ಭರ್ಜರಿ ಪ್ರಚಾರದಲ್ಲಿ ಡಾಲಿ : ʼಹೆಡ್‌ ಬುಷ್‌ ʼ ಆಡೋಕೆ ನಟರಾಕ್ಷಸ ತಯಾರಿ..!

ಮೊನ್ನೆ ತಾನೇ ರಾಜ್ ಕಪ್‌ಗಾಗಿ ಸೆಣಸಾಡಿ, ಹೆಡ್ ಬುಷ್ ಆಡೋಕೆ ನಾರ್ವೆಗೆ ಹಾರಿದ್ದ ಡಾನ್ ಡಾಲಿ ಧನಂಜಯ್‌ ಈಗ ಸೈಕಲ್ ಸವಾರಿಯಿಂದ ಗಮನ ಸೆಳೆದಿದ್ದಾರೆ. ಇದೇನಪ್ಪ ರಾತ್ರೋರಾತ್ರಿ ನಾರ್ವೆಯಿಂದ ಡಾಲಿ ಇಂಡಿಯಾಗೆ ಹೇಗ್ ಬಂದ್ರು ಅಂತ ಕನ್ಪೂಸ್ ಆಗಬೇಡಿ. ಯಾಕಂದ್ರೆ ಬೆಂಗಳೂರಿನ ರೋಡ್‌ಗಳಲ್ಲಿ ಸೈಕಲ್ ಸವಾರಿ ಮಾಡಿರೋದು ಡಾಲಿ ಅಲ್ಲ. ಬದಲಿಗೆ ಡಾಲಿ ಅಭಿನಯದ ಹೆಡ್ ಬುಷ್ ಚಿತ್ರದ ಪೋಸ್ಟರ್.

Written by - YASHODHA POOJARI | Edited by - Krishna N K | Last Updated : Oct 2, 2022, 04:37 PM IST
  • ಹೆಡ್ ಬುಷ್ ಆಡೋಕೆ ನಾರ್ವೆಗೆ ಹಾರಿದ್ದ ಡಾನ್ ಡಾಲಿ ಧನಂಜಯ್‌ ಈಗ ಸೈಕಲ್ ಸವಾರಿ
  • ಇದೇನಪ್ಪ ರಾತ್ರೋರಾತ್ರಿ ನಾರ್ವೆಯಿಂದ ಡಾಲಿ ಇಂಡಿಯಾಗೆ ಹೇಗ್ ಬಂದ್ರು ಅಂತ ಕನ್ಪೂಸ್ ಆಗಬೇಡಿ
  • ಸೈಕಲ್ ಸವಾರಿ ಮಾಡಿರೋದು ಡಾಲಿ ಅಲ್ಲ. ಬದಲಿಗೆ ಡಾಲಿ ಅಭಿನಯದ ಹೆಡ್ ಬುಷ್ ಚಿತ್ರದ ಪೋಸ್ಟರ್
ಭರ್ಜರಿ ಪ್ರಚಾರದಲ್ಲಿ ಡಾಲಿ : ʼಹೆಡ್‌ ಬುಷ್‌ ʼ ಆಡೋಕೆ ನಟರಾಕ್ಷಸ ತಯಾರಿ..! title=

ಬೆಂಗಳೂರು : ಮೊನ್ನೆ ತಾನೇ ರಾಜ್ ಕಪ್‌ಗಾಗಿ ಸೆಣಸಾಡಿ, ಹೆಡ್ ಬುಷ್ ಆಡೋಕೆ ನಾರ್ವೆಗೆ ಹಾರಿದ್ದ ಡಾನ್ ಡಾಲಿ ಧನಂಜಯ್‌ ಈಗ ಸೈಕಲ್ ಸವಾರಿಯಿಂದ ಗಮನ ಸೆಳೆದಿದ್ದಾರೆ. ಇದೇನಪ್ಪ ರಾತ್ರೋರಾತ್ರಿ ನಾರ್ವೆಯಿಂದ ಡಾಲಿ ಇಂಡಿಯಾಗೆ ಹೇಗ್ ಬಂದ್ರು ಅಂತ ಕನ್ಪೂಸ್ ಆಗಬೇಡಿ. ಯಾಕಂದ್ರೆ ಬೆಂಗಳೂರಿನ ರೋಡ್‌ಗಳಲ್ಲಿ ಸೈಕಲ್ ಸವಾರಿ ಮಾಡಿರೋದು ಡಾಲಿ ಅಲ್ಲ. ಬದಲಿಗೆ ಡಾಲಿ ಅಭಿನಯದ ಹೆಡ್ ಬುಷ್ ಚಿತ್ರದ ಪೋಸ್ಟರ್. 

