ಕೊನೆಗೂ ಶಾರುಖ್ ಅಭಿಮಾನಿಗಳಿಗೆ ಬಂತು ಒಂದು ಗುಡ್ ನ್ಯೂಸ್!

ಶಾರುಕ್ ಅಭಿಮಾನಿಗಳ ದೀರ್ಘಕಾಲದ ನಿರೀಕ್ಷೆಗೆ ಶೀಘ್ರವೇ ಫುಲ್ ಸ್ಟಾಪ್ ಸಿಗಲಿದೆ. ಸದ್ಯ ಪ್ರಕಟಗೊಂಡಿರುವ ಸುದ್ದಿಯ ಪ್ರಕಾರ ಶಾರುಕ್ ಖಾನ್ ಶೀಘ್ರದಲ್ಲಿಯೇ 'ಮಿಸ್ಟರ್ ಇಂಡಿಯಾ -2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಯಾವ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಿರಿ.

Updated: Feb 17, 2020 , 08:11 PM IST
ಕೊನೆಗೂ ಶಾರುಖ್ ಅಭಿಮಾನಿಗಳಿಗೆ ಬಂತು ಒಂದು ಗುಡ್ ನ್ಯೂಸ್!

ನವದೆಹಲಿ: ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಕ್ ಖಾನ್ ಕಳೆದ ಒಂದು ವರ್ಷದಿಂದ ಬಿಟೌನ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ಬಾರಿಗೆ ಅವರನ್ನು 'ಝಿರೋ' ಚಿತ್ರದಲ್ಲಿ ನೋಡಲಾಗಿತ್ತು. ಆದರೆ, ಈ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಶಾರುಕ್ ಖಾನ್ ಶೀಘ್ರದಲ್ಲಿಯೇ ರಣವೀರ್ ಸಿಂಗ್ ಅವರ ಜೊತೆಗೆ 'ಮಿಸ್ಟರ್ ಇಂಡಿಯಾ-2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇಂಗ್ಲೀಷ್ ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಖ್ಯಾತ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಶೀಘ್ರದಲ್ಲಿಯೇ 'ಮಿಸ್ಟರ್ ಇಂಡಿಯಾ' ಚಿತ್ರವನ್ನು ಬೆಳ್ಳಿ ಪರದೆಯ ಮೇಲೆ ಮರುಸೃಷ್ಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ರಿಮೇಕ್ ನಲ್ಲಿ ಶಾರುಕ್ ಖಾನ್ ಹಾಗೂ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅನಿಲ್ ಕಪೂರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಶಾರುಕ್ ಮೊಗ್ಯಾಂಬೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಬಿ-ಟೌನ್ ನಿಂದ ಕೇಳಿಬರಲಾರಂಭಿಸಿವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ರಣವೀರ್ ಸಿಂಗ್ ತಮ್ಮ ಪಾತ್ರದ ಕುರಿತು ಭಾರಿ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದ್ದರೆ, ಶಾರುಕ್ ಅವರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಶಾರುಕ್ ಅವರನ್ನು 'ಮೊಗ್ಯಾಂಬೋ' ಭೂಮಿಕೆಯಲ್ಲಿ ಕಾಣುವುದು ರೋಚಕ ಅನುಭವ ನೀಡಲಿದೆ. 'ಮಿಸ್ಟರ್ ಇಂಡಿಯಾ' ಚಿತ್ರದ ಬಳಿಕ ಖ್ಯಾತ ಹಿರಿಯ ನಟ ಅಮರೀಶ್ ಪುರಿ ಅವರನ್ನು ಅಭಿಮಾನಿಗಳು 'ಮೊಗ್ಯಾಂಬೋ' ಹೆಸರಿನಿಂದ ಗುರುತಿಸಲು ಆರಂಭಿಸಿದ್ದರು. 'ಮೊಗ್ಯಾಂಬೋ ಖುಷ್ ಹುವಾ..' ಈ ಡೈಲಾಗ್ ಮಕ್ಕಳಿಂದ ಹಿಡಿದು ಯುವಕರವರೆಗೆ ಭಾರಿ ಕ್ರೇಜ್ ಹುಟ್ಟುಹಾಕಿತ್ತು. ಆದರೆ, ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದ ನಾಯಕ ನಟಿ ಶ್ರೀದೇವಿಯ ಪಾತ್ರ ಯಾರು ನಿರ್ವಹಿಸಲಿದ್ದಾರೆ ಈ ಕುರಿತು ಯಾವುದೇ ಸುದ್ದಿ ಇದುವರೆಗೆ ಹೊರಬಂದಿಲ್ಲ.

ಬೋನಿ ಕಪೂರ್ ಅವರಿಂದ ನಿರ್ಮಿಸಲ್ಪಟ್ಟ ಹಾಗೂ ಶೇಖರ್ ಕಪೂರ್ ಅವರ ನಿರ್ದೇಶನದ ಅಡಿ ಮೂಡಿಬಂದ 'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ಅನಿಲ್ ಕಪೂರ್, ಶ್ರೀದೇವಿ, ಸತೀಶ್ ಕೌಶಿಕ್, ಅಮರೀಶ್ ಪುರಿ ಹಾಗೂ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿದ್ದರು.

ವೃತ್ತಿಜೀವನದ ಕುರಿತು ಹೇಳುವುದಾದರೆ, ಕಳೆದ ಒಂದು ವರ್ಷದಿಂದ ಶಾರುಕ್ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ತಮ್ಮ ಮಕ್ಕಳ ಜೊತೆಗೆ ಅವರು ಕಾಲ ಕಳೆಯುತ್ತಿದ್ದಾರೆ. ಇನ್ನೊಂದೆಡೆ ರಣವೀರ್ ಸಿಂಗ್ ಕುರಿತು ಹೇಳುವುದಾದರೆ, ಶೀಘ್ರವೇ ಅವರು 1983ರ ಕ್ರಿಕೆಟ್ ವರ್ಲ್ಡ್ ಕಪ್ ಆಧರಿಸಿ ಸಿದ್ಧವಾಗುತ್ತಿರುವ '83' ಚಿತ್ರದಲ್ಲಿ ಕಪಿಲ್ ದೇವ್ ಅವರ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.