ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್..‌ ಶೀಘ್ರದಲ್ಲೇ ಮಾರ್ಟಿನ್‌ ರಿಲೀಸ್‌ ಡೇಟ್‌ ಅನೌನ್ಸ್!‌

Martin: ಧ್ರುವ ಸರ್ಜಾ ವಿಐಪಿಗಳಿಗೆ  ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಆ ಸಮಾಚಾರ ಏನು ಅಂತ ಗೊತ್ತಾದ್ರೆ ಪೊಗರು ಪೋರನ‌ ಫಾಲೋವರ್ಸ್ ಫುಲ್ ಖುಷ್ ಆಗ್ತಾರೆ.  

Written by - YASHODHA POOJARI | Last Updated : Feb 12, 2024, 03:29 PM IST
  • ಪೊಗರು ನಂತರ ‌ಧ್ರುವ ಸರ್ಜಾ ಅಂಗಳದಲ್ಲಿ ಅರಳ್ತಿರೋ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್.
  • ಇನ್ನೇನು ಈ‌ಸಿನಿಮಾ ಸೆಟ್ಟೇರಿ ಎರಡು ವರ್ಷಗಳಾಗ್ತಾ ಇದೆ
  • ಆದ್ರೂ ಇ‌ನ್ನು ಚಿತ್ರತಂಡ ಮಾರ್ಟಿನ್ ನಡೆ ನುಡಿ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ‌...
ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್..‌ ಶೀಘ್ರದಲ್ಲೇ ಮಾರ್ಟಿನ್‌ ರಿಲೀಸ್‌ ಡೇಟ್‌ ಅನೌನ್ಸ್!‌  title=

Dhruva Sarja: ಪೊಗರು ನಂತರ ‌ಧ್ರುವ ಸರ್ಜಾ ಅಂಗಳದಲ್ಲಿ ಅರಳ್ತಿರೋ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್... ಇನ್ನೇನು ಈ‌ಸಿನಿಮಾ ಸೆಟ್ಟೇರಿ ಎರಡು ವರ್ಷಗಳಾಗ್ತಾ ಇದೆ. ಆದ್ರೂ ಇ‌ನ್ನು ಚಿತ್ರತಂಡ ಮಾರ್ಟಿನ್ ನಡೆ ನುಡಿ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ‌... ಈ ಗ್ಯಾಪ್ ನಲ್ಲಿ ಈಗ ಮಾರ್ಟಿನ್ ಅಂಗಳದಿಂದ ಧ್ರುವ ಸರ್ಜಾ ವಿಐಪಿಗಳಿಗೆ  ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಆ ಸಮಾಚಾರ ಏನು ಅಂತ ಗೊತ್ತಾದ್ರೆ ಪೊಗರು ಪೋರನ‌ ಫಾಲೋವರ್ಸ್ ಫುಲ್ ಖುಷ್ ಆಗ್ತಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಪ್ಯಾನ್ ಇಂಡಿಯಾ ಮಾರ್ಟಿನ್ ಆಗಿ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ನಿದ್ದೆ ಬಿಟ್ಟು ಅಣ್ಣಮ್ಮನಿಗೆ ಹಣ್ಣು ಕಾಯಿ ಹರಕೆ ಕಟ್ಕೊಂಡ್ ಕಾಯ್ತ ಕೂಂತಾವ್ರೆ..ಆದ್ರೆ ಅದ್ಯಾಕೋ ಗೊತ್ತಿಲ್ಲ ಇನ್ನು ಮಾರ್ಟಿನ್ ಆಗಮನದ ಸುಳಿವು ಮಾತ್ರ ಕೊಟ್ಟಿಲ್ಲ ಮಾರ್ಟಿನ್ ಸೃಷ್ಠಿಕರ್ತರು..

ಇದನ್ನೂ ಓದಿ-ಪ್ರಿನ್ಸ್ ಮಹೇಶ್ ಬಾಬುಗೆ ಜೋಡಿಯಾಗಲಿರುವ ಇಂಡೋನೇಷ್ಯಾ ಬ್ಯೂಟಿ.. ರಾಜಮೌಳಿ ಹೊಸ ಪ್ಲ್ಯಾನ್‌ ವರ್ಕ್‌ ಆಗುತ್ತಾ?

ಎಲ್ಲಾ ಅಂದು ಕೊಂಡತೆ ಆಗಿದ್ರೆ ಕಳೆದ ವರ್ಷವೇ ಮಾರ್ಟಿನ್ ಬೆಳ್ಳಿ ತೆರೆಯನ್ನು ಬೆಳಗಿಸಬೇಕಿತ್ತು.. ಆದರೆ ಚಿತ್ರದ ಶೂಟಿಂಗ್ ತಡವಾದ ಕಾರಣ ಮಾರ್ಟಿನ್ ಥಿಯೇಟರ್ ಆಂಗಳಕ್ಕೆ ಬರಲಿಲ್ಲ. ಈ ಚಿತ್ರವನ್ನು ಅದ್ದೂರಿಯಾಗಿ ಕಟ್ಟಿಕೊಡಲು ನಿರ್ದೇಶಕ ಅರ್ಜುನ್ ಹಗಲು ರಾತ್ರಿ ಕೆಲಸ ಮಾಡ್ತಿದ್ರೆ, ನಿರ್ದೇಶಕರ ನೆಚ್ಚಿನ ನಟನಾಗಿ ಮಾರ್ಟಿನ್ ಗೆ ತಮ್ಮನ್ನ ತಾವು ಅರ್ಪಿಸಿಕೊಂಡಿದ್ದಾರೆ ಧ್ರುವ ಸರ್ಜಾ.. 

