ಡ್ರಗ್ಸ್ ಧಂಧೆ ಪ್ರಕರಣ: ರಾತ್ರಿಯಿಡೀ ಊಟ, ನಿದ್ದೆ ಮಾಡದೇ ಕಣ್ಣೀರಿಡುತ್ತಿದ್ದ ಸಂಜನಾ ಗಲ್ರಾನಿ

ನ್ಯಾಯಾಲಯದಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದಂತೆ  ಸಂಜನಾ ಗುಲ್ರಾನಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತರಲಾಯಿತು.

Last Updated : Sep 9, 2020, 08:26 AM IST
  • ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ
  • ನಿನ್ನೆ ಬಂಧನಕ್ಕೊಳಗಾಗಿರುವ ಚಿತ್ರನಟಿ ಸಂಜನಾ ಗಲ್ರಾನಿ
  • ರಾಗಿಣಿ‌ ದ್ವಿವೇದಿ ಇರುವ ಕೊಠಡಿಯಲ್ಲೇ ಸಂಜನಾ ಗಲ್ರಾನಿ
ಡ್ರಗ್ಸ್ ಧಂಧೆ ಪ್ರಕರಣ: ರಾತ್ರಿಯಿಡೀ ಊಟ, ನಿದ್ದೆ ಮಾಡದೇ ಕಣ್ಣೀರಿಡುತ್ತಿದ್ದ ಸಂಜನಾ ಗಲ್ರಾನಿ title=
Pic Courtesy: zeecinemalu

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್  ಡ್ರಗ್ಸ್ ಮಾಫಿಯಾ (Drugs Mafiaಕ್ಕೆ ಸಂಬಂಧಿಸಿದಂತೆ  ನಿನ್ನೆ ಬಂಧನಕ್ಕೊಳಗಾಗಿರುವ ಚಿತ್ರನಟಿ ಸಂಜನಾ ಗಲ್ರಾನಿ (Sanjana Gulrani) ಅವರನ್ನು ಮಹಿಳಾ ಸಾಂತ್ವನ ಕೇಂದ್ರದ  ರಾಗಿಣಿ‌ ದ್ವಿವೇದಿ (Ragini Dwivedi) ಇರುವ ಕೊಠಡಿಯಲ್ಲೇ ಇಡಲಾಗಿದೆ.‌ ಹಾಗಾಗಿ ನಿನ್ನೆ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಂಜನಾ ಮತ್ತು ರಾಗಿಣಿ‌ ಜೊತೆಯಾಗಿ ರಾತ್ರಿ ಕಳೆದಿದ್ದಾರೆ.

ನಿನ್ನೆಯಷ್ಟೇ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಗೆ ಬಂದಿರುವ  ಸಂಜನಾ ಗಲ್ರಾನಿ (Sanjana Galrani)  ರಾತ್ರಿಯಿಡೀ ನಿದ್ದೆ ಮಾಡದೇ ಕಣ್ಣೀರಿಡುತ್ತಿದ್ದರು. ರಾತ್ರಿ ಊಟವನ್ನು ಕೂಡ ಮಾಡಿಲ್ಲ ಎಂದು ತಿಳಿದುಬಂದಿದೆ.

ಡ್ರಗ್ಸ್ ಧಂಧೆ ಹಿನ್ನೆಲೆಯಲ್ಲಿ ರಾಗಿಣಿ ಬಳಿಕ‌ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ

ನ್ಯಾಯಾಲಯದಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದಂತೆ  ಸಂಜನಾ ಗುಲ್ರಾನಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತರಲಾಯಿತು. ರಾಗಿಣಿ ಇದ್ದ ಕೊಠಡಿಗೇ ಕರೆತರಲಾಯಿತು. ‌ರಾಗಿಣಿಯನ್ನು ಕಂಡ ತಕ್ಷಣ ಸಂಜಾಮ 'ಆರ್ ಯು‌ ಹ್ಯಾಪಿ?' ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸದ ರಾಗಿಣಿ‌ ಮೌನವಾಗಿದ್ದರು ಎನ್ನಲಾಗಿದೆ.

ರಾಜ್ಯ ಮಹಿಳಾ ಕೇಂದ್ರದ ನಾಲ್ಕು ಹಾಸಿಗೆಯುಳ್ಳ ಕೊಠಡಿಯಲ್ಲಿದ್ದ ಸಂಜನಾ ಮತ್ತು ರಾಗಿಣಿ ರಾತ್ರಿಯಿಡೀ ಕಳೆದರೂ ಪರಸ್ಪರ ಮಾತನಾಡಿಲ್ಲ. ಒಬ್ಬರ  ಪರಸ್ಪರ ಮುಖ ನೋಡಿಕೊಂಡು ಪ್ರತ್ಯೇಕವಾಗಿ ಕುಳಿತಿದ್ದರು. ಕೊಠಡಿ ಭದ್ರತೆಗೆ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇಂದು ಬೆಳಗ್ಗೆ 10 ಗಂಟೆ ಬಳಿಕ ಸಂಜನಾ ಗಲ್ರಾನಿ ಅವರನ್ನು ಮಡಿವಾಳದ ಎಫ್ ಎಸ್ ಎಲ್ ಕಚೇರಿಗೆ  ಕರೆದೊಯ್ಯದ್ದು ವಿಚಾರಣೆ ನಡೆಸಲಾಗುತ್ತದೆ. ಮಡಿವಾಳದ ಎಫ್ ಎಸ್ ಎಲ್ ನಲ್ಲಿ ಇನ್ಸ್ ಪೆಕ್ಟರ್ ಅಂಜುಮಾಲ ಅವರು ಸಂಜನಾ ಅವರ ವಿಚಾರಣೆ ನಡೆಸಲಿದ್ದಾರೆ. ಇನ್ಸ್ ಪೆಕ್ಟರ್ ಕಾತ್ಯಾಯಿಣಿ ಅವರು ಮಹಿಳಾ ಕೇಂದ್ರದಲ್ಲೇ ರಾಗಿಣಿಯ ವಿಚಾರಣೆ ನಡೆಸಲಿದ್ದಾರೆ.

ರಾಹುಲ್ ಕೊಟ್ಟ ಹೇಳಿಕೆಗಳು ಮತ್ತು ಈಗಾಗಲೇ ಸಿಕ್ಕಿರುವ ತಾಂತ್ರಿಕವಾದ ಸಾಕ್ಷ್ಯಗಳ ಆಧಾರದ ಮೇಲೆ ಸಂಜನಾ ಗುಲ್ರಾನಿ ಅವರ ವಿಚಾರಣೆ. ಇನ್ಸ್ ಪೆಕ್ಟರ್ ಪುನೀತ್ ಕೂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ.
 

Trending News