ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ ಡಾ.ರಾಜ್‌ಕುಮಾರ್‌ ಕುಟುಂಬದ ಕುಡಿ

ದೊಡ್ಮನೆ ಹುಡುಗನ ನಿಶ್ಚಿತಾರ್ಥ ಇದೇ ತಿಂಗಳ ಜುಲೈ 5 ರಂದು ನಡೆಯಲಿದೆ.

Last Updated : Jul 4, 2018, 10:36 AM IST
ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ ಡಾ.ರಾಜ್‌ಕುಮಾರ್‌ ಕುಟುಂಬದ ಕುಡಿ  title=
Pic: Facebook

ಬೆಂಗಳೂರು: ಕನ್ನಡದ ಕಣ್ಮಣಿ, ವರನಟ ಡಾ. ರಾಜ್ ಕುಮಾರ್ ಕುಟುಂಬದ ಕುಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ದೊಡ್ಮನೆ ಹುಡುಗನ ನಿಶ್ಚಿತಾರ್ಥ ಇದೇ ತಿಂಗಳ ಜುಲೈ 5 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಡಾ. ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ಯುವ ರಾಜ್​ಕುಮಾರ್​(ಗುರುರಾಜ್​ ಕುಮಾರ್) ನಿಶ್ಚಿತಾರ್ಥ ಮೈಸೂರು ಮೂಲದ ಗೆಳತಿ ಶ್ರೀದೇವಿ ಅವರ ಜತೆ ಯುವರಾಜ್ ನಿಶ್ಚಿತಾರ್ಥ ನಡೆಯಲಿದೆ. ಎರಡು ಕುಟುಂಬದ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಶ್ಚಿತಾರ್ಥ ಶುಭಕಾರ್ಯ ನಡೆಯಲಿದೆ ಎನ್ನಲಾಗಿದ್ದು, ನಿಶ್ಚಿತಾರ್ಥದಲ್ಲಿ ಆಪ್ತರು, ಬಂಧು-ಬಳಗ ಮಾತ್ರ ಹಾಜರಿರಲಿದ್ದಾರೆ ಎನ್ನಲಾಗಿದೆ.

Trending News