Viral Video : ಹಿಜಾಬ್‌ ವಿರೋಧಿಸಿ ಕ್ಯಾಮೆರಾದೆದುರೇ ಬೆತ್ತಲಾದ ಖ್ಯಾತ ನಟಿ!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್‌ ಸಿರೀಸ್‌ Sacred Games ನಲ್ಲಿನ ಪಾತ್ರಕ್ಕಾಗಿ ಪ್ರಶಂಸೆ ಪಡೆದಿರುವ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ, ಹಿಜಾಬ್‌ ವಿರೋಧಿಸಿ ಕ್ಯಾಮೆರಾ ಮುಂದೆಯೇ ಬಟ್ಟೆ ಬಿಚ್ಚಿ ಅರೆ ಬೆತ್ತಲಾಗಿದ್ದಾರೆ. 

Written by - Chetana Devarmani | Last Updated : Oct 12, 2022, 05:52 PM IST
  • ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್‌ ಸಿರೀಸ್‌ Sacred Games ನಟಿ
  • ಹಿಜಾಬ್‌ ವಿರೋಧಿಸಿ ಕ್ಯಾಮೆರಾದೆದುರೇ ಬೆತ್ತಲಾದ ಎಲ್ನಾಜ್ ನೊರೌಜಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಹಿಜಾಬ್‌ ವಿರೋಧಿಸಿ ಕ್ಯಾಮೆರಾದೆದುರೇ ಬೆತ್ತಲಾದ ಖ್ಯಾತ ನಟಿ! title=
ಎಲ್ನಾಜ್ ನೊರೌಜಿ

Viral Video : ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್‌ ಸಿರೀಸ್‌ Sacred Games ನಲ್ಲಿನ ಪಾತ್ರಕ್ಕಾಗಿ ಪ್ರಶಂಸೆ ಪಡೆದಿರುವ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ, ಹಿಜಾಬ್‌ ವಿರೋಧಿಸಿ ಕ್ಯಾಮೆರಾ ಮುಂದೆಯೇ ಬಟ್ಟೆ ಬಿಚ್ಚಿ ಅರೆ ಬೆತ್ತಲಾಗಿದ್ದಾರೆ. ಇರಾನ್‌ನಲ್ಲಿ 'ನೈತಿಕ ಪೋಲೀಸ್' ವಿರುದ್ಧ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ತಮಗೆ ಬೇಕಾದ ಬಟ್ಟೆ ಧರಿಸುವ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಕೈ ಜೋಡಿಸಿರುವ ನಟಿ ಎಲ್ನಾಜ್ ಕ್ಯಾಮೆರಾ ಮುಂದೆಯೇ ಬಟ್ಟೆ ಬಿಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. 

ಇದನ್ನೂ ಓದಿ : Viral Video : ಮಹಿಳೆಯ ಜೊತೆ ಮಾತನಾಡುವ ಮೊಸಳೆ.! ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

ಎಲ್ನಾಜ್ ನೊರೌಜಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಅವರು ಹಲವಾರು ಪದರಗಳ ಬಟ್ಟೆಗಳನ್ನು ತೆಗೆದು ಪ್ರತಿಭಟಿಸುತ್ತಾರೆ. ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ, ಮಹಿಳೆಯರು ಏನು ಬೇಕಾದರೂ ಧರಿಸಬಹುದು. ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಮ್ಮ ಸಂದೇಶ ನೀಡಿದ್ದಾರೆ. ಈ ವಿಡಿಯೋಗೆ ಅವರು, "ಪ್ರಪಂಚದ ಪ್ರತಿಯೊಬ್ಬ ಮಹಿಳೆಗೆ ತನಗೆ ಇಷ್ಟವಾದಂತೆ ಉಡುಗೆ ತೊಡುವ ಹಕ್ಕಿದೆ. ಯಾವುದೇ ಪುರುಷ ಅಥವಾ ಇತರ ಯಾವುದೇ ಮಹಿಳೆ ಅವಳನ್ನು ನಿರ್ಣಯಿಸಲು ಅಥವಾ ಅವಳನ್ನು ಕೇಳಲು ಹಕ್ಕನ್ನು ಹೊಂದಿಲ್ಲ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

"ಪ್ರತಿಯೊಬ್ಬರಿಗೂ ವಿಭಿನ್ನ ದೃಷ್ಟಿಕೋನಗಳಿವೆ. ಅವರನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರುವುದು. ಪ್ರತಿಯೊಬ್ಬ ಮಹಿಳೆ ತಾನು ತೊಡುವ ಬಟ್ಟೆಯನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರಬೇಕು. ನಾನು ನಗ್ನತೆಯನ್ನು ಪ್ರಚಾರ ಮಾಡುತ್ತಿಲ್ಲ, ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ : Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News