ʼಬಿಂದಾಸ್‌ʼ ಬೆಡಗಿಯ ಮದುವೆ ಸಂಭ್ರಮ : ನಾಳೆ ರಾಜಸ್ಥಾನ ಕೋಟೆಯಲ್ಲಿ ಹಸ್ಸಿಕಾ ಮದುವೆ

ಸ್ಯಾಂಡಲ್‌ವುಡ್‌ ಸೇರಿದಂತೆ ಚಿತ್ರನಟ, ನಟಿಯರ ಸಾಲು ಸಾಲು ಮದುವೆಗಳು ಜರುಗುತ್ತಿವೆ. ಇಂದು ಕನ್ನಡದ ನಟ ವಸಿಷ್ಠ ಸಿಂಹ ಹಾಗೂ ಬಹುಭಾಷಾ ನಟಿ ಹರಿಪ್ರಿಯಾ ಅವರು ವಿವಾಹ ನಿಶ್ಚಿತಾರ್ಥ ನೆರವೇರಿತು. ಅಲ್ಲದೆ, ನಾಳೆ ಕನ್ನಡದ ಬಿಂದಾಸ್‌ ಸಿನಿಮಾ ನಟಿ ಹನ್ಸಿಕಾ ಮೋಟ್ವಾನಿ  ಡಿಸೆಂಬರ್ 4 ರಂದು ರಾಜಸ್ಥಾನದ ಮುಂಡೋಟ್ಟಾ ಕೋಟೆ ಮತ್ತು ಅರಮನೆಯಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಸೋಹೇಲ್ ಖತುರಿಯಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

Written by - Krishna N K | Last Updated : Dec 3, 2022, 06:45 PM IST
  • ನಾಳೆ ಕನ್ನಡದ ಬಿಂದಾಸ್‌ ಸಿನಿಮಾ ನಟಿ ಹನ್ಸಿಕಾ ಮೋಟ್ವಾನಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ

    ಡಿಸೆಂಬರ್ 4 ರಂದು ರಾಜಸ್ಥಾನದ ಮುಂಡೋಟ್ಟಾ ಕೋಟೆಯಲ್ಲಿ ವಿವಾಹ ಜರುಗಲಿದೆ
  • ತಮ್ಮ ದೀರ್ಘಕಾಲದ ಗೆಳೆಯ ಸೋಹೇಲ್ ಖತುರಿಯಾ ಅವರೊಂದಿಗೆ ಹನ್ಸಿಕಾ ಸಪ್ತಪದಿ ತುಳಿಯಲಿದ್ದಾರೆ
ʼಬಿಂದಾಸ್‌ʼ ಬೆಡಗಿಯ ಮದುವೆ ಸಂಭ್ರಮ : ನಾಳೆ ರಾಜಸ್ಥಾನ ಕೋಟೆಯಲ್ಲಿ ಹಸ್ಸಿಕಾ ಮದುವೆ title=

