ನವರಸನಾಯಕ ಜಗ್ಗೇಶ್ ತನ್ನ ಪ್ರೀತಿಯ ಹುಡುಗಿಯನ್ನ ಮೊದಲು ನೋಡಿದಾಗ ಆಕೆಗೆ ಜಸ್ಟ್ 14ವರ್ಷ..!

ಮದುವೆ ಆಗುವುದು ದೊಡ್ಡದಲ್ಲ ಎನ್ನುವುದನ್ನು ಪ್ರತಿ ಬಾರಿಯೂ ಜಗ್ಗೇಶ್ ಹೇಳುತ್ತಾರೆ. ಪ್ರೀತಿಸಿದ ಹುಡುಗಿಯನ್ನ ಮನೆ ತುಂಬಿಸಲು ಅಂದು ಜಗ್ಗೇಶ್ ಅವರು ಕುಟುಂಬದ ವ್ಯಾಜ್ಯ, ಪೋಲೀಸ್ ಸ್ಟೇಷನ್, ನಂತರ ಸುಪ್ರೀಂ ಕೋರ್ಟ್‌ ವರೆಗೂ ಹೋಗಿದ್ದರು.

Written by - YASHODHA POOJARI | Last Updated : May 31, 2023, 11:40 AM IST
  • ನವರಸನಾಯಕ ಜಗ್ಗೇಶ್ ಜೀವನವೇ ರೋಚಕ.
  • ಪತ್ನಿಯನ್ನ ಹೂವಿನಂತೆ ಕಾಪಾಡಿಕೊಂಡು ಬಂದಿದ್ದಾರೆ ಜಗ್ಗೇಶ್
  • ಈಕೆ ನನ್ನ ಜೀವದ ಮತ್ತು ಜೀವನದ ಒಡತಿ ಎನ್ನುತ್ತಾರೆ ಜಗ್ಗೇಶ್
ನವರಸನಾಯಕ ಜಗ್ಗೇಶ್ ತನ್ನ ಪ್ರೀತಿಯ ಹುಡುಗಿಯನ್ನ ಮೊದಲು ನೋಡಿದಾಗ ಆಕೆಗೆ ಜಸ್ಟ್ 14ವರ್ಷ..! title=

ಬೆಂಗಳೂರು : ನವರಸನಾಯಕ ಜಗ್ಗೇಶ್ ಜೀವನವೇ ರೋಚಕ. ತಮ್ಮ ಪತ್ನಿ ಮತ್ತು ಮಕ್ಕಳು, ಮೊಮ್ಮಕ್ಕಳ ಜೊತೆ ಅದ್ಭುತವಾಗಿ  ಬದುಕು ಸಾಗಿಸುತ್ತಿದ್ದಾರೆ. ಸಿನಿಮಾ, ರಾಜಕೀಯ ಅಂತ ಸದಾ ಬ್ಯುಸಿ ಇರೋ ಜಗ್ಗೇಶ್, ಫ್ಯಾಮಿಲಿಗೂ ಅಷ್ಟೇ ಟೈಮ್ ಕೊಡುತ್ತಾರೆ. ಜಗ್ಗೇಶ್ ಅವರ ಪತ್ನಿ ನಿಮಗೆಲ್ಲ ಗೊತ್ತಿರೋ ಹಾಗೇ ಆರೋಗ್ಯದ ಬಗ್ಗೆ ,ಆಹಾರದ ಬಗ್ಗೆ ಜನರಿಗೆ ಒಳ್ಳೆ ಟಿಪ್ಸ್ ಕೊಡೋ ಮೂಲಕ ಜನತೆಗೆ ತುಂಬಾ ಹತ್ತಿರವಾಗಿದ್ದಾರೆ. ಜಗ್ಗೇಶ್ ಅವರಿಗೆ ಅವರ ಪತ್ನಿ ಮೊದಲು ಕಣ್ಣಿಗೆ ಬಿದ್ದಿದ್ದು ಯಾವಾಗ ಅನ್ನೋ  ಮಾಹಿತಿ ಗೊತ್ತಾ..?  ನವರಸ ನಾಯಕ ಜಗ್ಗೇಶ್ ಅವರಿಗೆ ಪರಿಮಳ ಅವರು ಮೊದಲು ಕಾಣಿಸಿಕೊಂಡಿದ್ದು  9ನೇ ತರಗತಿಯಲ್ಲಿ. ಅಂದ್ರೆ ಆಗ ಅವರಿಗೆ 14ವರ್ಷ. ಅಂದೇ ಜಗ್ಗೇಶ್ ಅವರು ಈಕೆ ನನ್ನ ಜೀವದ ಮತ್ತು ಜೀವನದ ಒಡತಿ ಅಂತ ನಿರ್ಧಾರ ಮಾಡಿಯೇ ಬಿಟ್ಟರು.

