ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರ ಮಾಜಿ ಪತ್ನಿ ಸುಚಿತ್ರಾ ಕೃಷ್ಣಮೂರ್ತಿ ಅವರು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಒಂದೊಮ್ಮೆ ಮದುವೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ತನ್ನ ಮಾತನ್ನು ಕೇಳಿ ವರ್ಮಾ ಅವರು ಭಯಭೀತರಾಗಿದ್ದರು ಮತ್ತು ಅವರು ತನ್ನನ್ನು ಅವರ ಕಚೇರಿಗೆ ಬುಲಾವ್ ಕಳುಹಿಸಿದ್ದರು ಎಂದಿದ್ದಾರೆ. ಜೊತೆಗೆ ತಾನು ಮಾಡಿರುವ ತಮಾಷೆಯನ್ನು ರಾಮ್ ಗೋಪಾಲ್ ವರ್ಮಾ ಅವರು ಗಂಭೀರವಾಗಿ ತೆಗೆದುಕೊಂಡಿದ್ದರು. ಅವರಿಗೆ ತಮಾಷೆ ಅರ್ಥವಾಗಿರಲಿಲ್ಲ ಎಂದು ಸುಚಿತ್ರಾ ಹೇಳಿದ್ದಾರೆ.
ಸುಚಿತ್ರಾ ತನ್ನ ಆಟೋಬಯೋಗ್ರಫಿಯಾಗಿರುವ 'ಡ್ರಾಮಾ ಕ್ವೀನ್'ನಲ್ಲಿ ರಾಮ್ ಗೋಪಾಲ್ ವರ್ಮಾ ಅವರಿಗೆ ತಾವು ಕಳುಹಿಸಿದ ಆ ಸಂದೇಶದ ಕುರಿತು ಉಲ್ಲೇಖಿಸಿದ್ದಾರೆ. ಆ ಸಂದೇಶ ಇಂತಿದೆ, "ನೀನು ನನ್ನನ್ನು ಮದುವೆಯಾಗುವಿಯಾ?". ಸುಚಿತ್ರಾ ಹಾಗೂ ಆರ್ಜಿವಿ 'ಮೈ ವೈಫ್ಸ್ ಮರ್ಡರ್' ಹಾಗೂ 'ರಣ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ತಾವು ಬರೆದ ಪುಸ್ತಕದಲ್ಲಿ ಅದು ಕೇವಲ ತಮಾಷೆಯಾಗಿತ್ತು ಎಂಬುದನ್ನು ಮಾತ್ರ ಸುಚಿತ್ರಾ ಬರೆದುಕೊಂಡಿಲ್ಲ.
ತನ್ನ ಪ್ರಸ್ತಾವನೆಯನ್ನು ಆರ್ಜಿವಿ ತಳ್ಳಿಹಾಕಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ. ಅಷ್ಟೇ ಅಲ್ಲ ತಮ್ಮ ಪ್ರಸ್ತಾವನೆಗೆ ಉತ್ತರ ನೀಡಿದ್ದ ಆರ್ಜಿವಿ, ನಾನು ಮಹಿಳೆಯರನ್ನು ಕೇವಲ ದೈಹಿಕ ಇಂಟಿಮೇಸಿಗಾಗಿ ಬಳಸುತ್ತೇನೆ. ನನಗೆ ಕೇವಲ ಅವರ ದೇಹ ಇಷ್ಟವಾಗುತ್ತದೆ ಮೆದುಳಲ್ಲ ಎಂದಿದ್ದರು. 'ನನ್ನ ಅಭಿಪ್ರಾಯದಲ್ಲಿ ಮಹಿಳೆಯರನ್ನು ಕೇವಲ ನೋಡಬೇಕು, ಕೆಳಬಾರದು' ಎಂದು ಆರ್ಜಿವಿ ಹೇಳಿದ್ದರಂತೆ.
ಇದನ್ನೂ ಓದಿ-Akshay Kumar ಪಂಕಜ್ ತ್ರಿಪಾಠಿ ಅಭಿನಯದ ಓ ಮೈ ಗಾಡ್ 2 ಚಿತ್ರ ಬಿಡುಗಡೆಗೆ ಸೆನ್ಸಾರ್ ತಡೆ!