Hansika Motwani wedding : ಸ್ಯಾಂಡಲ್‌ವುಡ್‌ ಸೇರಿದಂತೆ ಚಿತ್ರನಟ, ನಟಿಯರ ಸಾಲು ಸಾಲು ಮದುವೆಗಳು ಜರುಗುತ್ತಿವೆ. ಇಂದು ಕನ್ನಡದ ನಟ ವಸಿಷ್ಠ ಸಿಂಹ ಹಾಗೂ ಬಹುಭಾಷಾ ನಟಿ ಹರಿಪ್ರಿಯಾ ಅವರು ವಿವಾಹ ನಿಶ್ಚಿತಾರ್ಥ ನೆರವೇರಿತು. ಅಲ್ಲದೆ, ನಾಳೆ ಕನ್ನಡದ ಬಿಂದಾಸ್‌ ಸಿನಿಮಾ ನಟಿ ಹನ್ಸಿಕಾ ಮೋಟ್ವಾನಿ  ಡಿಸೆಂಬರ್ 4 ರಂದು ರಾಜಸ್ಥಾನದ ಮುಂಡೋಟ್ಟಾ ಕೋಟೆ ಮತ್ತು ಅರಮನೆಯಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಸೋಹೇಲ್ ಖತುರಿಯಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಈಗಾಗಲೇ ಹನ್ಸಿಕಾ ಮೋಟ್ವಾನಿ ಮದುವೆ ಪೂರ್ವ ಕಾರ್ಯಕ್ರಮಗಳು ಬಹಳ ಅದ್ಧೂರಿಯಾಗಿ ಜರುಗುತ್ತಿವೆ. ಅಭಿಮಾನಿಗಳು ಈ ತಮ್ಮ ನೆಚ್ಚಿನ ನಟಿಯ ಮದುವೆ ನೋಡಲು ಹವಣಿಸುತ್ತಿದ್ದಾರೆ. ಆದ್ರೆ ವಿಡಿಯೋಗಳು ಎಲ್ಲಿಯೂ ಲಭ್ಯವಾಗಿಲ್ಲ. ಜಸ್ಟ್‌ ಸ್ನೀಕ್ ಪೀಕ್ ಅನ್ನು ಪಡೆಯುತ್ತಿದ್ದಾರೆ. ಅದ್ದೂರಿ ಮೆಹೆಂದಿ ಮತ್ತು ಸಂಗೀತ ಸಮಾರಂಭದ ನಂತರ, ವಧು-ವರರು ಸೂಫಿ ಗಾಯನದಲ್ಲಿ ಪಾಲ್ಗೊಂಡು ಎಂಜಾಯ್‌ ಮಾಡಿದ್ದಾರೆ.

ಇದನ್ನೂ ಓದಿ: ʼಲಂಕಾಸುರʼ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬಕ್ಕೆ ಸಾಂಗ್‌ ರಿಲೀಸ್‌

ಸಂಗೀತ ರಾತ್ರಿ ಕಾರ್ಯಕ್ರಮದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ವೈರಲ್‌ ವಿಡಿಯೋದಲ್ಲಿ ಹನ್ಸಿಕಾ ಶರರಾದಲ್ಲಿ ಮಿಂಚಿದ್ದಾರೆ. ಅಲ್ಲದೆ, ಸಂಪ್ರದಾಯ ಆಭರಣ ತೊಟ್ಟು ಮನೆ ಮಗಳಂತೆ ಕಂಗೊಳಿಸುತ್ತಿದ್ದಾಳೆ. ಇಬ್ಬರೂ ಕೈ ಹಿಡಿದುಕೊಂಡು ಹಾಲ್‌ಗೆ ಕಾಲಿಡುತ್ತಿದ್ದಂತೆ ನೆರದಿದ್ದ ಸ್ನೇಹಿತರು ಕುಟುಂಬಸ್ಥರು ಕೂಗುಹಾಕುವ ದೃಶ್ಯ ವಿಡಿಯೋದಲ್ಲಿದೆ. 

ಇದಲ್ಲದೆ, ಮೆಹಂದಿ ದಿನದ ಚಿತ್ರಗಳು ಮತ್ತು ವೀಡಿಯೊ ತುಣುಕುಗಳು ಇಂಟರ್ನೆಟ್‌ನಲ್ಲಿ ಸದ್ದು ಮಾಡಿದ್ದವು. ಇನ್ನು ಅದ್ದೂರಿ ವಿವಾಹ ಮಹೋತ್ಸವದ ನಂತರ, ಸ್ಟಾರ್‌ ದಂಪತಿಗಳು ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ರಿಸೆಪ್ಶನ್ ಆಯೋಜಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹನ್ಸಿಕಾ ಮದುವೆ ಕಾರ್ಯಕ್ರಮದಲ್ಲಿ ಸದ್ಯ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರು ಭಾಗವಹಿಸುತ್ತಿದ್ದಾರೆ. ಇನ್ನು ಹನ್ಸಿಕಾ ಮತ್ತು ಸೊಹೇಲ್ ಅವರ ವಿವಾಹ ಕಾರ್ಯಕ್ರಮದ ವಿಡಿಯೋ ಪ್ರಸಾರದ ಹಕ್ಕುಗಳನ್ನು ಕೆಲವು OTT ವೇದಿಕೆಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News