಯೊಂದು ಹೊರಬಿದ್ದಿದೆ.. 

ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾದ ಕಾರಣ ಅವರನ್ನು ಬಾಲನಟನಾಗಿ ಪರಿಚಯಿಸಲು ಹಲವು ನಿರ್ದೇಶಕರು, ನಿರ್ಮಾಪಕರು ಪೈಪೋಟಿ ನಡೆಸಿದ್ದರು. ಅದರಲ್ಲೂ ರಾಮ್ ಚರಣ್ ಬಾಲ್ಯದಲ್ಲಿ ತುಂಬಾ ಮುದ್ದಾಗಿದ್ದರು. 

ಇದನ್ನೂ ಓದಿ-ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ; ಬಿಹಾರ ಯುವಕನ ಬಂಧನ..!

ಮೆಗಾ ವಾರಸುದಾರನ ಬಾಲ್ಯದ ಫೋಟೋಗಳನ್ನು ನೋಡಿದರೆ ಸಹಜವಾಗಿ ಅದು ಅರ್ಥವಾಗುತ್ತದೆ. ಪ್ರಸ್ತುತ ಅವರು ಟಾಲಿವುಡ್‌ನ ಟಾಪ್ ಹೀರೋಗಳಲ್ಲಿ ಒಬ್ಬರಾಗಿರುವ ಚರಣ್ ತಮ್ಮ 17 ವರ್ಷಗಳ ವೃತ್ತಿ ಜೀವನದಲ್ಲಿ ಮಗಧೀರ, ರಂಗಸ್ಥಳಂ ಮತ್ತು ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್‌ಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ..

ಇನ್ನು ರಾಮ್‌ ಚರಣ್‌ ಬಾಲ್ಯದ ಸಿನಿ ಜರ್ನಿ ಕುರಿತು ಮಾತನಾಡುವುದಾದರೇ.. ರಾಮ್ ಚರಣ್ 17ನೇ ವಯಸ್ಸಿನಲ್ಲಿ ಚಿರುತ್ತಾ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದರು. ಆ ನಂತರ ಹಲವು ಯಶಸ್ಸು, ಸೋಲುಗಳನ್ನು ಕಂಡಿದ್ದಾರೆ. 

ಇದನ್ನೂ ಓದಿ-Tiger 3: ಥಿಯೇಟರ್ ಒಳಗೆ ಪಟಾಕಿ..! ಅಭಿಮಾನಿಗಳ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್

ಆದರೆ ಇದೆಲ್ಲವನ್ನು ಹರೊತುಪಡಿಸಿ ರಾಮ್‌ಚರಣ್‌ ಅವರು ಚಿಕ್ಕವರಿದ್ದಾಗ ಸಿನಿಮಾದಲ್ಲಿ ನಟಿಸಿದ್ದರು. ಅನೇಕರಿಗೆ ಇದು ತಿಳಿದಿಲ್ಲ. ಯಾಕೆಂದರೆ ಆ ಸಿನಿಮಾ ರಿಲೀಸ್ ಆದ ಮೇಲೆ ಚರಣ್ ಇರುವ ದೃಶ್ಯಗಳನ್ನು ತೆಗೆಯಲಾಗಿತ್ತು.

ಚಿರಂಜೀವಿ ಅಭಿನಯದ ಲಂಕೇಶ್ವರುಡು ಚಿತ್ರದಲ್ಲಿ ರಾಮ್ ಚರಣ್ ಕೂಡ ಒಂದು ದೃಶ್ಯದಲ್ಲಿದ್ದಾರೆ ಎಂದು ವರದಿ ಮಾಡಲಾಗಿದೆ.. ದಾಸರಿ ನಾರಾಯಣ ರಾವ್ ಮತ್ತು ಚಿರಂಜೀವಿ ಕಾಂಬಿನೇಷನ್‌ನಲ್ಲಿರುವ ಏಕೈಕ ಚಿತ್ರ ಇದಾಗಿದ್ದು, ಇದರಲ್ಲಿ ಚರಣ್ ಒಂದು ದೃಶ್ಯದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಆದರೆ ಇದರಲ್ಲಿಯೂ ಅವರ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು ಎಂದು ವರದಿಯಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News