ಮೊದಲಿಗೆ 500 ರೂ ಸಂಭಾವನೆ.. 233 ಚಿತ್ರಗಳಲ್ಲಿ ನಟನೆ.. ಸದ್ಯ 150 ಕೋಟಿ ಗಳಿಸುತ್ತಿರುವ ಸ್ಟಾರ್‌ ನಟ ಈತ!

Global Star: ಮೊದಲ ಚಿತ್ರದಲ್ಲಿ 500 ರೂ ಸಂಭಾವನೆ ಪಡೆದಿದ್ದ ಈ ಸ್ಟಾರ್‌ ನಟ ಸದ್ಯ ಒಂದು ಸಿನಿಮಾಗೆ 150 ಕೋಟಿ ಗಳಿಸುತ್ತಿದ್ದಾರೆ..  

Written by - Savita M B | Last Updated : Feb 12, 2024, 08:41 AM IST
  • ಕಳೆದ 64 ವರ್ಷಗಳಿಂದ ತಮಿಳು ಸಿನಿಮಾ ಲೋಕದಲ್ಲಿ ಸಂಚರಿಸುತ್ತಿರುವ ಅಪ್ರತಿಮ ಶ್ರೇಷ್ಠ ನಟ
  • ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಎಂದರೆ ಅತಿಶಯೋಕ್ತಿಯಲ್ಲ.
  • ಸುಮಾರು 20 ವರ್ಷಗಳಲ್ಲಿ ದೊಡ್ಡ ನಟನಾಗಿ ಹೊರಹೊಮ್ಮಿದ ಕಮಲ್ ಹಾಸನ್
ಮೊದಲಿಗೆ 500 ರೂ ಸಂಭಾವನೆ.. 233 ಚಿತ್ರಗಳಲ್ಲಿ ನಟನೆ.. ಸದ್ಯ 150 ಕೋಟಿ ಗಳಿಸುತ್ತಿರುವ ಸ್ಟಾರ್‌ ನಟ ಈತ! title=

Global Star Kamal Hassan Life Story: ಕಳೆದ 64 ವರ್ಷಗಳಿಂದ ತಮಿಳು ಸಿನಿಮಾ ಲೋಕದಲ್ಲಿ ಸಂಚರಿಸುತ್ತಿರುವ ಅಪ್ರತಿಮ ಶ್ರೇಷ್ಠ ನಟ ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಎಂದರೆ ಅತಿಶಯೋಕ್ತಿಯಲ್ಲ.

ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್ ಅವರು 1960 ರಲ್ಲಿ ಭೀಮಸಿಂಗ್ ನಿರ್ದೇಶನದ ಕಳತ್ತೂರು ಕಣ್ಣಮ್ಮ ಚಿತ್ರದಲ್ಲಿ ಬಾಲತಾರೆಯಾಗಿ ಪಾದಾರ್ಪಣೆ ಮಾಡಿದ ನಟ. ಚಿಕ್ಕ ಹುಡುಗನ ಪಾತ್ರ ಮಾಡಿದ ಯುವ ನಟನಿಗೆ ಆಗ 500 ರೂಪಾಯಿ ಸಂಭಾವನೆ ನೀಡಿತ್ತು... ಆ ಚಿತ್ರದ ನಂತರ ಹುಡುಗ ಅದೇ ಸಂಭಾವನೆಗೆ ಹಲವು ಚಿತ್ರಗಳಲ್ಲಿ ನಟಿಸತೊಡಗಿದ.

ಇದನ್ನೂ ಓದಿ-Sapthami Gowda: ವೈಟ್‌ ಫ್ರಾಕ್‌ ತೊಟ್ಟು ಬೊಂಬೆಯಂತೆ ಮಿಂಚಿದ ಕಾಂತಾರ ಬೆಡಗಿ!

ಸುಮಾರು 20 ವರ್ಷಗಳಲ್ಲಿ ದೊಡ್ಡ ನಟನಾಗಿ ಹೊರಹೊಮ್ಮಿದ ಕಮಲ್ ಹಾಸನ್ 1980 ರಲ್ಲಿ ಬಿಡುಗಡೆಯಾದ ಗುರು ಚಿತ್ರದ ಮೂಲಕ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಟನೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ, ಸಂಗೀತ, ನೃತ್ಯ, ವಿತರಣೆ ಮತ್ತು ಸಾಹಸ ಹೀಗೆ ಚಿತ್ರರಂಗದಲ್ಲಿ ಅವರು ಕಾಲಿಡದ ಕ್ಷೇತ್ರವಿಲ್ಲ. ಅದೂ ಅಲ್ಲದೆ ಹಲವು ಭಾರತೀಯ ಭಾಷೆಗಳಲ್ಲಿ ನಟಿಸಿರುವ ಮಹಾನ್ ನಟ ಕಮಲ್‌ ಹಾಸನ್...‌ 

ಕಮರ್ಷಿಯಲ್ ಚಿತ್ರಗಳನ್ನು ಇಷ್ಟಪಡದ ಕಮಲ್ ಹಾಸನ್ ಅವರು ನಟಿಸಲು ಪ್ರಾರಂಭಿಸಿ 64 ವರ್ಷಗಳಾಗಿವೆ.. ಸದ್ಯ ಅವರ 234ನೇ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ವೇಳೆ ಅವರ ಮುಂದಿನ ಚಿತ್ರ ಇಂಡಿಯನ್ 2 ತೆರೆಗೆ ಬರಲಿದ್ದು.. ಈ ಚಿತ್ರಕ್ಕಾಗಿ ಅವರು ಸುಮಾರು 150 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 500 ರೂಪಾಯಿಯಿಂದ ಆರಂಭವಾದ ಅವರ ಕಲಾ ಪಯಣ ಈಗ 150 ಕೋಟಿಗೆ ತಲುಪಿದೆ.. 

ಇದನ್ನೂ ಓದಿ-Madhuri Dixit : ಪರ್ಪಲ್ ಬಣ್ಣದಲ್ಲಿ ಶೈನಿಂಗ್ ಫೋಟೋಸ್ ಇಲ್ಲಿವೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News