ಮೆಟ್ರೋ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ ಮೃತಪಟ್ಟ ವ್ಯಕ್ತಿ..! ಅವಸರವೇ ಇದಕ್ಕೆ ಕಾರಣ

Delhi Metro man death : ಅವರಸರವೇ ಅಪಘಾತಕ್ಕೆ ಕಾರಣ ಎನ್ನುವ ಗಾದೆ ಮಾತು ಈ ಸುದ್ದಿ ನೋಡಿದ್ರೆ ನಿಜ ಅನಿಸುತ್ತದೆ. ವ್ಯಕ್ತಿಯೊಬ್ಬ ಆತುರದಲ್ಲಿ ಮೆಟ್ರೋ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಕುರಿತು ವಿಡಿಯೋ ವೈರಲ್‌ ಆಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Nov 30, 2023, 12:22 PM IST
  • ವ್ಯಕ್ತಿಯೊಬ್ಬ ಆತುರದಲ್ಲಿ ಮೆಟ್ರೋ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
  • ನಗರದ ಜನರ ಜೀವನಾಡಿಯಾಗಿರುವ ಮೆಟ್ರೋ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿದೆ.
  • ಅವರಸರದಲ್ಲಿ ಮೆಟ್ರೋ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಮೆಟ್ರೋ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ ಮೃತಪಟ್ಟ ವ್ಯಕ್ತಿ..! ಅವಸರವೇ ಇದಕ್ಕೆ ಕಾರಣ title=

ದೆಹಲಿ : ನಗರದ ಜನರ ಜೀವನಾಡಿಯಾಗಿರುವ ಮೆಟ್ರೋ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿದೆ. ಅವರಸರದಲ್ಲಿ ಮೆಟ್ರೋ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಶನಿವಾರ ದೆಹಲಿಯ ಗುರುಗ್ರಾಮ್‌ನ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಂಚಲನ ಮೂಡಿಸಿದೆ. 

ಮೃತರನ್ನು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಗ್ರಾಮದ ಭೂರಾ ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಭೂರಾ ಸಿಂಗ್ ತನ್ನ ಮಗ ಅಶ್ವಿನ್‌ನೊಂದಿಗೆ ಮಾನೇಸರ್ ಬಳಿಯ ಕಸನ್ ಗ್ರಾಮದಲ್ಲಿ ವಾಸಿಸುತ್ತಿದ್ದನು, ಇಬ್ಬರೂ ಕೂಲಿ ಕಾರ್ಮಿಕರು. ಸಿಂಗ್ ಕಾನ್ಪುರದ ತಮ್ಮ ಗ್ರಾಮಕ್ಕೆ ಹೋಗಿ ಶನಿವಾರ ಹಿಂತಿರುಗಿದ್ದರು. 

ಇದನ್ನೂ ಓದಿ:ಚಳಿ ಮಧ್ಯೆ ಮಳೆ ಅಬ್ಬರ: ಈ ಭಾಗಗಳಲ್ಲಿ ಮುಂದಿನ 2 ದಿನ ಭರ್ಜರಿ ಮಳೆ-ಚಂಡಮಾರುತದ ಸುಳಿಗೆ ಸಿಲುಕುವ ಭೀತಿ

ದೆಹಲಿಯಿಂದ ಮೆಟ್ರೋ ಹತ್ತಿದ ಅವರು ಛತ್ತರ್‌ಪುರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 1ರಲ್ಲಿ ಇಳಿದರು. ತ್ವರಿತವಾಗಿ ಪ್ಲಾಟ್‌ ಫಾರ್ಮ್‌ 2ಗೆ ಹೋಗಬೇ
 ನಿಲ್ದಾಣದಿಂದ ಹೊರಬರುವ ಆತುರದಲ್ಲಿ, ಮೆಟ್ಟಿಲು ಅಥವಾ ಎಸ್ಕಲೇಟರ್ ಬಳಸುವ ಬದಲು ಪ್ಲಾಟ್‌ಫಾರ್ಮ್ ಸಂಖ್ಯೆ 2 ಅನ್ನು ತಲುಪಲು ಹಳಿಗಳನ್ನು ದಾಟಲು ಪ್ರಯತ್ನಿಸಿದರು. ಆದರೆ ಅವನು ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ನೆಗೆಯುತ್ತಿರುವಾಗಲೇ ಬರುತ್ತಿರುವ ರೈಲು ಕಂಡು ಭಯಗೊಂಡನು.

ಇದೆಲ್ಲವನ್ನು ನೋಡಿದ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಹಿಳೆಯೊಬ್ಬರು ಆತನನ್ನು ಟ್ರ್ಯಾಕ್‌ನಿಂದ ಎಳೆಯಲು ಪ್ರಯತ್ನಿಸಿದರು ಆದರೆ ಅದು ತುಂಬಾ ತಡವಾಗಿತ್ತು. ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡ ಕಾರಣ, ಕೆಲವು ಮೀಟರ್ ಅವನನ್ನು ರೈಲು ಎಳೆದೊಯ್ದು ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News