ಅಲ್ಲಿಂದ ಇಲ್ಲಿಯವರೆಗೂ ಪತ್ನಿಯನ್ನ ಹೂವಿನಂತೆ ಕಾಪಾಡಿಕೊಂಡು ಬಂದಿದ್ದಾರೆ. ಮದುವೆ ಆಗುವುದು ದೊಡ್ಡದಲ್ಲ ಎನ್ನುವುದನ್ನು ಪ್ರತಿ ಬಾರಿಯೂ ಜಗ್ಗೇಶ್ ಹೇಳುತ್ತಾರೆ. ಸಂಸಾರ ತೂಗಿಸಿ ಸಪ್ತಪದಿ ತುಳಿದಾಗಿನಿಂದ ಕೊನೆಯವರೆಗೂ ಪ್ರೀತಿ, ನಂಬಿಕೆ, ವಿಶ್ವಾಸ, ಸಹನೆ, ತಾಳ್ಮೆ ಕಡಿಮೆಯಾಗದಂತೆ ಬಾಳಬೇಕು ಆಗ ಮಾತ್ರ ಸಂಬಂಧ ಶ್ರೇಷ್ಠವಾಗಿ ಉಳಿಯತ್ತದೆ ಅನ್ಯರಿಗೂ ಮಾದರಿಯಾಗುತ್ತದೆ ಅನ್ನೋದು  ಜಗ್ಗೇಶ್ ಮಾತು. . 

ಇದನ್ನೂ ಓದಿ : ವೈದ್ಯಕೀಯದ ಸಹಾಯದಿಂದ ನಾವು ಮಕ್ಕಳನ್ನು ಹೊಂದಬಹುದು ಅಂದಿದ್ಯಾಕೆ ನರೇಶ್ ಮತ್ತು ಪವಿತ್ರ ಲೋಕೇಶ್ ?

ಪ್ರೀತಿಸಿದ ಹುಡುಗಿಯನ್ನ ಮನೆ ತುಂಬಿಸಲು ಅಂದು ಜಗ್ಗೇಶ್ ಅವರು ಕುಟುಂಬದ ವ್ಯಾಜ್ಯ, ಪೋಲೀಸ್ ಸ್ಟೇಷನ್, ನಂತರ ಸುಪ್ರೀಂ ಕೋರ್ಟ್‌ ವರೆಗೂ ಹೋಗಿದ್ದರು. ಆರು ತಿಂಗಳು ದೆಹಲಿಯ ಕೋರ್ಟ್‌ಗೆ ಓಡಾಟ ಹೀಗೆ ನಾನಾ ರೀತಿಯ ಸಮಸ್ಯೆಯನ್ನ ಎದುರಿಸಬೇಕಾಯಿತು.

ಇದನ್ನೂ ಓದಿ : ಸಾಲು ಸಾಲು ಸೋಲು, ಅವಮಾನ, ಸವಾಲು ಇವೆಲ್ಲಾ ಮೆಟ್ಟಿ ನಿಂತ ನಟ ರಾಕ್ಷಸ ಡಾಲಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News