Yash - Hardik Pandya: ರಾಕಿ ಭಾಯ್‌ ಜೊತೆ ಭರ್ಜರಿ ಸ್ಟೆಪ್ಸ್‌ ಹಾಕಿದ ಹಾರ್ದಿಕ್‌ ಪಾಂಡ್ಯ... ಫ್ಯಾನ್ಸ್‌ ಫುಲ್‌ ಫಿದಾ!

Yash-Hardik Pandya: ನಟ ರಾಕಿಂಗ್​ ಸ್ಟಾರ್​’ ಯಶ್ ಅವರು ಸಿನಿಮಾರಂಗ ಮಾತ್ರವಲ್ಲದೇ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳ ಜೊತೆಗೂ ಸ್ನೇಹ ಭಾಂದವ್ಯದಿಂದ ಇದ್ದಾರೆ. ಇದೀಗ ​ನಟ  ಯಶ್, ಹಾಗೂ  ಸ್ಟಾರ್ ಕ್ರಿಕೆಟ್ ಆಟಗಾರ ಹಾರ್ದಿಕ್​ ಪಾಂಡ್ಯ ಇಬ್ಬರು ಡ್ಯಾನ್ಸ್‌ ಮಾಡಿರುವ ವಿಡೀಯೊ ತುಣುಕುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ಆಗಿದೆ. 

Written by - Zee Kannada News Desk | Last Updated : Apr 23, 2023, 02:36 PM IST
  • ​ಹಾರ್ದಿಕ್​ ಪಾಂಡ್ಯ ಹಾಗೂ ‘ರಾಕಿಂಗ್​ ಸ್ಟಾರ್’​ ಯಶ್​ ಡ್ಯಾನ್ಸ್‌ ವಿಡಿಯೋ ಫುಲ್‌ ವೈರಲ್​
  • ಇಬ್ಬರ ಸ್ಟಾರ್ಸ್‌ ಡ್ಯಾನ್ಸ್‌ ಫ್ಯಾನ್ಸ್‌ ಫುಲ್‌ ಫಿದಾ
  • ಹಾರ್ದಿಕ್​ ಪಾಂಡ್ಯ ಮದುವೆಯಲ್ಲಿ ಸಖತ್‌ ಆಗಿ ಮಿಂಚಿದ ರಾಕಿ ಬಾಯ್‌
Yash - Hardik Pandya: ರಾಕಿ ಭಾಯ್‌ ಜೊತೆ ಭರ್ಜರಿ ಸ್ಟೆಪ್ಸ್‌ ಹಾಕಿದ ಹಾರ್ದಿಕ್‌ ಪಾಂಡ್ಯ... ಫ್ಯಾನ್ಸ್‌ ಫುಲ್‌ ಫಿದಾ! title=

ಬೆಂಗಳೂರು: ನಟ ರಾಕಿಂಗ್​ ಸ್ಟಾರ್​’ ಯಶ್ ಅವರು ಸಿನಿಮಾರಂಗ ಮಾತ್ರವಲ್ಲದೇ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳ ಜೊತೆಗೂ ಸ್ನೇಹ ಭಾಂದವ್ಯದಿಂದ ಇದ್ದಾರೆ. ‘ಕೆಜಿಎಫ್​’ ಸಿನಿಮಾ ಬಳಿಕ ಕರುನಾಡ ಗಡಿ ದಾಟಿ ದೇಶಾದ್ಯಂತ ಪರಿಚಿತ ವ್ಯಕ್ತಿಯಾಗಿದ್ದಾರೆ. ಬರೀ ಸಿನಿ ತಾರೆಯರು ಮಾತ್ರವಲ್ಲದೇ ಸ್ಟಾರ್ ಕ್ರೀಕೆಟ್‌ ಆಟಗಾರರೊಡನೆ ಉತ್ತಮ ಒಡನಾಟ ಹೊಂದಿದ್ದಾರೆ.  

ಇದೀಗ ​ನಟ ರಾಕಿಂಗ್​ ಸ್ಟಾರ್​ ಯಶ್, ಹಾಗೂ  ಸ್ಟಾರ್ ಕ್ರಿಕೆಟ್ ಆಟಗಾರ ಹಾರ್ದಿಕ್​ ಪಾಂಡ್ಯ ಇಬ್ಬರು ಡ್ಯಾನ್ಸ್‌ ಮಾಡಿರುವ ವಿಡೀಯೊ ತುಣುಕುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ಆಗಿದೆ. 

ಇದನ್ನೂ ಓದಿ: Agnisakshi Serial Actor: ಅಗ್ನಿಸಾಕ್ಷಿ' ಧಾರಾವಾಹಿ ನಟ ಸಂಪತ್ ಜಯರಾಮ್‌ ನೇಣಿಗೆ ಶರಣು

ಇತ್ತಿಚೇಗೆ ಉದಯಪುರದಲ್ಲಿ ನಡೆದ ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೊವಿಚ್​ ಮದುವೆಗೆ ಅನೇಕ ಗಣ್ಯರು ಬಂದಿದ್ದರು.  ಕ್ರಿಕೆಟ್​ ಸ್ಟಾರ್ಸ್‌ ಮಾತ್ರ ಭಾಗಿಯಾಗಿರದೇ ಅನೇಕ ಸಿನಿ ತಾರೆಯರು ಆಗಮಿಸಿದ್ದರು. ಅದರಲ್ಲಿ ​ನಟ ರಾಕಿಂಗ್​ ಸ್ಟಾರ್​ ಯಶ್ ಕೂಡ ಒಬ್ಬರು.

ಉದಯಪುರದಲ್ಲಿ ನಡೆದ ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಯಶ್ ಹಾಗೂ ಪಾಂಡ್ಯ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್​ ಪಾಂಡ್ಯ ಅವರು ನತಾಶಾ ಸ್ಟಾಂಕೊವಿಕ್​​ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆದರು. ಉದಯಪುರದಲ್ಲಿ ನಡೆದ ಈ ಅದ್ದೂರಿ ವಿವಾಹ  ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. 

ಇದನ್ನೂ ಓದಿ: Bollywood Stars: ಸಿನಿಮಾಗೋಸ್ಕರ ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌ ತಾರೆಯರು - ಇವ್ರೇ ನೋಡಿ

 ಆ ಸಂದರ್ಭದಲ್ಲಿ ನಟ ಯಶ್​ ಜೊತೆ  ಹಾರ್ದಿಕ್​ ಪಾಂಡ್ಯ  ಹಾಕಿದ  ಸ್ಟೆಪ್ ನ  ವಿಡಿಯೋ ತುಣುಕುಗಳು ವೈರಲ್‌ ಆಗಿವೆ. ಇದನ್ನು ಕಂಡು ಫ್ಯಾನ್ಸ್​ ಫುಲ್‌ ಫಿಧ ಆಗಿದ್ದಾರೆ.  ಯಶ್  ಹಾಗೂ ಹಾರ್ದಿಕ್​ ಪಾಂಡ್ಯ ​ ನಡುವೆ ಮೊದಲಿನಿಂದಲೂ  ಉತ್ತಮ ಸ್ನೇಹ ಇತ್ತು .  ಇದೀಗ ಅವರಿಬ್ಬರು ಒಟ್ಟಿಗಿನ ಕ್ಷಣ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News