ನಿಜಕ್ಕೂ ರಾಮ್ ಗೋಪಾಲ್ ವರ್ಮಾ ಅವರನ್ನು ವರಿಸಲು ಬಯಸಿದ್ದಳೆ ಸುಚಿತ್ರಾ?
ಆದರೆ ಬಾಲೀವುಡ್ ಸುದ್ದಿಗಳನ್ನು ಬಿತ್ತರಿಸುವ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಸುಚಿತ್ರಾ , ಅದು ಕೇವಲ ತಮಾಷೆಯಾಗಿತ್ತು ಎಂದಿದ್ದಾರೆ. "ಘಟನೆ ನಡೆದಿತ್ತು ಮತ್ತು ಕೇವಲ ತಮಾಷೆಯಾಗಿತ್ತು. ರಾಮ್ ಗೋಪಾಲ್ ವರ್ಮಾ ಅವರ ಜೊತೆಗೆ ಯಾರು ಮದುವೆಯಾಗಲು ಹೇಗೆ ಯೋಚಿಸಲು ಸಾಧ್ಯ? ಅವರು ಓರ್ವ ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಆದರೆ, ಅವರು ನನ್ನ ಸಂದೇಶವನ್ನು ಓದಿ ಹೆದರಿದ್ದರು ಎಂಬುದು ಇನ್ನೂ ತಮಾಷೆಯ ಸಂಗತಿಯಾಗಿದೆ" ಎಂದು ಸುಚಿತ್ರಾ ಹೇಳಿದ್ದಾರೆ.
ಇದನ್ನೂ ಓದಿ-ದೀಪಿಕಾ-ಅಲಿಯಾ ಅಲ್ಲ ಈಕೆಯೇ ನೋಡಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ! ನಿಮಿಷಕ್ಕೆ ಚಾರ್ಜ್ ಎಷ್ಟು ಗೊತ್ತಾ?
ಇದಕ್ಕೂ ಮುಂದುವರೆದು ಮಾತನಾಡಿರುವ ಸುಚಿತ್ರಾ, "ಅವರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರು. ಅವರು ನನ್ನನ್ನು ತಮ್ಮ ಕಚೇರಿಗೆ ಬರಮಾಡಿಕೊಂಡು ನಾನು ಎಷ್ಟು ಒಳ್ಳೆಯವಳಾಗಿದ್ದೇನೆ ಮತ್ತು ಅವರು ಎಷ್ಟೊಂದು ಭಯಾನಕ ವ್ಯಕ್ತಿಯಾಗಿದ್ದಾರೆ ಎಂಬುದನ್ನೂ ಹೇಳಿದ್ದರು. ಅಷ್ಟೇ ಅಲ್ಲ ಇಂತಹ ಸಂಗತಿಗಳ ಕುರಿತು ನಾನು ಯೋಚಿಸಬಾರದು ಎಂದಿದ್ದರು. ಅವರ ಮಾತಿಗೆ ಪ್ರತಿಕ್ರಿಯಿಸಿದ್ದ ಸುಚಿತ್ರಾ, 'ರಾಮು ಇದು ಕೇವಲ ತಮಾಷೆಯಾಗಿತ್ತು' ಎಂದಿದ್ದಾರಂತೆ. ಸುಚಿತ್ರಾ ಚಿತ್ರೋದ್ಯಮದಲ್ಲಿ ಮೊದಲು ಓರ್ವ ಗಾಯಕಿಯಾಗಿ ಮತ್ತು ನಂತರದ ದಿನಗಳಲ್ಲಿ ಓರ್ವ ನಟಿಯಾಗಿ ಕೆಲಸ ಮಾಡಿದ್ದಾರೆ. 1999 ರಲ್ಲಿ ಅವರು ಶೇಖರ್ ಕಪೂರ್ ಅವರ ಜೊತೆಗೆ ವಿವಾಹವಾಗಿದ್ದರು. 2007 ರವರೆಗೆ ದಂಪತಿಗಳಾಗಿಯೇ ಇದ್ದರೂ ಮತ್ತು ನಂತರದ ದಿನಗಳಲ್ಲಿ ಪರಸ್ಪರ ದೂರಾಗಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.