ಉದಯ್ ಕೆ ಮೆಹ್ತಾ ನಿರ್ಮಾಣದ ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಬಹು ನಿರೀಕ್ಷಿತ ಈ ಪ್ಯಾನ್ ಇಂಡಿಯಾ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಪೊಗರು ಸಿನಿಮಾ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ತೆರೆಮೇಲೆ ತಮ್ಮ ಪ್ರೀತಿಯ ಬಾಸ್ ನ ನೋಡಬೇಕು ಅಂತ ನಿದ್ದೆಬಿಟ್ಟು ತುದಿಗಾಲಲ್ಲಿ ನಿಂತಿದ್ದಾರೆ ಅಂದ್ರೆ ತಪ್ಪಿಲ್ಲ ನೋಡಿ. ಮಾರ್ಚ್ ತಿಂಗಳ 20ನೇ ತಾರೀಖಿನಂದು ಸಿನಿಮಾ ರಿಲೀಸ್ಗೆ ಸಂಬಂಧಪಟ್ಟ ಮಾಹಿತಿ ಕೊಡ್ತೀವಿ ಅಂತ ಖುದ್ದು ನಿರ್ಮಾಪಕ ಉದಯ್ ಅವ್ರು ಹೇಳಿಕೊಂಡಿದ್ದರು.
Martin Dubbing: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಅತಿ ನಿರೀಕ್ಷಿತ ಮಾರ್ಟಿನ್ ಚಿತ್ರದ ಡಬ್ಬಿಂಗ್ ಕೆಲಸವನ್ನು ಸಂಪೂರ್ಣಗೊಳಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಾಗಾದ್ರೆ ಧ್ರುವ ಎಲ್ಲಾ ಭಾಷೆಗಳಲ್ಲೂ ಧ್ವನಿ ನೀಡಿದ್ದಾರಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Martin Release Date: ಕಳೆದ ಮೂರು ವರ್ಷಗಳಿಂದ ಧ್ರುವ ಅಭಿಮಾನಿಗಳು ಕಾಯುತ್ತಿರುವ ಆ ಗುಡ್ ಟೈಮ್ ಸನಿಹದಲ್ಲಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಆಕ್ಷನ್ ಫ್ರಿನ್ಸ್ ತಮ್ಮ ಫ್ಯಾನ್ಸ್ಗೆ ಸರ್ಪ್ರೈಸ್ವೊಂದನ್ನು ನೀಡಲಿದ್ದಾರೆ..
ಅಪಾಯದಿಂದ ಪರದಾ ಧ್ರುವ ಸರ್ಜಾ ಹಾಗು ಮಾರ್ಟೀನ ಚಿತ್ರ ತಂಡ.. ಚಿತ್ರದ ಸಾಂಗ್ ಶೂಟಗಾಗಿ ದೆಹಲಿ ಇಂದ ಶ್ರೀನಗರ ಗೆ ಇಂಡಿಗೋ ಫ್ಲೈಟ್ ನಲ್ಲಿ ತೇರುಳುತೀದ ಚಿತ್ರ ತಂಡ ಕೂದಲೆಳೆ ಅಂತರದಲ್ಲಿ ದೇವರ ಆಶೀರ್ವಾದ ಹಾಗು ಅಭಿಮಾನಿಗಳ ಹಾರೈಕೆ ಜೀವ ಹಾನಿ ಇಂದ ತಪಿಸಿಕೊಂಡಿದೆ
Dhruva Sarja Next Movie: ಆಕ್ಷನ್ ಫಿನ್ಸ್ ಧ್ರುವ ಸರ್ಜಾ 'KD' ಸಿನಿಮಾ ಶೂಟಿಂಗ್ ಶುರುವಾದ ಬಳಿಕ ಮಾರ್ಟಿನ್ ಸಿನಿಮಾವನ್ನು ಮರೆತೇ ಬಿಟ್ಟಂತಿತ್ತು.. ಕಳೆದ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು.. ಆದರೆ ಇದೀಗ ಈ ಚಿತ್ರದ ಅಪ್ಡೇಟ್ ಹೊರಬಿಳ್ಳುವುದರ ಜೊತೆಗೆ ಧ್ರುವ ಸರ್ಜಾ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ..
ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ "ಮಾರ್ಟಿನ್" ಪ್ಯಾನ್ ಇಂಡಿಯಾ ಚಿತ್ರದ ಆಡಿಯೋ ಹಕ್ಕು ಅಧಿಕ ಮೊತ್ತಕ್ಕೆ (ಒಂಭತ್ತು ಕೋಟಿ ರೂಪಾಯಿ) ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆಯಾದ "ಸರೆಗಮ", " ಮಾರ್ಟಿನ್ " ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.
Arjun Sraja Daughter Marriage : ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸದ್ಯಕ್ಕೆ ಲಿಯೋ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಇನ್ನೊಂದು ಕಡೆ ತಾವು ಕಥೆ ಬರೆದಿರುವ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ರಿಲೀಸ್ ಆಗಬೇಕಿದೆ. ಈ ಸಂಭ್ರಮಗಳ ನಡುವೆ ಅರ್ಜುನ್ ಸರ್ಜಾ ತಮಿಳಿನ ಯುವನಟನ ಜೊತೆ ತಮ್ಮ ಮಗಳ ಮದುವೆ ಮಾಡಲು ಮುಂದಾಗಿದ್ದಾರೆ.
ಇಲ್ಲಿಯವರೆಗೂ 83ಮಿಲಿಯನ್ ವ್ಯೂಸ್ ಪಡೆದುಕೊಂಡಿದ್ದ ‘ಮಾರ್ಟಿನ್’ ಟೀಸರ್ ಇನ್ನೂ ಹೆಚ್ಚು ವ್ಯೂಸ್ ಪಡ್ಕೋಳ್ಳುತ್ತೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದ್ರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್ ಚಿತ್ರದ ಆಫೀಶಿಯಲ್ ಟೀಸರ್ ನೋಡಿದ ಪ್ರತಿಯೊಬ್ಬರೂ ಈ ಸಿನಿಮಾ ಇತಿಹಾಸ ಸೃಷ್ಟಿಸುತ್ತೆ ಅಂತ ಮಾತನಾಡಿಕೊಳ್ಳುತ್ತಿದ್ದರು.
Dhruva stunt for the Martin : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ... ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ..ಸಿನಿಮಾ ಯಾವ್ದೆ ಇರ್ಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ನಂ1..ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರು ಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ.
ಸಾಮಾನ್ಯವಾಗಿ ಚಿತ್ರಗಳ ಪ್ರೀಮಿಯರ್ ಶೋ ನಡೆಯುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ "ಮಾರ್ಟಿನ್" ಚಿತ್ರದ ಟೀಸರ್ ಗೆ ಪ್ರೀಮಿಯರ್ ನಡೆದಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ ಚಿತ್ರಮಂದಿರದಲ್ಲಿ "ಮಾರ್ಟಿನ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಕನ್ನಡ ಸೇರಿದಂತೆ ಬೇರೆ ಯಾವ ಚಿತ್ರರಂಗದಲ್ಲೂ ಈ ರೀತಿ ಟೀಸರ್ ಪ್ರೀಮಿಯರ್ ನಡೆದಿರುವುದು ತಿಳಿದಿಲ್ಲ. ಇದೇ ಮೊದಲು ಎನ್ನಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.