Thalaivar 170 : ತಲೈವಾ ʼರಜಿನಿ 170ನೇ ಸಿನಿಮಾʼ ಅನೌನ್ಸ್‌.. ʼನೈಜ ಕಥೆʼ ಆಧಾರಿತ ಚಿತ್ರದಲ್ಲಿ ಸೂಪರ್‌ಸ್ಟಾರ್‌..!

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ರಜನಿಕಾಂತ್ ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿರುವಾಗಲೇ ತಲೈವಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ರಜನಿಕಾಂತ್ ಅವರ ಮುಂದಿನ ಚಿತ್ರ 'ತಲೈವರ್ 170' ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ. 

Written by - Krishna N K | Last Updated : Mar 2, 2023, 02:58 PM IST
  • ನಟ ರಜನಿಕಾಂತ್ 'ಜೈಲರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
  • ಇದೀಗ ತಲೈವಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ.
  • 'ತಲೈವರ್ 170' ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ.
Thalaivar 170 : ತಲೈವಾ ʼರಜಿನಿ 170ನೇ ಸಿನಿಮಾʼ ಅನೌನ್ಸ್‌.. ʼನೈಜ ಕಥೆʼ ಆಧಾರಿತ ಚಿತ್ರದಲ್ಲಿ ಸೂಪರ್‌ಸ್ಟಾರ್‌..! title=

Rajinikanth 170 film : ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ರಜನಿಕಾಂತ್ ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿರುವಾಗಲೇ ತಲೈವಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ರಜನಿಕಾಂತ್ ಅವರ ಮುಂದಿನ ಚಿತ್ರ 'ತಲೈವರ್ 170' ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ. 

ರಜಿನಿಕಾಂತ್‌ ಅವರು ತಮ್ಮ ಪ್ಯಾನ್ಸ್‌ಗಳಿಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಾರೆ. 'ಜೈಲರ್' ನಂತರ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅಭಿನಯದ 'ಲಾಲ್ ಸಲಾಂ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಎಲ್ಲಿರಿಗೂ ತಿಳಿದ ವಿಚಾರ. ಇದೀಗ ಸೂಪರ್‌ಸ್ಟಾರ್ ಮುಂದಿನ ಚಿತ್ರದ ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಬಿಡುಗಡೆಯಾಗಿದೆ. ರಜನಿಕಾಂತ್ ಅವರ ಮುಂದಿನ ಚಿತ್ರ 'ತಲೈವರ್ 170' ಅನೌನ್ಸ್‌ ಆಗಿದ್ದು, 'ಜೈ ಭೀಮ್' ಚಿತ್ರದ ಮೂಲಕ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದ ಟಿ.ಎಸ್.ಜ್ಞಾನವೇಲ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ಇದನ್ನೂ ಓದಿ: ಆಸ್ಕರ್‌ ಅಂಗಳದಲ್ಲಿ ʼಸ್ಲಂ ಹುಡುಗʼನ ʼನಾಟು ನಾಟುʼ ಪರ್ಫಾರ್ಮೆನ್ಸ್..! ಸಾಧನೆ ಅಂದ್ರೆ ಇದೇನಾ..?

'ಜೈ ಭೀಮ್' ಚಿತ್ರದಂತೆ, 'ತಲೈವಾರ್ 170' ನೈಜ ಕಥೆಯನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. 'ತಲೈವರ್ 170' ಅನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಲೈಕಾ ಗ್ರೂಪ್‌ನ ಅಧ್ಯಕ್ಷ ಶ್ರೀ ಸುಭಾಸ್ಕರನ್ ಅವರ ಜನ್ಮದಿನದಂದು ಸೂಪರ್‌ಸ್ಟಾರ್ ಶ್ರೀ ರಜನಿಕಾಂತ್ ಅವರ 'ತಲೈವರ್ 170' ಘೋಷಣೆ ಮಾಡಲಾಗಿದೆ. ಈ ಕುರಿತು ಪೋಸ್ಟರ್‌ ಹಂಚಿಕೊಂಡಿರುವ ಲೈಕಾ ಪ್ರೊಡಕ್ಷನ್ಸ್‌, ಚಿತ್ರದ ಕುರಿತು ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News