ʼಕಾಲೇಜ್‌ನಲ್ಲಿ ʼತ್ರಿಬಲ್‌ ರೈಡಿಂಗ್‌ʼ ಮಾಡೋಕೆ ಒಂದ್‌ ಹುಡುಗಿನೂ ಇದ್ದಿಲ್ಲ.. ಇವಾಗ..!

ಗೋಲ್ಡನ್ ಸ್ಟಾರ್ ಗಣೇಶ್ ನಿಜಕ್ಕೂ ಅಪ್ಪಟ ಗೋಲ್ಡ್. ದೊಡ್ಡ ಸ್ಟಾರ್ ಆಗಿದ್ರೂ ಕೊಂಚವೂ ಅಹಂ ಅವರಲ್ಲಿ ಕಾಣಿಸೋಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ನಗಿಸುತ್ತಾ ಖುಷಿಖುಷಿಯಾಗಿ ಇರುತ್ತಾರೆ. ಅವರು ಸೈಲೆಂಟ್ ಇದ್ರೆ ನೋಡೋದೇ ಕಷ್ಟ ಬಿಡಿ. ಸದ್ಯ ಗಣಿ ನಟನೆಯ ಗಾಳಿಪಟ 2 ಸಕ್ಸಸ್ ಬಳಿಕ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Written by - YASHODHA POOJARI | Edited by - Krishna N K | Last Updated : Oct 18, 2022, 06:39 PM IST
  • ಗಾಳಿಪಟ 2 ಸಕ್ಸಸ್ ಬಳಿಕ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಗಣೇಶ್‌ ಬ್ಯುಸಿ
  • ಮೂವರು ಸುಂದರಿಯರ ಜೊತೆ "ತ್ರಿಬಲ್ ರೈಡಿಂಗ್" ಹೋಗೋಕೆ ಗೋಲ್ಡನ್‌ ಸ್ಟಾರ್‌ ರೆಡಿ
  • ಜೀ ಕನ್ನಡ ನ್ಯೂಸ್‌ಗೆ ಕಾಲೇಜ್‌ ದಿನಗಳ ಸಿಂಗಲ್‌ ಲೈಪ್‌ ಬಗ್ಗೆ ಹೇಳಿಕೊಂಡ ಗಣಿ
ʼಕಾಲೇಜ್‌ನಲ್ಲಿ ʼತ್ರಿಬಲ್‌ ರೈಡಿಂಗ್‌ʼ ಮಾಡೋಕೆ ಒಂದ್‌ ಹುಡುಗಿನೂ ಇದ್ದಿಲ್ಲ.. ಇವಾಗ..! title=

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ನಿಜಕ್ಕೂ ಅಪ್ಪಟ ಗೋಲ್ಡ್. ದೊಡ್ಡ ಸ್ಟಾರ್ ಆಗಿದ್ರೂ ಕೊಂಚವೂ ಅಹಂ ಅವರಲ್ಲಿ ಕಾಣಿಸೋಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ನಗಿಸುತ್ತಾ ಖುಷಿಖುಷಿಯಾಗಿ ಇರುತ್ತಾರೆ. ಅವರು ಸೈಲೆಂಟ್ ಇದ್ರೆ ನೋಡೋದೇ ಕಷ್ಟ ಬಿಡಿ. ಸದ್ಯ ಗಣಿ ನಟನೆಯ ಗಾಳಿಪಟ 2 ಸಕ್ಸಸ್ ಬಳಿಕ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದೀಗ ಮೂವರು ಸುಂದರಿಯರ ಜೊತೆ "ತ್ರಿಬಲ್ ರೈಡಿಂಗ್" ಹೋಗಲು ಸಖತ್ ಆಗಿ ರೆಡಿಯಾಗಿದ್ದಾರೆ. ನಿಜಾನಾ ಅಂತ ಕೇಳ್ಬೇಡಿ.. ಇದು ಗಣಿ ನಟನೆಯ ಸಿನಿಮಾ ಟೈಟಲ್. ಈಗಾಗಲೇ ತ್ರಿಬಲ್ ರೈಡಿಂಗ್ ಸಿನಿಮಾದ ಟಾಕ್ ಭರ್ಜರಿಯಾಗಿ  ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುತ್ತೆ. ಅಭಿಮಾನಿಗಳು ಕೂಡ ಅದನ್ನೇ ವೇಟ್ ಮಾಡ್ತಾ ಇದ್ದಾರೆ.

ಇದನ್ನೂ ಓದಿ: World Top 10 Beauties : ಇಲ್ಲಿದ್ದಾರೆ ನೋಡಿ ವಿಶ್ವದ ಟಾಪ್‌ 10 ಸುಂದರಿಯರು

ತ್ರಿಬಲ್ ರೈಡಿಂಗ್ ಸಿನಿಮಾ ಬಗ್ಗೆ ಜೀ ಕನ್ನಡ ನ್ಯೂಸ್ ಗಣಿ ಯನ್ನ ಮಾತಾಡಿಸಿದಾಗ ಸರ್ ನೀವು ಯಾವಾಗ ತ್ರಿಬಲ್ ರೈಡಿಂಗ್ ಹೋಗಿದ್ರಿ ಅನ್ನೋ ನಮ್ಮ ಪ್ರಶ್ನೆಗೆ ಕಾಲೇಜ್ ಡೇಸ್ ನಲ್ಲಿ ತ್ರಿಬಲ್ ಅಲ್ಲ ಬೈಕ್ ತುಂಬಾ ಕೂತ್ಕೊಂಡ್ ಹೋಗ್ತಾ ಇದ್ವಿ. ಆದ್ರೆ ಒಂದಿನ ಸಿಕ್ಕಾಕೊಂಡು ದಂಡ ಕಟ್ಟಿದ್ದೀನಿ ಅಂತ ನಗುತ್ತಲೇ ಹೇಳುತ್ತಾರೆ ಗಣಿ. ಗರ್ಲ್ ಫ್ರೆಂಡ್ಸ್ ಜೊತೆ ರೈಡ್ ಹೋಗಿದ್ದೀರಾ ಸರ್ ಅಂದ್ರೆ ಆಗ ನಮ್ಮನ್ನ ಯಾರೂ ಮೂಸಿ ನೋಡ್ತಾ ಇರಲಿಲ್ಲ ಅನ್ನೋದನ್ನ ಫನ್ ಆಗಿ ಹೇಳಿ ಮುಗಿಸಿದ್ರು ಗಣಿ. ಸೋ ನವೆಂಬರ್ ತಿಂಗಳಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗೋ ಸೂಚನೆ ಸಿಕ್ಕಿದೆ.ವೇಟ್ ಮಾಡಿ ಸಿನಿಮಾ ನೋಡೋ ಮಜಾ ಬೇರೇನೇ ಬಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News