ಇಷ್ಟಾದ್ರು ಈ ಸಿನಿಮಾಗೆ ಯಾವಗ ಕುಂಬಳಕಾಯಿ ಹೊಡಿತಾರಪ್ಪ ಅನ್ನೋ ಕುತೂಹಲ ಚಿತ್ರಪ್ರೇಮಿಗಳನ್ನು ಕಾಡ್ತಿತ್ತು.. ಈಗ  ಕೊನೆಗೂ ಮಾರ್ಟಿನ್ ಕೊನೆಹಂತ ತಲುಪಿದ್ದು ಬಾಕಿ ಉಳಿದಿದ್ದ ಒಂದು ಹಾಡನ್ನು ಭರ್ಜರಿಯಾಗಿ ಶೂಟ್ ಮಾಡಲು ಗೋವಾಗೆ ಹಾರಿದ್ದಾರೆ ಮಾರ್ಟಿನ್ ಸಿನಿ ಬಳಗ...

ಹೌದು. ಕೊನೆಗೂ ಮಾರ್ಟಿನ್ ಚಿತ್ರದ ಇಂಟರ್ಡಕ್ಷನ್ ಸಾಂಗ್  ಶೂಟ್ ಮಾಡಲು ಧ್ರುವ ಸರ್ಜಾ ತಮ್ಮ ಮಾರ್ಟಿನ್ ತಂಡದ ಜೊತೆ ನಿನ್ನೆ ಗೋವಾಗೆ ಹಾರಿದ್ದಾರೆ..ಇಂದಿನಿಂದ ಬಾಕಿ ಉಳಿದಿರುವ ಮಾರ್ಟಿನ್ ಚಿತ್ರದ ಹಾಡಿನ ಚಿತ್ರೀಕರಣ ದಲ್ಲಿ ಕೆಡಿ ಧ್ರುವ ಭಾಗಿಯಾಗಿದ್ದಾರೆ... ಕಳೆದ ಎರಡು ತಿಂಗಳಿನಿಂದ ಕೇಡಿ ಅವತಾರದಲ್ಲಿ ಕಂಗೊಳಿಸ್ತಿದ್ದ ಧ್ರುವ.. ಈಗ ಮತ್ತೆ ದೈತ್ಯ ಮಾರ್ಟಿನ್ ಕೆಲಸಕ್ಕೆ ಹಾಜರಾಗಿದ್ದಾರೆ.. 

ಇದನ್ನೂ ಓದಿ-Darshan: ಚಾಲೆಂಜಿಂಗ್‌ ಸ್ಟಾರ್‌ 25 ವರ್ಷದ ಸಿನಿ ಪಯಣಕ್ಕೆ ಶ್ರೀರಂಗಪಟ್ಟಣದಲ್ಲಿ ಅದ್ದೂರಿ ಸಂಭ್ರಮ!

ಇಂದಿನಿಂದ ಫೆಬ್ರವರಿ 23ರ ತನಕ ಹಾಡಿನ ಚಿತ್ರೀಕರಣ ಮಾಡಲಿರುವ ಚಿತ್ರತಂಡ 24 ಕ್ಕೆ ವಾಪಸ್ಸಾಗಿ ಬೆಂಗಳೂರಿನಲ್ಲಿ ಕುಂಬಳಕಾಯಿ ಹೊಡೆಯುವ ಮೂಲಕ ಮಾರ್ಟಿನ್ ಶೂಟಿಂಗ್ ಕೆಲಸಕ್ಕೆ ಇತಿಶ್ರೀ ಹಾಡಲು ಪಕ್ಕಾ ಪ್ಲಾನ್ ಮಾಡ್ಕೊಂಡಿದ್ದಾರೆ...

ಇನ್ನು ಮಾರ್ಟಿನ್ ನಿರ್ದೇಶಕರ ಬಳಗ ಈಗಾಗಲೇ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಿದ್ದು, ಹಾಡಿನ ಚಿತ್ರೀಕರಣ ಮುಗಿಸಿ ಶುಭಗಳಿಗೆ ನೋಡ್ಕೊಂಡ್ ಮಾರ್ಟಿನ್ ರಿಲೀಸ್ ಡೇಟ್ ರಿವೀಲ್ ಮಾಡೊ ತವಕದಲ್ಲಿದ್ದಾರೆ.. ಎಲ್ಲಾ ಅಂದು ಕೊಂಡಂತೆ ಆದ್ರೆ ಏಪ್ರಿಲ್ ಇಲ್ಲ ಮೇ ತಿಂಗಳಿನಲ್ಲಿ ಪಂಚಭಾಷೆಗಳಲ್ಲಿ ಮಾರ್ಟಿನ್ ಚಿತ್ರವನ್ನು ಭರ್ಜರಿ ಪ್ರೋಶನ್ ಮಾಡಿ ಅದ್ದೂರಿಯಾಗಿ ರಿಲೀಸ್ ಮಾಡೊಕೆ‌ ಸಕಲ ಸಿದ್ದತೆ ಮಾಡಿ ಕೊಂಡಿದ್ದಾರೆ ಮಾರ್ಟಿನ್ ಅನ್ನದಾತ ಉದಯ್..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News