Jacqueline Fernandez: ಇಡಿ ಮುಂದೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್

Jacqueline Fernandez: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

Edited by - Zee Kannada News Desk | Last Updated : Dec 8, 2021, 12:47 PM IST
  • ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ ₹200 ಕೋಟಿ ವಂಚನೆ ಪ್ರಕರಣ
  • ಇಡಿ ಮುಂದೆ ಹಾಜರಾದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್
Jacqueline Fernandez: ಇಡಿ ಮುಂದೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್  title=
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್

ಮುಂಬೈ (ಮಹಾರಾಷ್ಟ್ರ): ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರನ್ನು ಒಳಗೊಂಡ ₹200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜತೆ  ಜಾಕ್ವೆಲಿನ್ ಫೋಟೋ ವೈರಲ್ ಆದ ನಂತರ ಅವರಿಗೆ ಸಮನ್ಸ್ ನೀಡಲಾಗಿತ್ತು. ಚಂದ್ರಶೇಖರ್ ಅವರು ನಡೆಸುತ್ತಿದ್ದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ವಿಚಾರಣೆ ಮಹತ್ವದ್ದಾಗಿರುವುದರಿಂದ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಗೆ ಹಾಜರಾಗುವಂತೆ ಇಡಿ (ED) ಫರ್ನಾಂಡೀಸ್ ಅವರಿಗೆ ಈ ಮೊದಲು ತಿಳಿಸಿತ್ತು.

ಇದನ್ನೂ ಓದಿ: Katrina-Vicky Wedding: ಕತ್ರಿನಾ -ವಿಕ್ಕಿ ವಿವಾಹದ ಭೋಜನದಲ್ಲಿ ಏನಿರಲಿದೆ ವಿಶೇಷ, ಕೇಕ್ ತಯಾರಿಸಲು ಇಟಲಿಯಿಂದ ಬಂದಿರುವ ಶೆಫ್

ಆರೋಪಪಟ್ಟಿಯ ಪ್ರಕಾರ, ಶ್ರೀಲಂಕಾದ ನಟ ಸುಕೇಶ್‌ನಿಂದ ಹಲವಾರು ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ಜಾಕ್ವೆಲಿನ್‌ಗೆ ₹52 ಲಕ್ಷ ಮೌಲ್ಯದ ಕುದುರೆ ಹಾಗೂ ₹9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕನ್ನು ಉಡುಗೊರೆಯಾಗಿ ನೀಡಿದ್ದಾಗಿ ಚಂದ್ರಶೇಖರ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಜಾರಿ ನಿರ್ದೇಶನಾಲಯದ (Enforcement Directorate) ಪ್ರಕರಣದಲ್ಲಿ ಲುಕ್ ಔಟ್ ಸುತ್ತೋಲೆಯಂತೆ ಫರ್ನಾಂಡಿಸ್ ಅವರನ್ನು ಸಂಜೆ 5.25 ರ ಸುಮಾರಿಗೆ ಏರ್ ಇಂಡಿಯಾ ವಿಮಾನದಿಂದ ಆಫ್‌ಲೋಡ್ ಮಾಡಿದ ಒಂದು ದಿನದ ನಂತರ ಇಡಿ ಈ ಕ್ರಮ ಕೈಗೊಂಡಿದೆ.

ಅವರು ಭಾನುವಾರ ಸಂಜೆ 5.5O ಕ್ಕೆ ನಿಗದಿತ AI-985 ವಿಮಾನದ ಮೂಲಕ ಮಸ್ಕತ್‌ಗೆ ತೆರಳಬೇಕಿತ್ತು. ಫರ್ನಾಂಡೀಸ್‌ಗೆ ಭಾರತವನ್ನು ತೊರೆಯಲು ಅನುಮತಿ ನೀಡಬಾರದು ಎಂಬ ನಿರ್ದೇಶನಗಳೊಂದಿಗೆ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಲಾಗಿದೆ.

ಇದಕ್ಕೂ ಮೊದಲು, ಆಗಸ್ಟ್‌ನಲ್ಲಿ ಇಡಿ ಇಲ್ಲಿ ನಟಿಯನ್ನು ಪ್ರಶ್ನಿಸಿದೆ. ಫೆಡರಲ್ ಏಜೆನ್ಸಿಯು ಆಗಸ್ಟ್ ಅಂತ್ಯದಲ್ಲಿ ಫರ್ನಾಂಡಿಸ್ ಅವರ ಹೇಳಿಕೆಯನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಯಲ್ಲಿ ದಾಖಲಿಸಿದೆ.

ಇದನ್ನೂ ಓದಿ: Disha Patani: ದಿಶಾ ಪಟಾನಿಯ ಆ ಸ್ಪೆಷಲ್ ಫ್ರೆಂಡ್ ನೋಡಿ ಟೈಗರ್ ಶ್ರಾಫ್ ಕೂಡ ಅಸೂಯೆಪಡ್ತಾರಂತೆ!

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ನಟಿ ನೋರಾ ಫತೇಹಿ ಅವರನ್ನು ಗುರುವಾರ ಎರಡನೇ ಬಾರಿಗೆ ಇಡಿ ಪ್ರಶ್ನಿಸಿದೆ. ಈ ಪ್ರಕರಣಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರುವ ವಿವಿಧ ಜನರನ್ನು ಇಡಿ ಪರಿಶೀಲಿಸುತ್ತಿದೆ. 

ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರಿಗೆ ₹200 ಕೋಟಿ ವಂಚಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು ಆಗಸ್ಟ್‌ನಲ್ಲಿ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. 

Trending News