/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

ಇತಿಹಾಸವೆಂದು ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ -ಅನುಪಮ್ ಖೇರ್

ಇತಿಹಾಸವೆಂದಿಗೂ ಕೂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ ಎಂದು ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ತಿಳಿಸಿದರು.

Last Updated : Oct 27, 2018, 05:33 PM IST
ಇತಿಹಾಸವೆಂದು ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ -ಅನುಪಮ್ ಖೇರ್ title=
Photo:facebook

ನವದೆಹಲಿ: ಇತಿಹಾಸವೆಂದಿಗೂ ಕೂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ ಎಂದು ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ತಿಳಿಸಿದರು.

ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಶೂಟಿಂಗ್ ಮುಗಿಸಿದ ನಂತರ ಮಾತನಾಡಿದ ಅನುಪಮ್ ಖೇರ್ "ಮೌಲ್ಯಯುಕ್ತ ಅನುಭವಕ್ಕೆ ಧನ್ಯವಾದಗಳು...  ಮನಮೋಹನ್ ಸಿಂಗ್ ಜಿ ನಿಮ್ಮ ಈ ಪಯಣಕ್ಕೆ ಧನ್ಯವಾದಗಳು "ಎಂದು  ತಿಳಿಸಿದರು. ಈ ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರವನ್ನು ನಿರ್ವಹಿಸಿರುವ ಅನುಮಪ್ ಖೇರ್ "ಇದೊಂದು ಅದ್ಬುತ ಕಲಿಕೆಯ ಅನುಭವ ..ಒಂದು ವಿಷಯ ಸ್ಪಷ್ಟಪಡಿಸುವುದಾದರೆ ಇತಿಹಾಸವೆಂದಿಗೂ ಕೂಡ ನಿಮ್ಮನ್ನು ತಪ್ಪಾಗಿ ಭಾವಿಸುವುದಿಲ್ಲ" ಎಂದು ತಿಳಿಸಿದರು.

ಅನುಪಮ್ ಖೇರ್ ತಮ್ಮ ಟ್ವಿಟ್ಟರ್ ನಲ್ಲಿ ಚಿತ್ರದ ಕ್ಲಾಪ್ ಬೋರ್ಡ್ ಹಿಡಿದಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ  ಅವರು ಮನಮೋಹನ್ ಸಿಂಗ್ ಪಾತ್ರದಲ್ಲಿ ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಿರುವ ಸುಜ್ಯಾನ್ ಬೆರ್ನೆಟ್ ಅವರೊಂದಿಗೆ ಚಹಾ ಮತ್ತು ಬಿಸ್ಕಿಟ್ ಹಿರುತ್ತಿರುವ ವಿಡಿಯೋವೊದನ್ನು ಶೇರ್ ಮಾಡಿಕೊಂಡಿದ್ದಾರೆ.ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಚಿತ್ರವು ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ ಬಾರು ಅವರ ಪುಸ್ತಕದ ಆಧಾರದ ಮೇಲೆ ಇದನ್ನು ನಿರ್ಮಿಸಲಾಗಿದೆ. ಇದನ್ನು ಯಶಸ್ವಿ ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶಿಸಿದ್ದಾರೆ.ಈ ಚಿತ್ರವೂ ಡಿಸೆಂಬರ್ 21 ರಂದು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.