ʼಐಶ್ವರ್ಯ ರೈ ನನ್ನ ಪತ್ನಿʼ.. ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯವೇ ಖ್ಯಾತ ನಟನ ಸೆನ್ಸೇಷನಲ್‌ ಕಾಮೆಂಟ್‌! ವಿಡಿಯೋ ವೈರಲ್!!‌

hugh jackman flirted with aishwarya rai: ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಸೌಂದರ್ಯದಿಂದ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.. ಇದೀಗ ನಟಿ ಡಿವೋರ್ಸ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Written by - Savita M B | Last Updated : Aug 6, 2024, 04:33 PM IST
  • ನಟಿ ಐಶ್ವರ್ಯಾ ರೈ ಮತ್ತು ನಟ ಹಗ್ ಜಾಕ್‌ಮನ್ ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗುತ್ತಿದೆ.
  • ಇವರು ನನ್ನ ಹೆಂಡತಿಯಾಗುತ್ತಾಳೆ ಎಂದು ನಾನು ಭಾವಿಸಿದೆ
ʼಐಶ್ವರ್ಯ ರೈ ನನ್ನ ಪತ್ನಿʼ.. ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯವೇ ಖ್ಯಾತ ನಟನ ಸೆನ್ಸೇಷನಲ್‌ ಕಾಮೆಂಟ್‌! ವಿಡಿಯೋ ವೈರಲ್!!‌  title=

aishwarya rai: ನಟಿ ಐಶ್ವರ್ಯಾ ರೈ ಮತ್ತು ನಟ ಹಗ್ ಜಾಕ್‌ಮನ್ ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಈ ವೀಡಿಯೊ 2011 ರಲ್ಲಿ, ಆಸ್ಟ್ರೇಲಿಯಾದ ನಟ ಹಗ್ ಜಾಕ್‌ಮನ್ ತನ್ನ ಮಾಜಿ ಪತ್ನಿ ಡೆಬೊರಾ-ಲೀ ಫರ್ನೆಸ್ ಅವರೊಂದಿಗೆ ಭಾರತಕ್ಕೆ ಬಂದಾಗಿನ ವಿಡಿಯೋ.. ಸದ್ಯ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಡಿವೋರ್ಸ್ ವದಂತಿ ಮಧ್ಯೆ ಇದು ಎಲ್ಲರಿಗೂ ಶಾಕ್‌ ನೀಡಿದೆ.. 

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಐಶ್ವರ್ಯಾ ರೈ ಕೂಡ ಉಪಸ್ಥಿತರಿದ್ದರು. ಗಣೇಶನ ವಿಗ್ರಹವನ್ನು ತೆಗೆದ ತಕ್ಷಣ ಹಗ್ ಜಾಕ್ಮನ್ ಅವರು ತಮ್ಮ ಪತ್ನಿಯ ಮುಂದೆ ಮೊದಲು ಐಶ್ವರ್ಯ ರೈ ಅವರಿಗೆ ಧನ್ಯವಾದ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. 

 
 
 
 

 
 
 
 
 
 
 
 
 
 
 

A post shared by Jackman's admirers (@hugh_fan_tasticworld)

ಇದನ್ನೂ ಓದಿ-ತಿಂಗಳಿಗೆ 60000000 ರೂ. ಗಳಿಸುವ ಈ ಸುಂದರಿಗೆ ಬಾಯ್‌ ಫ್ರೇಂಡ್‌ ಬೇಕಂತೆ..! ಟ್ರೈ ಮಾಡಿ ಬಾಯ್ಸ್‌

ಬಳಿಕ ಮಾತನಾಡಿದ  ಹಗ್ ಜಾಕ್‌ಮನ್ "ಧನ್ಯವಾದ ಐಶ್..‌ ಪ್ರಪಂಚದ ಅತ್ಯಂತ ಸುಂದರ ನಟಿಯನ್ನು ನಾನು ಪರಿಚಯಿಸುತ್ತೇನೆ.. ಇವರು ನನ್ನ ಹೆಂಡತಿಯಾಗುತ್ತಾಳೆ ಎಂದು ನಾನು ಭಾವಿಸಿದೆ.. ಸುಮ್ಮನೇ ಹೇಳಿದೆ.. ನಾನು ತುಂಬಾ ಬುದ್ಧಿವಂತ ವ್ಯಕ್ತಿ ಮತ್ತು ನನ್ನ ಹೆಂಡತಿ ಮುಂದಿನ ಸಾಲಿನಲ್ಲಿ ಕುಳಿತಿದ್ದಾಳೆ.. ನನಗೆ ಭಾರತಕ್ಕೆ ಬರುವುದು ಒಂದು ಕನಸಾಗಿತ್ತು.. ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕಾಗಿ ಎಲ್ಲರಿಗೂ ತುಂಬಾ ಧನ್ಯವಾದಗಳು" ಎಂದು ನಟ ತಮಾಷೆ ಮಾಡಿ ಧನ್ಯವಾದ ಹೇಳಿದ್ದಾರೆ.. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. 

ಅಭಿಷೇಕ್ ಬಚ್ಚನ್ ತಮ್ಮ ಇಡೀ ಕುಟುಂಬದೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು.. ಮಗಳು ಆರಾಧ್ಯ ಬಚ್ಚನ್ ಜೊತೆ ಐಶ್ವರ್ಯಾ ರೈ ಒಬ್ಬರೇ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಮತ್ತು ಅಭಿಷೇಕ್ ಒಮ್ಮೆಯೂ ಮಾಧ್ಯಮದ ಮುಂದೆ ಒಟ್ಟಿಗೆ ಪೋಸ್ ಕೊಡಲಿಲ್ಲ.. ಅದರ ನಂತರ ಅವರ ಪ್ರತ್ಯೇಕತೆಯ ವದಂತಿಗಳು ನಿರಂತರವಾಗಿ ಮುಖ್ಯಾಂಶಗಳಲ್ಲಿವೆ. ಆದರೆ, ಇದುವರೆಗೂ ದಂಪತಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ-ಒಂದೇ ವರ್ಷದಲ್ಲಿ 14 ಹಿಟ್‌ ಸಿನಿಮಾ! ಅಮಿತಾಬ್‌ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News