ಹೌದು.. ಅಕ್ಟೋಬರ್ 21 ಕ್ಕೆ ಹೆಡ್ ಬುಷ್ ರಿಲೀಸ್ ಆಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಸೈಕಲ್‌ಗೆ ಪೋಸ್ಟರ್ ಕಟ್ಟಿ ಬೆಂಗಳೂರಿನಲ್ಲಿ ಪ್ರಚಾರ ಮಾಡ್ತಿದೆ ಹೆಡ್ ಬುಷ್ ಸಿನಿ ಬಳಗ. ಇನ್ನು ಡಾಲಿ ನಾರ್ವೇ ಮತ್ತು ಓಸ್ಲೋ ದೇಶಗಳಲ್ಲಿ ಬೆಲ್ ಬಾಟಮ್ ತೊಟ್ಟು ಸೇಮ್ ಡಾನ್ ಜಯರಾಜ್ ಅವತಾರದಲ್ಲಿ ಹೆಡ್ ಬುಷ್ ಪ್ರಚಾರ ಮಾಡ್ತಿದ್ರೆ. ಡಾಲಿ ಬಳಗ ಇತ್ತ ಬೆಂಗಳೂರಿನಲ್ಲಿ ಡಾಲಿಗಿಂತ ಜೋರಾಗಿ ಪ್ರಚಾರದ ತೇರನ್ನು ಎಳೆಯುತ್ತಿದ್ಧಾರೆ. ಹೆಡ್ ಬುಷ್ ಪ್ರಚಾರಕ್ಕಾಗಿ 80 ದಶಕದಲ್ಲಿ ಬ್ರಾಂಡ್ ಆಗಿದ್ದ ಅಂಬಾಸಿಡರ್ ಕಾರ್‌ಗಳನ್ನು ಚಿತ್ರದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಫಿಕ್ಸ್ ಮಾಡ್ಕೊಂಡು. ಕಾರುಗಳಿಗೆ ಹೆಡ್ ಬುಷ್ ಪೋಸ್ಟರ್‌ಗಳನ್ನು ಅಂಟಿಸಿ ಇಡೀ ಕರ್ನಾಟಕ ಸುತ್ತೋಕ್ಕೆ ಚಿತ್ರತಂಡ ಚಿತ್ರವಿಚಿತ್ರ ಆಲೋಚನೆಯಲ್ಲಿ ಸಿದ್ದವಾಗಿದೆ.

ಇದನ್ನೂ ಓದಿ: ಎರಡನೇ ಟಿ20 ಪಂದ್ಯ ಗೆದ್ದು ಇತಿಹಾಸ ಸೃಷ್ಟಿಸಲಿದೆ ಟೀಂ ಇಂಡಿಯಾ!

ಇದಲ್ಲದೆ ಡಾಲಿಯ ಹೆಡ್ ಬುಷ್‌ಗೆ ಅಭಿಮಾನಿಗಳಿಂದಲೂ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡೊಕೆ ತಂದು ಹಾಕ್ಕಿದ್ದ ಮರಳಿನ ಮೇಲೂ ಡಾನ್ ಡಾಲಿ ಚಿತ್ರ ಬಿಡಿಸಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಅಲ್ಲದೆ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುಬಂತೆ ಮನವಿ ಮಾಡ್ತಿದ್ದಾರೆ. ಇನ್ನು ಹೆಡ್ ಬುಷ್  ಡಾಲಿ ನಿರ್ಮಾಣದಲ್ಲಿ ಬರ್ತಿರುವ ಎರಡನೇ ಚಿತ್ರವಾಗಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಅನ್ಮೋದು ಸ್ವಲ್ಪ ಜಾಸ್ತಿಯೇ ಇದೆ. ಅಲ್ಲದೆ ಹೆಡ್ ಬುಷ್ ಅಗ್ನಿಶ್ರೀಧರ್ ಅವರ ದಾದಾಗಿರಿಯ ದಿನಗಳ ಆಧಾರಿತ ಸಿನಿಮಾವಾಗಿದ್ದು, 80ರ ದಶಕದ ಬೆಂಗಳೂರಿನ ಅಂಡರ್ ವರ್ಲ್ಡ್ ಕರಾಳ ಮುಖವನ್ನು ಚಿತ್ರದಲ್ಲಿ ಯಾವ ರೀತಿ ಕಟ್ಟಿ ಕೊಟ್ಟಿದ್ದಾರೆ ಅನ್ನೊ ಕ್ಯೂರಿಯಾಸಿಟಿ ಪ್ರೇಕ್ಷಕ ಪ್ರಭುಗಳಲ್ಲಿದೆ.

ಇನ್ನು 20 ದಿನಗಳಲ್ಲಿ ಡಾಲಿ ಜಯರಾಜ್ ಅವತಾರದಲ್ಲಿ ಚಿತ್ರಮಂದಿರಗಳಲ್ಲಿ ಬರಲಿದ್ದು ಈಗಾಗಲೇ ಈ ಚಿತ್ರದ ಹಾಡು ಹಾಗೂ ಪ್ರಮೋಶನ್ ಶೈಲಿ ಹಾಗೂ ಚಿತ್ರದ ಪೋಸ್ಟರ್‌ಗಳು ಪ್ರೇಕ್ಷಕರನ್ನು ಯಶಸ್ವಿಯಾಗಿ ಚಿತ್ರ ಮಂದಿರದ ದಾರಿ ತುಳಿಯುವಂತೆ ಮಾಡುತ್ತಿವೆ. ಅಲ್ಲದೆ ಆದಿನಗಳು ಚಿತ್ರಕ್ಕೆ ಸಿಕ್ಕಿದ್ದ ರೆಸ್ಪಾನ್ಸ್‌ ಡಾಲಿಯ ಹೆಡ್ ಬುಷ್ ಆಟಕ್ಕೂ ಸಿಗುತ್ತಾ.. ಅಂತ ತಿಳ್ಕೋ ಬೇಕಾದ್ರೆ ಅಕ್ಟೋಬರ್ 21 ರವರೆಗೂ ನೀವು ಕಾಯಲೇಬೇಕಿದೆ.

Trending News