Fighter: ಮೊದಲ ದಿನವೇ 'ಫೈಟರ್'ಗೆ ಉತ್ತಮ ಪ್ರತಿಕ್ರಿಯೆ: ಬಾಕ್ಸ್‌ ಆಫೀಸ್‌ ಕಲೆಕ್ಷನೆಷ್ಟು ಗೊತ್ತೇ?

Fighter Collection: ಇದೇ ವರ್ಷ ಗಣರಾಜ್ಯೋತ್ಸವ ವಿಶೇಷದ ಸಂದರ್ಭದಲ್ಲಿ ತೆರೆಕಂಡಂತ ಫೈಟರ್‌ ಚಿತ್ರ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಗಾದ್ರೆ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಎಷ್ಟು ಮಾಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Jan 26, 2024, 11:40 AM IST
  • ಈ ವಾರ ಸಾಲು ಸಾಲು ರಜೆಗಳಿರುವ ಕಾರಣ, ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡುತ್ತದೆ ಎಂಬ ನಿರೀಕ್ಷೆಯಿದ್ದು, ಅದರಂತೆ ಮೊದಲ ದಿನವೇ 'ಫೈಟರ್' ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.
  • ಚೆನ್ನೈನಲ್ಲಿ ಶೇಕಡಾ 59 ರಷ್ಟು ಅತ್ಯಧಿಕ ಆಕ್ಯುಪೆನ್ಸಿಯನ್ನು ದಾಖಲಿಸಿದ್ದು, ಇನ್ನೂ ಹೈದರಾಬಾದ್, ಮುಂಬೈ, ದೆಹಲಿ ಎನ್‌ಸಿಆರ್ ಮತ್ತು ಜೈಪುರದಂತಹ ನಗರಗಳು ನಂತರದ ಸ್ಥಾನದಲ್ಲಿವೆ.
  • ಅದೇ ವರ್ಷದಲ್ಲಿ, ನಟ ಹೃತಿಕ್ ರೋಷನ್ ನಟಿಸಿರುವ 'ಸೂಪರ್ 30' ಮೊದಲ ದಿನ 11 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಬಳಿಕ ವಿಶ್ವಾದ್ಯಂತ 210 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.
Fighter: ಮೊದಲ ದಿನವೇ 'ಫೈಟರ್'ಗೆ ಉತ್ತಮ ಪ್ರತಿಕ್ರಿಯೆ: ಬಾಕ್ಸ್‌ ಆಫೀಸ್‌ ಕಲೆಕ್ಷನೆಷ್ಟು ಗೊತ್ತೇ? title=

Fighter Day 1 Box Office Collection: ಗಣರಾಜ್ಯೋತ್ಸವದ ಸಂಭ್ರಮದಂದು, ಉಡುಗರೆಯಾಗಿ  ಬಾಲಿವುಡ್‌ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಫೈಟರ್' ಸಿನಿಮಾ ನಿನ್ನೆ ಜನವರಿ 25 ರಂದು ತೆರೆಗೆ ಅಪ್ಪಳಿಸಿದೆ. ಈ ವಾರ ಸಾಲು ಸಾಲು ರಜೆಗಳಿರುವ ಕಾರಣ, ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡುತ್ತದೆ ಎಂಬ ನಿರೀಕ್ಷೆಯಿದ್ದು, ಅದರಂತೆ ಮೊದಲ ದಿನವೇ 'ಫೈಟರ್' ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. 

ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಫೈಟರ್' ರಿಲೀಸ್ ಆದ ಮೊದಲ ದಿನದಲ್ಲೇ 22 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟಾರೆಯಾಗಿ 21.17 ಪ್ರತಿಶತದಷ್ಟು ಹಿಂದಿ ಆಕ್ಯುಪೆನ್ಸನ್ನು ಹೊಂದಿದೆ. ಚೆನ್ನೈನಲ್ಲಿ ಶೇಕಡಾ 59 ರಷ್ಟು ಅತ್ಯಧಿಕ ಆಕ್ಯುಪೆನ್ಸಿಯನ್ನು ದಾಖಲಿಸಿದ್ದು, ಇನ್ನೂ ಹೈದರಾಬಾದ್, ಮುಂಬೈ, ದೆಹಲಿ ಎನ್‌ಸಿಆರ್ ಮತ್ತು ಜೈಪುರದಂತಹ ನಗರಗಳು ನಂತರದ ಸ್ಥಾನದಲ್ಲಿವೆ. ನಟ ಹೃತಿಕ್ ರೋಷನ್ ಕೊನೆಯ ಚಿತ್ರ 'ವಿಕ್ರಮ್ ವೇದಾ'ಕ್ಕಿಂತ ಫೈಟರ್ ತನ್ನ ಆರಂಭಿಕ ದಿನದಂದು ಹೆಚ್ಚು ಕಲೆಕ್ಷನ್ ಮಾಡಿದೆ. 

ಇದನ್ನೂ ಓದಿ: Vijay Raghavendra: ಪೋಲೀಸ್‌ ಪಾತ್ರದ ಮೇಲಿನ ಒಲವನ್ನು ಮೆಲುಕು ಹಾಕಿದ ಚಿನ್ನಾರಿ ಮುತ್ತಾ!

ಫೈಟರ್‌ ಸಿನಿಮಾ 2019ರ ಬ್ಲಾಕ್‌ಬಸ್ಟರ್  'ವಾರ್'‌ ಚಿತ್ರದ ಮೊದಲ ದಿನದ ಗಲ್ಲಾಪೆಟ್ಟಿಗೆಯ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಆದರೆ ವೈಆರ್‌ಎಫ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿದ್ದ ಮತ್ತು ಸಿದ್ಧಾರ್ಥ್ ಆನಂದ್‌ನ ಆಕ್ಷನ್ ಸಿನಿಮಾ ತನ್ನ ಆರಂಭಿಕ ದಿನದಲ್ಲಿ 53.35 ಕೋಟಿ ರೂಪಾಯಿ ಗಳಿಸಿತ್ತು. ಅದೇ ವರ್ಷದಲ್ಲಿ, ನಟ ಹೃತಿಕ್ ರೋಷನ್  ನಟಿಸಿರುವ 'ಸೂಪರ್ 30' ಮೊದಲ ದಿನ 11 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಬಳಿಕ ವಿಶ್ವಾದ್ಯಂತ 210 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. 

ಹೃತಿಕ್ ರೋಷನ್ ವೃತ್ತಿಯಲ್ಲಿ ಫೈಟರ್  ಸಿನಿಮಾ ಐದನೇ ಅತಿ ಹೆಚ್ಚು ಓಪನಿಂಗ್ ಪಡೆದ ಚಿತ್ರವಾಗಿ ದಾಖಲೆ ಬರೆದಿದೆ. ಫಸ್ಟ್‌ ಡೇ ಶೋ ಕಲೆಕ್ಷನ್‌ನಲ್ಲಿ ವಾರ್ 53.35 ಕೋಟಿ, ಬ್ಯಾಂಗ್ ಬ್ಯಾಂಗ್ 27 ಕೋಟಿ ರೂ., ಕ್ರಿಶ್ 3 ರೂ. 25 ಕೋಟಿ ಮತ್ತು ಅಗ್ನಿಪಥ್ 22.8 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗ ಫೈಟರ್ 22 ಕೋಟಿ ಗಳಿಸಿ ಐದನೇ ಸ್ಥಾನದಲ್ಲಿದೆ. ಫೈಟರ್ ಈಗಾಗಲೇ ಎರಡನೇ ದಿನದ ಅಡ್ವಾನ್ಸ್‌ ಬುಕಿಂಗ್‌ನಲ್ಲ್ಲಿ 13.2 ಕೋಟಿ ಮೊತ್ತದ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಆರಂಭಿಕ ದಿನದಲ್ಲಿ ಫೈಟರ್ 2.79 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಒಟ್ಟು 8.4 ಕೋಟಿ ರೂಪಾಯಿ ಟಿಕೆಟ್ ಮಾರಾಟವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News