Aryavardhan Guruji : BBK ನನಗೆ ಮೋಸ ಮಾಡಿದೆ, Bigg Boss ವೀಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕ ಇರಬಾರದು : ಆರ್ಯವರ್ಧನ್ ಗುರೂಜಿ

Aryavardhan Guruji Statement on Bigg Boss : ಅದೆಷ್ಟೋ ಹಣ ಕೂಡ ನನಗೆ ಲಾಸ್ ಆಗಿದೆ. ಹೇಗೋ ಆರಾಮ್ ಆಗಿ ಇದ್ದೆ. ಸುಮ್ನೆ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ನಾನು ಕೆಲಸದಾಳುವಿನ ಹಾಗೇ ಮನೆಕೆಲಸ ಮಾಡಿದ್ದೀನಿ. ನನಗೆ ಬಿಗ್ ಬಾಸ್ ಮೋಸ ಮಾಡಿದೆ ಅಂತ ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.   

Written by - YASHODHA POOJARI | Last Updated : Mar 25, 2023, 12:06 PM IST
  • BBK ನನಗೆ ಮೋಸ ಮಾಡಿದೆ
  • ವೀಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕ ಇರಬಾರದು
  • ಆರ್ಯವರ್ಧನ್ ಗುರೂಜಿ ಹೇಳಿಕೆ
Aryavardhan Guruji : BBK ನನಗೆ ಮೋಸ ಮಾಡಿದೆ, Bigg Boss ವೀಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕ ಇರಬಾರದು : ಆರ್ಯವರ್ಧನ್ ಗುರೂಜಿ  title=
Aryavardhan Guruji

Aryavardhan Guruji Statement against Bigg Boss show : ಬಿಗ್ ಬಾಸ್ ಮನೆಗೆ ನಾನು ಹೋಗಲೇ ಬಾರದು ಇತ್ತು. ನಾನು ಪರಮೇಶ್ವರ್ ಗುಂಡ್ಕಲ್ ಅವರಿಗೋಸ್ಕರ ಹೋದೆ. ನನಗೆ ಬಿಗ್ ಬಾಸ್ ಮೋಸ ಮಾಡಿದೆ ಅಂತ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಖ್ಯಾತಿಯ ಆರ್ಯವರ್ಧನ್  ಗುರೂಜಿ. ಹೌದು ಬಿಗ್ ಬಾಸ್ ಓಟಿಟಿ ಸೀಸನ್ ಮೂಲಕ ದೊಡ್ಮನೆ ಒಳಗೆ ಹೋದ ಗುರೂಜಿ ಯಾಕೋ ಇತ್ತೀಚಿಗೆ ತುಂಬಾ ಮಂಕಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಎಲ್ಲವನ್ನೂ ಕಳೆದುಕೊಂಡೇ ಅನ್ನೋ ತರಮಾತನಾಡಿದ್ದಾರೆ.

ಇದನ್ನೂ ಓದಿ : Kareena Kapoor : ಸೈಫ್ ಜೊತೆ ಮದುವೆ ಬಳಿಕ ಕರೀನಾ ಇಸ್ಲಾಂಗೆ ಮತಾಂತರಗೊಂಡಿದ್ದಾರಾ?

ಜೀ ಕನ್ನಡ ನ್ಯೂಸ್ ಜೊತೆ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಗುರೂಜಿ, ಯಾಕೋ ಕಂಪ್ಲೀಟ್ ಡಲ್ ಆದಂತೆ ಕಂಡರು. ಅದೆಷ್ಟೋ ಹಣ ಕೂಡ ನನಗೆ ಲಾಸ್ ಆಗಿದೆ. ಹೇಗೋ ಆರಾಮ್ ಆಗಿ ಇದ್ದೆ. ಸುಮ್ನೆ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ನಾನು ಕೆಲಸದಾಳುವಿನ ಹಾಗೇ ಮನೆಕೆಲಸ ಮಾಡಿದ್ದೀನಿ. ನಾನೇ ಗೆಲ್ಲಬೇಕು ಅಂತ ಎಲ್ಲಾರು ಅಂದುಕೊಂಡಿದ್ದರು. ನಾನು ಅಷ್ಟೇ ತುಂಬಾ ಚನ್ನಾಗಿ ಮನೆಯಲ್ಲಿ ಆಟ ಆಡಿದ್ದೀನಿ ಆದ್ರೆ ಏನು ಯೂಸ್ ಇಲ್ಲ ಅಂತ ತುಂಬಾ ನೋವಿನಿಂದಲೇ ಹೇಳಿಕೊಂಡಿದ್ದಾರೆ ಆರ್ಯವರ್ಧನ್ ಗುರೂಜಿ.

ಇದರ ಜೊತೆಗೆ ವೀಕೆಂಡ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ  ನಿರೂಪಕರೇ ಇರಬಾರದು. ಯಾಕೆ ಸುಮ್ಮನೇ ನಿರೂಪಕರು ಅಂತ ಪ್ರಶ್ನೆ ಮಾಡಿದ್ದಾರೆ ಆರ್ಯವರ್ಧನ್ ಗುರೂಜಿ.ಜೊತೆಗೆ ಒಳ್ಳೆ ಸಂದೇಶ ಸಾರೋ ಸಿನಿಮಾಗಳು ಸಿಕ್ರೆ ನಟನೆ ಕೂಡ ಮಾಡ್ತೀನಿ. ರಾಜಕೀಯವಾಗಿ ಎಂಟ್ರಿ ಕೊಡೋ ಆಸೆ ಇದೆ ಅನ್ನೋದನ್ನ ಜೀ ಕನ್ನಡ ಇಂಟರ್ವ್ಯೂ ನಲ್ಲಿ ಹಂಚಿಕೊಂಡಿದ್ದಾರೆ ಆರ್ಯವರ್ಧನ್

ಇದನ್ನೂ ಓದಿ : ಸಿಗ್ನಲ್ ಮ್ಯಾನ್ 1971 ತೆರೆಯ ಬೆನ್ನಲೇ  ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಆಯ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News